ಮೇ ಅಂತ್ಯದ ವೇಳೆಗೆ ಭರ್ಜರಿ ಮಳೆ | ಬಳ್ಪದಲ್ಲಿ 245 ಮಿಮೀ ಸುರಿದ ಮಳೆ..!

May 30, 2024
7:58 PM
ಗುರುವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆಯಾಗಿದೆ. ಬಳ್ಪದಲ್ಲಿ 200 ಮಿಮೀಗಿಂತಲೂ ಅಧಿಕ ಮಳೆಯಾಗಿದೆ.

ಕಳೆದ ಕೆಲವು ದಿನಗಳಿಂದ ಮಳೆ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರದಿಂದ ಉತ್ತಮ ಮಳೆಯಾಗುತ್ತಿದೆ. ಗುರುವಾರ ಮಧ್ಯಾಹ್ನ ನಂತರ ಧಾರಾಕಾರ ಮಳೆಯಾಗಿದ್ದು ಬಳ್ಪದಲ್ಲಿ 2 ಗಂಟೆಯಲ್ಲಿ 245 ಮಿಮೀ ಮಳೆಯಾಗಿದೆ.ಪ್ರವಾಹದ ಮಾದರಿಯಲ್ಲಿ ನೀರು ಹರಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭದ ಮಳೆ ಉತ್ತಮವಾಗಿದೆ. ಗುರುವಾರ ಹವಾಮಾನ ಮುನ್ಸೂಚನೆ ಪ್ರಕಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇತ್ತು. ಸಂಜೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆಯಾಗಿದೆ. ಬಳ್ಪದಲ್ಲಿ 2 ಗಂಟೆಯಲ್ಲಿ 245 ಮಿಮೀ ಮಳೆಯಾಗಿದೆ. ಕಲ್ಲಾಜೆಯಲ್ಲಿ 115 ಮಿಮೀ, ಕಮಿಲದಲ್ಲಿ 120 ಮಿಮೀ ಮಳೆಯಾಗಿದೆ.  ಮಳೆ ಮಾಹಿತಿ ಗುಂಪಿನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಬಾಳಿಲದ ಪಿಜಿಎಸ್‌ಎನ್‌ ಪ್ರಸಾದ್‌ ಅವರಿಂದ ಪ್ರೇರಿತಗೊಂಡು ಹಲವು ಮಂದಿ ಕೃಷಿಕರು ಮಳೆ ಅಳತೆ ಮಾಡಿ ದಾಖಲು ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಮಾಹಿತಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಯ ಮಳೆಯ ಮಾಹಿತಿ ಲಭ್ಯವಾಗುತ್ತದೆ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?
September 29, 2026
11:09 PM
by: ದ ರೂರಲ್ ಮಿರರ್.ಕಾಂ
ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?
September 29, 2026
10:23 PM
by: ದ ರೂರಲ್ ಮಿರರ್.ಕಾಂ
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು
September 29, 2026
9:48 PM
by: ದ ರೂರಲ್ ಮಿರರ್.ಕಾಂ
ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?
September 29, 2026
12:08 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror