ರಾಜ್ಯದಲ್ಲಿ ಕಾಂಗ್ರೆಸ್ #Congress ಸರ್ಕಾರ ಅಧಿಕಾರಕ್ಕೆ ಬಂದು 2 ತಿಂಗಳು ಕಳೆದಿಯಷ್ಟೇ. ಈಗಾಗಲೇ ಶಾಸಕರ ಮದ್ಯೆ ವೈಮನಸ್ಸು ಉಂಟಾಗಿದೆ. ಇದರ ಜೊತೆಗೆ ವಿರೋಧ ಪಕ್ಷಗಳು ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್‌ನಲ್ಲೀಗ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಸಿದ್ದರಾಮಯ್ಯ ಬೆಂಬಲಿತ ಹಿರಿಯ ಶಾಸಕರಿಂದ ಪಕ್ಷದ ಸಚಿವರ ವಿರುದ್ಧವೇ ಸಿಎಂಗೆ ದೂರು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ‘ಕೈ’ ಪಾಳಯದಲ್ಲಿ ನಾನಾ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕಷ್ಟೆ ಒಗ್ಗಟ್ಟು, ಒಳಗೊಳಗೆ ಬಿಕ್ಕಟ್ಟು ಎಂಬ ಪರಿಸ್ಥಿತಿ ಇದೆಯಾ? ಮನೆಯೊಂದು ಮೂರು ಬಾಗಿಲು ಎಂಬಂತಾಯ್ತಾ ಕಾಂಗ್ರೆಸ್ ಸ್ಥಿತಿ? ಸಿದ್ದರಾಮಯ್ಯ ವರ್ಸಸ್ ಅದರ್ಸ್ ಫೈಟ್ ಸಹ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಒಳಗೊಳಗೆ ಕೆಲಸ ಶುರು ಮಾಡಿದೆಯಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಇದು ಸಚಿವ ಸ್ಥಾನ ವಂಚಿತ ಮಾಜಿ ಸಚಿವರು ಹಾಗೂ ಹಿರಿಯ ಶಾಸಕರ ಅಸಮಾಧಾನ ಎನ್ನಲಾಗುತ್ತಿದೆ. ಸಚಿವ ಸ್ಥಾನವೂ ಸಿಗಲಿಲ್ಲಾ. ಅತ್ತ ಹಿರಿತನಕ್ಕೆ ಗೌರವವೂ ಸಿಗುತ್ತಿಲ್ಲಾ. ಸಚಿವರಾಗಬೇಕಿದ್ದವರು ಅದನ್ನು ಕಳೆದುಕೊಂಡಿದ್ದೇವೆ. ಸಚಿವರಾದವರು ನಮ್ಮ ಹಿರಿತನಕ್ಕೆ ಗೌರವ ಕೊಡುತ್ತಿಲ್ಲಾ. ನಾವೇ ಆಗಬೇಕಿದ್ದ ಸಚಿವ ಸ್ಥಾನ ಇವರಿಗೆ ಸಿಕ್ಕಿದೆ. ನಮಗೆ ಗೌರವ ಸಿಗುತ್ತಿಲ್ಲಾ ಎನ್ನುವುದು ಅವರ ಅಸಮಾಧಾನ ಎಂದು ಮೂಲಗಳು ತಿಳಿಸಿವೆ. ನಮ್ಮ ಸ್ಥಾನದಲ್ಲಿ ಅವರು, ಅವರ ಸ್ಥಾನದಲ್ಲಿ ನಾವು. ನಮ್ಮ ಹಿರಿತನಕ್ಕೆ ಗೌರವ ಇಲ್ಲ. ಇದು ಸಚಿವ ಸ್ಥಾನ ವಂಚಿತ ಹಿರಿಯ ಶಾಸಕ ಹಾಗೂ ಮಾಜಿ ಸಚಿವರ ಅಸಮಾಧಾನದ ಮೂಲಗಳು ಮಾಹಿತಿ ನೀಡಿವೆ.
(Source :Online Network )