ಕೃಷಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಹೊಸ ಹೊಸ ತಂತ್ರಜ್ಞಾನ, ರೈತರ ಅನುಕೂಲಕ್ಕೆ ತಕ್ಕಂತ ಯೋಜನೆಗಳು, ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದೀಗ ಕೇಂದ್ರ ಸರ್ಕಾರವು ಗೋಧಿ ಹರಾಜಿನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ. ಕಳೆದ ವಾರ ಇ- ಹರಾಜಿನಲ್ಲಿ ಗೋಧಿ ಹರಾಜಿಗೆ ಮುಂದಾಗಿತ್ತು. ಈ ಪ್ರಕ್ರಿಯೆಯು ಎರಡನೇ ವಾರವೂ ಮುಂದುವರಿದಿದ್ದು, ಎರಡನೇ ಇ-ಹರಾಜಿನಲ್ಲಿ 3.85 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಭಾರತೀಯ ಆಹಾರ ನಿಗಮವು 901 ಕೋಟಿ ರೂ.ಗೆ ಮಾರಾಟ ಮಾಡಿದೆ.
ದೇಶದಲ್ಲಿ ಹೆಚ್ಚುತ್ತಿರುವ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಯನ್ನು ನಿಯಂತ್ರಿಸಲು ಮಂತ್ರಿ ಮಂಡಳಿಯ ಶಿಫಾರಸಿನ ಆಧಾರದ ಮೇಲೆ ಇ-ಹರಾಜು ಮೂಲಕ ಗೋಧಿಯನ್ನು ಮಾರಾಟ ಮಾಡಲಾಗುತ್ತಿದೆ.
ಫೆಬ್ರವರಿ 15, 2023ರಂದು ನಡೆದ ಎರಡನೇ ಇ-ಹರಾಜಿನಲ್ಲಿ ಭಾರತೀಯ ಆಹಾರ ನಿಗಮವು 3.85 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ರೂ.901 ಕೋಟಿಗೆ ಮಾರಾಟ ಮಾಡಿದೆ. ಈ ಪ್ರಮಾಣದ ಗೋಧಿ ಮಾರಾಟವು ಇಲ್ಲಿಯವರೆಗೆ ಇ ಹರಾಜಿನಲ್ಲಿ ಮಾರಾಟವಾದ ಗೋಧಿ ಪ್ರಮಾಣ ದಾಖಲೆಯಾಗಿದೆ. ಎರಡನೇ ಇ-ಹರಾಜಿನಲ್ಲಿ ಭಾರತೀಯ ಆಹಾರ ನಿಗಮವು 3.85 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ರೂ.901 ಕೋಟಿಗೆ ಮಾರಾಟ ಮಾಡಿದ್ದು, ಇದರಲ್ಲಿ 1060ಕ್ಕೂ ಹೆಚ್ಚು ಬಿಡ್‌ದಾರರು ಭಾಗವಹಿಸಿದ್ದರು.
ಈ ಹರಾಜಿನಲ್ಲಿ 15.25 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಮಾರಾಟ ಮಾಡುವುದಾಗಿ ಘೋಷಿಸಲಾಗಿತ್ತು. 50-100 MT, 100-499 MT ಮತ್ತು 500-1000 MT ವ್ಯಾಪ್ತಿಯಲ್ಲಿ ಬಿಡ್‌ದಾರರು ಗೋಧಿಗಾಗಿ ಬಿಡ್ ಮಾಡಿದ ಕಾರಣ ಸಣ್ಣ ಮತ್ತು ಮಧ್ಯಮ ಗಿರಣಿ ಮಾಲೀಕರು ಮತ್ತು ವ್ಯಾಪಾರಿಗಳು ಹರಾಜಿನಲ್ಲಿ ಭಾಗವಹಿಸಿದ್ದಾರೆ ಎಂದು ಇ ಹರಾಜು ವರದಿ ತಿಳಿಸಿದೆ.
ಕೇವಲ 5 ಬಿಡ್‌ದಾರರು ಗರಿಷ್ಠ 3000 MTಗೆ ಏಕಕಾಲದಲ್ಲಿ ಬಿಡ್ ಮಾಡಿದ್ದಾರೆ. ಪ್ರತಿ ಕ್ವಿಂಟಾಲ್‌ಗೆ ಸರಾಸರಿ 2338.01 ರೂ. ದರದಲ್ಲಿ ಬಿಡ್‌ಗಳು ಇದ್ದುದರಿಂದ, ಭಾರತೀಯ ಆಹಾರ ನಿಗಮವು ಮೊದಲ ಮಾರಾಟದಿಂದ 901 ಕೋಟಿ ರೂಪಾಯಿಯನ್ನು ಗಳಿಸಿದೆ.
ದೇಶದಲ್ಲಿ ಹೆಚ್ಚುತ್ತಿರುವ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಯನ್ನು ನಿಯಂತ್ರಿಸಲು ಮಂತ್ರಿ ಮಂಡಳಿಯ ಶಿಫಾರಸಿನ ಆಧಾರದ ಮೇಲೆ ಇ-ಹರಾಜು ಮೂಲಕ ಗೋಧಿಯನ್ನು ಮಾರಾಟ ಮಾಡಲಾಗುತ್ತಿದೆ. ಅಂತಹ ಹರಾಜು ಮಾರಾಟವು ದೇಶದಾದ್ಯಂತ ಮಾರ್ಚ್ 2023 ರ 2 ನೇ ವಾರದವರೆಗೆ ಪ್ರತಿ ಬುಧವಾರ ನಡೆಯಲಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…