Advertisement
ಪ್ರಮುಖ

ಭಾರತದಲ್ಲಿ 3 ಕೋಟಿ ಕುಟುಂಬಗಳು ಹಾಲು ಮಾರಾಟವೇ ಮಾಡಲ್ಲ…!

Share

ಭಾರತದಲ್ಲಿ ಜಾನುವಾರು ಸಾಕಾಣಿಕೆ ಎಂದರೆ ಕೇವಲ ಹಾಲು ಉತ್ಪಾದನೆ ಮಾತ್ರವಲ್ಲ, ಗ್ರಾಮೀಣ ಬದುಕಿನ ಬಹುಮುಖ ಜೀವನೋಪಾಯ ವ್ಯವಸ್ಥೆಯಾಗಿದೆ ಎಂಬುದನ್ನು ಅಧ್ಯಯನೊಂದು ಬಹಿರಂಗಪಡಿಸಿದೆ.

ಇಂಧನ, ಪರಿಸರ ಮತ್ತು ನೀರಿನ ಮಂಡಳಿ (CEEW) ಬಿಡುಗಡೆ ಮಾಡಿದ ವರದಿ ಪ್ರಕಾರ, ದೇಶದ ಸುಮಾರು 38% ಜಾನುವಾರು ಸಾಕಣೆದಾರರು , ಅಂದರೆ ಸುಮಾರು 30 ಮಿಲಿಯನ್ ಕುಟುಂಬಗಳು  ಹಾಲು ಮಾರಾಟ ಮಾಡುವುದಿಲ್ಲ..!.  ಅಧ್ಯಯನದ ಪ್ರಕಾರ, ಈ ಕುಟುಂಬಗಳು ಹಾಲು ಮಾರಾಟಕ್ಕಿಂತಲೂ ಸಗಣಿ, ಗೊಬ್ಬರ ಮತ್ತು ಪ್ರಾಣಿಗಳ ಮಾರಾಟದಿಂದ ಸಿಗುವ ಆದಾಯದಂತಹ ಮಾರುಕಟ್ಟೆಯೇತರ ಪ್ರಯೋಜನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ.

ಹಾಲು ಮಾರಾಟಕ್ಕೆ ಆದ್ಯತೆ ನೀಡದ ಸಾಕಣೆದಾರರ ಪ್ರಮಾಣ ಜಾರ್ಖಂಡ್‌ನಲ್ಲಿ ಅತ್ಯಧಿಕವಾಗಿದ್ದು, ಅಲ್ಲಿನ 71% ಸಾಕಣೆದಾರರು ಹಾಲು ಮಾರಾಟವನ್ನೇ ಪ್ರಾಥಮಿಕ ಉದ್ದೇಶವಾಗಿಸಿಲ್ಲ. ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಈ ಪ್ರಮಾಣ 50% ಕ್ಕಿಂತ ಹೆಚ್ಚು ಎಂದು ವರದಿ ಹೇಳುತ್ತದೆ.

ಹಾಲು ಮಾರಾಟ ಮಾಡದ ಕುಟುಂಬಗಳಲ್ಲಿ 31% ಜನರು ಕುಟುಂಬ ಬಳಕೆಯ ಹಾಲನ್ನು ಮುಖ್ಯವಾಗಿ ನೋಡುತ್ತಾರೆ. ಆದರೆ, ಉಳಿದವರು ಸುಮಾರು 5.6 ಮಿಲಿಯನ್ ಕುಟುಂಬಗಳು  ಹಾಲು ಉತ್ಪಾದನೆಗೂ ಸಂಬಂಧವಿಲ್ಲದ ಉದ್ದೇಶಕ್ಕಾಗಿ ಸಂಪೂರ್ಣವಾಗಿ ದನಗಳನ್ನು ಸಾಕುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಅಧ್ಯಯನವು 15 ರಾಜ್ಯಗಳ 7,300ಕ್ಕೂ ಅಧಿಕ ಕುಟುಂಬಗಳ ಸಮೀಕ್ಷೆಯನ್ನು ಮಾಡಿದ್ದು,  ಭಾರತದ ಗೋವಿನ ಸಂಖ್ಯೆಯ 91% ಇದೆ(ಹಸುಗಳು, ಎಮ್ಮೆಗಳು, ಎತ್ತುಗಳು ). ವರದಿ ಪ್ರಕಾರ, ಬಹುತೇಕ ಮನೆಗಳಲ್ಲಿ ಕೇವಲ ಒಂದು ಅಥವಾ ಎರಡು ಸ್ಥಳೀಯ ದನಗಳು ಇದ್ದು, ಇವು ಸಮಗ್ರ ಕೃಷಿ ವ್ಯವಸ್ಥೆಯಲ್ಲಿ ಸಗಣಿ ಮತ್ತು ಗೊಬ್ಬರದ ಪ್ರಮುಖ ಪಾತ್ರ ವಹಿಸುತ್ತಿವೆ. ಒಟ್ಟಾರೆಯಾಗಿ, 15 ರಾಜ್ಯಗಳಲ್ಲಿ ಒಂಬತ್ತು ರಾಜ್ಯಗಳಲ್ಲಿ, ಅರ್ಧಕ್ಕಿಂತ ಕಡಿಮೆ ಜಾನುವಾರು ಸಾಕಣೆದಾರರು ಹಾಲು ಮಾರಾಟವನ್ನು ತಮ್ಮ ಸಾಕಣೆಗೆ ಪ್ರಾಥಮಿಕ ಪ್ರೇರಣೆಯಾಗಿ ಉಲ್ಲೇಖಿಸಿದ್ದಾರೆ.

ಡೈರಿ ನೀತಿಗಳು ಹೆಚ್ಚಾಗಿ ಉತ್ಪಾದಕತೆ ಮತ್ತು ಹಾಲಿನ ಪ್ರಮಾಣ ಹೆಚ್ಚಿಸುವತ್ತ ಗಮನಹರಿಸುತ್ತಿವೆ. ಆದರೆ, ಗ್ರಾಮೀಣ ಜೀವನೋಪಾಯದಲ್ಲಿ ಜಾನುವಾರುಗಳ ಪಾತ್ರವು ಹಾಲಿನ ಹೊರತಾಗಿಯೂ ಬಹುಮುಖವಾಗಿರುವುದರಿಂದ, ಅದನ್ನು ಪ್ರತಿಬಿಂಬಿಸುವ ಹಾಗೂ ಸ್ಪಂದಿಸುವ ನೀತಿಗಳು ಅಗತ್ಯವೆಂದು CEEW ನಿರ್ದೇಶಕ ಅಭಿಷೇಕ್ ಜೈನ್ ವರದಿಯಲ್ಲಿ ಹೇಳಿದ್ದಾರೆ.

ಮೇವು ಮತ್ತು ಆಹಾರ ಕೊರತೆ ದೊಡ್ಡ ಸವಾಲು : ಅಧ್ಯಯನದಂತೆ, ನಾಲ್ಕರಲ್ಲಿ ಮೂವರು ಸಾಕಣೆದಾರರಿಗೆ ಕೈಗೆಟುಕುವ ಮೇವು ಮತ್ತು ಮೇವಿನ ಲಭ್ಯತೆ ಪ್ರಮುಖ ಸಮಸ್ಯೆಯಾಗಿದೆ. ಆದರೆ, ಸೈಲೇಜ್ ಹಾಗೂ ಸಮತೋಲಿತ ಪೋಷಣಾ ಯೋಜನೆಗಳಂತಹ ವ್ಯವಸ್ಥೆ ಅಳವಡಿಕೆ ಕೇವಲ 5% ಮಾತ್ರ ಇರುವುದೂ ಗಮನಾರ್ಹವಾಗಿದೆ. ಹವಾಮಾನ ಬದಲಾವಣೆಯಿಂದ ಜಾನುವಾರುಗಳಲ್ಲಿ ರೋಗ ಪ್ರಮಾಣ, ಸಾವು, ಹೆಚ್ಚಾಗುತ್ತಿದೆ ಎಂದು ಸಾಕಣೆದಾರರು ಹೇಳಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಜಾನುವಾರು ಸಾಕಾಣಿಕೆಯು ಜೀವನೋಪಾಯದ ಮೇಲೆ ಮತ್ತಷ್ಟು ಒತ್ತಡ ತರುವ ಸಾಧ್ಯತೆ ಇದೆ. ಹಾಲು 80 ದಶಲಕ್ಷಕ್ಕೂ ಹೆಚ್ಚು ಜೀವನೋಪಾಯಕ್ಕೆ ಕಾರಣವಾಗಿದೆ ಮತ್ತು ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಶೇಕಡಾ 5 ರಷ್ಟು ಕೊಡುಗೆ ನೀಡುತ್ತದೆ. ಗ್ರಾಮೀಣ ಜೀವನೋಪಾಯದಲ್ಲಿ ಜಾನುವಾರು ವಹಿಸುವ ಪಾತ್ರಗಳು ಕಡೆಗಣಿಸಲ್ಪಟ್ಟಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

4 hours ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

5 hours ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

5 hours ago

ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್

ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…

5 hours ago

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

1 day ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

1 day ago