ನಿಲ್ಲದ ಮಾನವ-ಪ್ರಾಣಿ ಸಂಘರ್ಷ | ಕಳೆದ 6 ತಿಂಗಳಲ್ಲಿ 28 ಜನ ಬಲಿ | ಸಚಿವ ಈಶ್ವರ್​ ಖಂಡ್ರೆ |

September 5, 2023
3:23 PM
ವನ್ಯ ಪ್ರಾಣಿಗಳ ದಾಳಿಯಿಂದ ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ 11 ಜನ ಮೃತಪಟ್ಟಿದ್ದಾರೆ. ಈ ವರ್ಷದಲ್ಲಿ 28 ಜನ ಮೃತ ಪಟ್ಟಿದ್ದಾರೆ.

ಈ ಭೂಮಿ ಹುಟ್ಟಿದಾಗಿನಿಂದ ಮಾನವ ಹಾಗೂ ಪ್ರಾಣಿ ಸಂಘರ್ಷ ಇದ್ದದ್ದೇ.. ಆದರೆ ಕಾಡು ಮಾಯವಾಗಿ ನಾಡು ಬೆಳದಂತೆಲ್ಲಾ ವನ್ಯ ಜೀವಿಗಳ ದಾಳಿ ಜಾಸ್ತಿಯಾಗಿದೆ.  ವನ್ಯ ಪ್ರಾಣಿಗಳ ದಾಳಿಯಿಂದ ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ 11 ಜನ ಮೃತಪಟ್ಟಿದ್ದಾರೆ. ಈ ವರ್ಷದ ಮೊದಲಾರ್ಧದಲ್ಲಿ 28 ಜನ ಮೃತ ಪಟ್ಟಿದ್ದಾರೆ.

Advertisement

ಸೆ.04ರಂದು ಮತ್ತೊಂದು ದುರ್ಘಟನೆ ಸಂಭವಿಸಿದೆ. ಹುಲಿ #Tigher ದಾಳಿಯಿಂದ ಚರಣ್ ನಾಯ್ಕ್ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ವೆಂಕಟೇಶ್ ಆನೆ #Elephant ತುಳಿತಕ್ಕೆ ಬಲಿಯಾಗಿದ್ದಾರೆ. ಮಾನವ ಪ್ರಾಣಿ ಸಂಘರ್ಷದ ಬಗ್ಗೆ ಚರ್ಚೆ ಮಾಡಿದ್ದೇವೆ. ಜೀವಹಾನಿ ಆಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಆಗಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲಲಿ ಮಾತನಾಡಿದ ಅವರು, ಜನವಸತಿ ಪ್ರದೇಶಕ್ಕೆ ಆನೆ ಬರದಂತೆ ತಡೆಯಲು 640 ಕಿಮೀ ರೈಲ್ವೆ ಬ್ಯಾರಿಕೇಡ್ ಹಾಕಬೇಕಿದೆ. ಹೆಚ್ಚುವರಿ 300 ಕಿಮೀ ರೈಲ್ವೆ ಬ್ಯಾರಿಕೇಡ್ ಹಾಕಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಿದ್ದೇನೆ. 1000 ಕಿಮೀ ಸೋಲಾರ್ ತಂತಿ ಅಳವಡಿಸಲಾಗಿದೆ. 7 ಎಲಿಫೆಂಟಾ ಟಾಸ್ಕ್ ಫೋರ್ಸ್ ಗಳನ್ನು ರಚನೆ ಮಾಡಿದ್ದೇವೆ. ಇದರಲ್ಲಿ 38 ಜನ ನುರಿತವರು ಇರುತ್ತಾರೆ ಎಂದರು ತಿಳಿಸಿದರು.

ಇನ್ನು ವನ್ಯ ಪ್ರಾಣಿಗಳಿಂದ ಹೊರ ಗುತ್ತಿಗೆಯ ಇಬ್ಬರು ನೌಕರರು ಮೃತ ಪಟ್ಟಿದ್ದಾರೆ. ಮುಂದೆ ಸಮಸ್ಯೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಸಮೀಪ ಇರುವ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ವನ್ಯ ಜೀವಿಗಳ ದಾಳಿಯಿಂದ ಮೃತಪಟ್ಟವರಿಗೆ ಪರಿಹಾರ ನೀಡಿದ್ದೇವೆ. ಗಣಿಗಾರಿಕೆಯಿಂದಲೂ ವನ್ಯ ಜೀವಿಗಳು ಕಾಡಿಗೆ ಬರುತ್ತಿವೆ. ಕಾಡಿನಂಚಿನಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |
May 9, 2025
7:46 AM
by: ದ ರೂರಲ್ ಮಿರರ್.ಕಾಂ
ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ
May 8, 2025
8:46 PM
by: The Rural Mirror ಸುದ್ದಿಜಾಲ
ಕೇಂದ್ರದ ಬೆಂಬಲಕ್ಕಾಗಿ  ವಿಶೇಷ ಜಾಥಾ | ಪಕ್ಷಾತೀತವಾಗಿ  ಬೆಂಬಲ
May 8, 2025
8:32 PM
by: The Rural Mirror ಸುದ್ದಿಜಾಲ
ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು
May 8, 2025
7:21 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group