ಪೈಲಾರು: ಯುವಜನ ಸಂಯುಕ್ತ ಮಂಡಳಿ ಸುಳ್ಯ ,ಫ್ರೆಂಡ್ಸ್ ಕ್ವಬ್ ಪೈಲಾರು, ಶೌರ್ಯ ಯುವತಿ ಮಂಡಲ ಪೈಲಾರು, ಮಿತ್ರ ಕ್ರೀಡಾ ಮತ್ತು ಕಲಾ ಸಂಘ ರಾಗಿಯಡ್ಕ ಇದರ ಜಂಟಿ ಆಶ್ರಯದಲ್ಲಿ 3 ನೇ ಹಂತದ ವೃಕ್ಷಾರೋಹಣ ಕಾರ್ಯಕ್ರಮ ಪಂಜ ವಲಯ ರಕ್ಷಿತಾರಣ್ಯದ ರಾಗಿಯಡ್ಕ ಪರಿಸರದಲ್ಲಿ ನಡೆಯಿತು.
ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಶಂಕರ್ ಪೆರಾಜೆ ಗಿಡ ನೆಟ್ಟು ಕಾರ್ಯಕ್ರಮ ಕ್ಕೆ ಚಾಲನೆ ನೀಡಿ “ಪರಿಸರ ಸಂರಕ್ಷಣೆ ಗೆ ನಾವೆಲ್ಲ ಕಟಿಬದ್ಧರಾಗಬೇಕು.ಅನಾಹುತ ಸಂಭವಿಸುವ ನಾವೆಲ್ಲ ಎಚ್ಚೆತ್ತುಕೊಳ್ಳಬೇಕು” ಎಂದರು.
ಮಿತ್ರ ಕ್ರೀಡಾ ಸಂಘದ ಸ್ಥಾಪಕಾಧ್ಯಕ್ಷ ಯತೀಶ್ ಹಿರಿಯಡ್ಕ, ಅಧ್ಯಕ್ಷ ಪುನೀತ್ ಕೆರೆಗದ್ದೆ, ಶೌರ್ಯ ಯುವತಿ ಮಂಡಲದ ಅಧ್ಯಕ್ಷೆ ಯಕ್ಷಿತಾ ಪಾರೆ,ಕಾರ್ಯದರ್ಶಿ ಜಯಶ್ರೀ
ಕುಳ್ಳಂಪಾಡಿ,ಫ್ರೆಂಡ್ಸ್ ಕ್ಲಬ್ ನ ಕೋಶಾಧಿಕಾರಿ ಸಾತ್ವಿಕ್ ಮಡಪ್ಪಾಡಿ ಉಪಸ್ಥಿತರಿದ್ದರು.
ಯಕ್ಷಿತಾ ಪಾರೆ ಸ್ವಾಗತಿಸಿ ,ಯತೀಶ್ ಹಿರಿಯಡ್ಕ ಧನ್ಯವಾದಗೈದರು.ತೇಜಸ್ವಿ ಕಡಪಳ ನಿರೂಪಿಸಿದರು. ಸಾಗುವಾನಿ,ಪುನರ್ಪುಳಿ,ನೇರಳೆ,ಮಾಗುವಾನಿ,ರಾಮಪತ್ರೆ ಮುಂತಾದ ಬಹುಪಯೋಗಿ ಗಿಡಗಳನ್ನು ನೆಡಲಾಯಿತು.
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…
ರೈತರಿಗೆ ನ್ಯಾಯ ಕೊಡಲು MSPಗೆ ವೈಜ್ಞಾನಿಕ ಆಧಾರ ಅಗತ್ಯ ಎಂದು ಕೋಡಿಹಳ್ಳಿ ಚಂದ್ರಶೇಖರ್…
ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…