ಹಲವು ವರ್ಷಗಳಿಂದ ಕೋಲಾರ ನಗರದ ರಸ್ತೆಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗಿದ್ದ ಕಟ್ಟಡ ಮತ್ತು ಪಾರಂಪರಿಕ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯ ನಿರಂತರ ನಡೆಯುತ್ತಿದ್ದು ಈವರೆಗೆ ಸುಮಾರು 2 ಸಾವಿರದ 500 ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ ಎಂದು ನಗರಸಭೆ ಆಯುಕ್ತ ನವೀನ್‌ಚಂದ್ರ ತಿಳಿಸಿದ್ದಾರೆ. ನಗರ ಹೊರವಲಯದ ಬಂಗಾರಪೇಟೆ ಬೈಪಾಸ್‌ನಿಂದ ಬೇತಮಂಗಲ ಮೇಲ್ಸೇತುವೆ ವರೆಗಿನ ಮುಖ್ಯ ರಸ್ತೆಯ ಎರಡೂ ಬದಿ, ಮಣಿಘಟ್ಟ, ಸ್ಯಾನಿಟೋರಿಯಂ ಪ್ರದೇಶ, ನಗರ ಬಸ್ ನಿಲ್ದಾಣ ಹಿಂಭಾಗದಲ್ಲಿದ್ದ ಕಟ್ಟಡ ತ್ಯಾಜ್ಯ ಮತ್ತು ಪಾರಂಪರಿಕ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ ಎಂದರು. ಕಾರ್ಯಾಚರಣೆಯಲ್ಲಿ 16 ಟಿಪ್ಪರ್ ಹಾಗೂ 10 ಜೆಸಿಬಿ ಯಂತ್ರಗಳನ್ನು ಬಳಸಲಾಗಿತ್ತು. ತೆರವುಗೊಳಿಸಲಾದ ಕಟ್ಟಡ ತ್ಯಾಜ್ಯವನ್ನು ಅರಾಬಿಕೊತ್ತನೂರು ಸಮೀಪದ ಕೆಂದಟ್ಟಿಯ ಕ್ರಷರ್ ಹಳ್ಳಕ್ಕೆ ಸಾಗಿಸಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

