ಕಳೆದ ಕೆಲವು ದಿನಗಳಿಂದ ಮಳೆ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರದಿಂದ ಉತ್ತಮ ಮಳೆಯಾಗುತ್ತಿದೆ. ಗುರುವಾರ ಮಧ್ಯಾಹ್ನ ನಂತರ ಧಾರಾಕಾರ ಮಳೆಯಾಗಿದ್ದು ಬಳ್ಪದಲ್ಲಿ 2 ಗಂಟೆಯಲ್ಲಿ 245 ಮಿಮೀ ಮಳೆಯಾಗಿದೆ.ಪ್ರವಾಹದ ಮಾದರಿಯಲ್ಲಿ ನೀರು ಹರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭದ ಮಳೆ ಉತ್ತಮವಾಗಿದೆ. ಗುರುವಾರ ಹವಾಮಾನ ಮುನ್ಸೂಚನೆ ಪ್ರಕಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇತ್ತು. ಸಂಜೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆಯಾಗಿದೆ. ಬಳ್ಪದಲ್ಲಿ 2 ಗಂಟೆಯಲ್ಲಿ 245 ಮಿಮೀ ಮಳೆಯಾಗಿದೆ. ಕಲ್ಲಾಜೆಯಲ್ಲಿ 115 ಮಿಮೀ, ಕಮಿಲದಲ್ಲಿ 120 ಮಿಮೀ ಮಳೆಯಾಗಿದೆ. ಮಳೆ ಮಾಹಿತಿ ಗುಂಪಿನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಬಾಳಿಲದ ಪಿಜಿಎಸ್‌ಎನ್ ಪ್ರಸಾದ್ ಅವರಿಂದ ಪ್ರೇರಿತಗೊಂಡು ಹಲವು ಮಂದಿ ಕೃಷಿಕರು ಮಳೆ ಅಳತೆ ಮಾಡಿ ದಾಖಲು ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಮಾಹಿತಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಯ ಮಳೆಯ ಮಾಹಿತಿ ಲಭ್ಯವಾಗುತ್ತದೆ.
ಮೇ ಅಂತ್ಯದ ವೇಳೆಗೆ ಭರ್ಜರಿ ಮಳೆ | ಬಳ್ಪದಲ್ಲಿ 245 ಮಿಮೀ ಸುರಿದ ಮಳೆ..! https://t.co/rNnuusUMHu #theruralmirror #rainalert #rainnews #rainforest
— theruralmirror (@ruralmirror) May 30, 2024
ದಕ್ಷಿಣ ಕನ್ನಡ ಜಿಲ್ಲೆಯ ಬಳ್ಪದಲ್ಲಿ 245 ಮಿಮೀ ಮಳೆ ಗುರುವಾರ ಮಧ್ಯಾಹ್ನ ನಂತರ ದಾಖಲಾಯಿತು.
245 mm of rain fall in balpa #rain #karnatakarains #ಮಳೆ #Monsoon2024 #Monsoon pic.twitter.com/q2zK4a9v4q— theruralmirror (@ruralmirror) May 30, 2024