50000 ಪ್ಲಾಸ್ಟಿಕ್ ಚೀಲಗಳು, 48000 ಬಾಟಲಿಗಳ ಮರುಬಳಕೆ…! | ಪರಿಸರ ಸ್ನೇಹಿ ಯೋಜನೆ ರೂಪಿಸಿದ ಯುವಕ | ಪರಿಸರ ಸ್ನೇಹಿ ಜೊತೆಗೆ ಟ್ರೆಂಡಿಯಾಗಿದೆ ಈ ಐಡಿಯಾ |

March 6, 2023
2:44 PM

ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಅದರಿಂದ ಏನು ಪ್ರಯೋಜನಾ..? ನಮಗೆ ಎಷ್ಟು ಅನುಕೂಲಕರವಾಗಿದೆ..? ಹಾಗೆ ಇದರಿಂದ ಪರಿಸರಕ್ಕೆ ಏನಾದರು ತೊಂದರೆ ಅಥವಾ ಲಾಭ ಇದೆಯೇ..? ಅನ್ನೋ ಯೋಚನೆಗಳು ಹಾಗೆ ಬಂದು ಹೋಗುತ್ತವೆ. ಆದರೆ ಇಲ್ಲೊಬ್ಬ ಯುವಕ ಮಾಡಿರೂ ಹೊಸ ಆವಿಷ್ಕಾರ ನಿಜಕ್ಕೂ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಪರಿಸರ ಉಳಿಸುವ ಯೋಜನೆಯಾಗಿದೆ.

Advertisement

ಆಶಯ್ ಭಾವೆ ಎಂಬ 24 ವರ್ಷದ ನವ ತರುಣ,  ‘ಥೇಲಿ’ ಎಂಬ ಪರಿಸರ ಸ್ನೇಹಿ ಶೂ ಬ್ರಾಂಡ್ ಅನ್ನು ಆರಂಭಿಸಿದ್ದಾರೆ. ಆಶಯ್, ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು ಮತ್ತು ರಬ್ಬರ್ ಬಳಸಿ  ಮಾಡಿದಂತಹ ಚರ್ಮದ ರೀತಿಯ ಬಟ್ಟೆಯಿಂದ ಶೂಗಳನ್ನು ಕೈಯಿಂದ ತಯಾರಿಸಿ ಅಭಿವೃದ್ಧಿಪಡಿಸಿದ್ದಾರೆ.  ಇದಕ್ಕಾಗಿ 50000 ಪ್ಲಾಸ್ಟಿಕ್ ಚೀಲಗಳು, 48000 ಬಾಟಲಿಗಳನ್ನು ಮರುಬಳಕೆ ಮಾಡಲಾಗಿದೆ.

ಆಶಯ್ ಭಾವೆ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ  ಓದುತ್ತಿರುವ ವಿದ್ಯಾರ್ಥಿ.  2017 ರಲ್ಲಿ, ಆತನಿಗೆ ಮನಸ್ಸಿನಲ್ಲಿ ಒಂದು ಕಲ್ಪನೆ ಬೇರೂರಿತು. ಪ್ಲಾಸ್ಟಿಕ್ ಚೀಲಗಳು ಮತ್ತು ಬಾಟಲಿಗಳನ್ನು ಉಪಯೋಗಿಸಿ ಶೂಗಳನ್ನು ವೈಯಕ್ತಿಕವಾಗಿ ವಿನ್ಯಾಸ ಗೊಳಿಸಿ ಸ್ನೀಕರ್ಸ್ ಅನ್ನು ನೈತಿಕ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು.

“ಪ್ರತಿ ವರ್ಷ 12 ಮಿಲಿಯನ್ ಬ್ಯಾರೆಲ್ ತೈಲ ಬಳಕೆಯಿಂದ “100 ಶತಕೋಟಿ ಪ್ಲಾಸ್ಟಿಕ್ ಚೀಲಗಳ ಬಳಕೆ ಮಾಡಲಾಗುತ್ತಿದೆ. ಇದರಿಂದ ವಾರ್ಷಿಕವಾಗಿ 100,000 ಸಮುದ್ರ ಪ್ರಾಣಿಗಳ ಮಾರಣ ಹೋಮ ನಡೆಯುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವುದೇ ನನ್ನ ಮೊದಲ ಗುರಿ ಎಂದು ಆಶಯ್ ದೃಢ ನಿರ್ಧಾರ ತೆಗೆದುಕೊಂಡ.

Advertisement

Advertisement

ಆಶಯ್ ಮುಂದಿನ ಎರಡು ವರ್ಷಗಳ ಕಾಲ ಪ್ಲಾಸ್ಟಿಕ್ ತ್ಯಾಜ್ಯದಿಂದ ಚರ್ಮದಂತಹ ಬಟ್ಟೆಯನ್ನು ಸಂಶೋಧಿಸಲು ಮತ್ತು ವಿನ್ಯಾಸಗೊಳಿಸಲು ಸಮಯ ತೆಗೆದುಕೊಂಡರು. ನಂತರ ಆಶಯ್ ಮುಂಬೈನಲ್ಲಿ ಸ್ಥಳೀಯ ಶೂ ರಿಪೇರಿ ಮಾಡುವವರನ್ನು ಸಂಪರ್ಕಿಸಿ ಒರಟು ಮಾದರಿಯನ್ನು ರಚಿಸಲು ಮತ್ತು ಸಾಂಪ್ರದಾಯಿಕ ಚರ್ಮದ ಬದಲಿಗೆ ಈ ಹೊಸದಾಗಿ ಅಭಿವೃದ್ಧಿಪಡಿಸಿದ ಬಟ್ಟೆಯನ್ನು ಬಳಸುವ ಪ್ರಾಯೋಗಿಕತೆಯನ್ನು ತಿಳಿದುಕೊಂಡರು.‌


ಅವರ ಶ್ರಮ, ಪರೀಕ್ಷೆ ಯಶಸ್ವಿಯಾಯಿತು. ಸಿದ್ಧಪಡಿಸಿದ ಕೃತಕ ಚರ್ಮವು ಮೂಲ ಮಾದರಿಯು ಲೆದರ್ ನಂತೆ ಕಾರ್ಯನಿರ್ವಹಿಸಿತು. ಶೂ ಸಾಂಪ್ರದಾಯಿಕ ಚರ್ಮದ ಸ್ನೀಕರ್‌ನಂತೆ ಕಾಣಿಸಿತು ಎಂದು ಆಶಯ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾನೆ.

ಅವರ ಈ ಪರಿಶ್ರಮಕ್ಕೆ ಮೂರ್ತರೂಪ ಕೊಟ್ಟು 2021 ರಲ್ಲಿ, ಆಶಯ್ ತನ್ನ ಬ್ರಾಂಡ್ ‘ಥೇಲಿ’ ಅನ್ನು ಬಿಡುಗಡೆ ಮಾಡಿದರು. ಥೇಲಿ ಅಂದ್ರೆ ಹಿಂದಿಯಲ್ಲಿ ಪ್ಲಾಸ್ಟಿಕ್ ಚೀಲ ಅಂತ ಅರ್ಥ. ತ್ಯಾಜ್ಯ ನಿರ್ವಹಣಾ ಘಟಕದಿಂದ ಬೇಡದ ಪ್ಲಾಸ್ಟಿಕ್ ಚೀಲಗಳನ್ನು ತರಲಾಗುತ್ತದೆ. ನಂತರ ಅದನ್ನು ಸ್ವಚ್ಛ ಮಾಡಿ, ಹಾಳೆಗಳ ರೀತಿಯಲ್ಲಿ ತುಂಡು ಮಾಡಲಾಗುತ್ತದೆ ನಂತರ ಶಾಖ ಮತ್ತು ಒತ್ತಡದಿಂದ ಅದನ್ನು ಬೆಸೆಯಲಾಗುತ್ತದೆ.

Advertisement

ಒಂದು ಜೋಡಿ ಶೂಗಳನ್ನು ತಯಾರಿಸಲು 10 ಪ್ಲಾಸ್ಟಿಕ್ ಚೀಲಗಳು ಮತ್ತು 15 ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಲಾಗುತ್ತದೆ.  ಈ ವಿಶೇಷವಾದ ಶೂ ನ ಒಂದು  ಜೋಡಿಯ ಬೆಲೆ 8,000 ರೂಪಾಯಿ.

ಆಶಯ್ ಈವರೆಗೆ ತಿರಸ್ಕರಿಸಿದ 50,000 ಕ್ಕೂ ಹೆಚ್ಚು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಹಾಗೂ 48,000 ಪ್ಲಾಸ್ಟಿಕ್ ಬಾಟಲಿಗಳನ್ನು ನವೀಕರಿಸಿದ್ದಾರೆ. ಒಂದು ವೇಳೆ ಪ್ಲಾಸ್ಟಿಕ್ ಮತ್ತು ಬಾಟಲಿಗಳು ಸಾಕಾಗದೆ ಇದ್ರೆ  ಗ್ರಾಹಕರಿಗೆ ಪ್ಲಾಸ್ಟಿಕ್ ಹಾಗೂ ಬಾಟಲಿ ತ್ಯಾಜ್ಯಗಳನ್ನು ತಮ್ಮ ಕಂಪೆನಿಗೆ ಕೊಟ್ಟು ಶೂ ಖರೀದಿಯಲ್ಲಿ ರಿಯಾಯಿತಿ ದರವನ್ನು ನೀಡಲಾಗುತ್ತದೆ.

ಅಶಯ್ ತನ್ನ ಮಾರುಕಟ್ಟೆಯನ್ನು ಭಾರತದಲ್ಲಿ ಮಾತ್ರವಲ್ಲದೆ ದುಬೈ, ಯುರೋಪ್, ಅಮೇರಿಕಾ ಮತ್ತು ಆಸ್ಟ್ರೇಲಿಯಾದಂತಹ ವಿದೇಶಿ ಮಾರುಕಟ್ಟೆಗಳಲ್ಲೂ ಈ ಶೂಗಳನ್ನು ಮಾರಾಟ ಮಾಡುವತ್ತ ಗಮನ ಹರಿಸಲು ಯೋಜಿಸುತ್ತಿದ್ದಾರೆ.

ಇಂತಹ ಸಂಶೋದನೆಗಳು ಯಾವತ್ತು ಪರಿಸರ ವಿನಾಶವನ್ನು ತಡೆಯುವಂತವು. ಈ ನಿಟ್ಟಿನಲ್ಲಿ ಇನ್ನಷ್ಟು ಯುವಕರು ಇಂತಹ ಪರಿಸರ ಸ್ನೇಹಿ ಸಂಶೋದನೆಗಳನ್ನು ಮಾಡಬೇಕು. ಸರ್ಕಾರ ಕೂಡ ಇತ್ತೀಚೆಗೆ ಮೇಕ್ ಇನ್ ಇಂಡಿಯಾ,  ಸ್ಟಾರ್ಟ್ ಅಪ್ ಗಳಿಗೆ ಭಾರಿ ಉತ್ತೇಜನಗಳನ್ನು ನೀಡುತ್ತಿದೆ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆನೆ ದಾಳಿಗೆ ಮೂರು ವರ್ಷದಲ್ಲಿ 129 ರೈತರು ಬಲಿ | ವಿಧಾನಪರಿಷತ್‌ನಲ್ಲಿ ಮಾಹಿತಿ ನೀಡಿದ ಅರಣ್ಯ ಇಲಾಖೆ
August 11, 2025
9:01 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-08-2025 | ಇಂದು ಸಾಮಾನ್ಯ ಮಳೆ | ಆ-12 ರಿಂದ ಆ-20 ರವರಗೆ ರಾಜ್ಯದ ವಿವಿದೆಡೆ ಮಳೆ |
August 11, 2025
1:47 PM
by: ಸಾಯಿಶೇಖರ್ ಕರಿಕಳ
ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ
August 11, 2025
8:43 AM
by: The Rural Mirror ಸುದ್ದಿಜಾಲ
ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್
August 11, 2025
7:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group