300 ಯುನಿಟ್ ಗಿಂತ ಹೆಚ್ಚು ರಕ್ತದಾನ ಮಾಡಿದ ಸುಳ್ಯದ ಯುವಬ್ರಿಗೆಡ್

June 2, 2019
3:00 PM

ಸುಳ್ಯ: ರಕ್ತದಾನ ಎಂಬುದು ಮಹಾದಾನ. ಇಂತಹದ್ದೊಂದು ದಾನದಲ್ಲಿ ಸುಳ್ಯದ ಯುವಬ್ರಿಗೆಡ್ ತಂಡ ತೊಡಗಿಸಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಕನಿಷ್ಟ 300 ಯುನಿಟ್ ಗಿಂತ ಹೆಚ್ಚು ರಕ್ತ ನೀಡಿದೆ. ಈ ತಂಡದಲ್ಲಿ ಸುಮಾರು 450 ಮಂದಿ ಇದ್ದಾರೆ. ರಕ್ತ ಬೇಕಾದಾಗ ತಕ್ಷಣ ಈ ತಂಡದ ಸದಸ್ಯರು ರಕ್ತ ನೀಡುತ್ತಾರೆ. ಈ ಮೂಲಕ ಸಮಾಜದ ಸೇವೆಯನ್ನು  ಮಾಡುತ್ತಿದ್ದಾರೆ.

ಯುವಬ್ರಿಗೆಡ್ ಸಮಾಜದ ವಿವಿಧ ಕೆಲಸಗಳನ್ನು  ಕಳೆದ ಅನೇಕ ಸಮಯಗಳಿಂದ ಮಾಡುತ್ತಲೇ ಬರುತ್ತಿದೆ. ಅದರಲ್ಲಿ ರಕ್ತದಾನವೂ ಒಂದು. ಯುವ ಬ್ರಿಗೇಡ್ ರಕ್ತ ನಿಧಿಯ ಕಟ್ಟಿದ ಕೇಶವ  ಇವರು ಈ ತಂಡದ ಮಾರ್ಗದರ್ಶಕರು. ಸುಳ್ಯದಲ್ಲಿ ರಕ್ತದ ಅವಶ್ಯಕತೆ ಇರುವುದನ್ನು ಗಮನಿಸಿ ಒಂದು ವರ್ಷ ದಲ್ಲಿ ಸತತವಾಗಿ  ಕೆವಿಜಿ ಅಥವಾ ಸರಕಾರಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಲಾಗಿದೆ.  300 ಕ್ಕಿಂತ ಮೇಲೆ ರಕ್ತದ ಯುನಿಟ್ ಗಳನ್ನು ಒದಗಿಸಿದ ಕೀರ್ತಿ  ಯುವಾ ಬ್ರಿಗೇಡ್ ರಕ್ತ ನಿಧಿಗೆ ಸಲುತ್ತದೆ. ಇದೊಂದು ಸೇವೆಗೆ ಇಡೀ ಸಮಾಜವೇ ಅಭಿನಂದನೆ ಹೇಳುತ್ತದೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಬೇಸಿಗೆ ಎಚ್ಚರಿಕೆ: ಜಾನುವಾರು–ಕೋಳಿಗಳಲ್ಲಿ ಉಷ್ಣ ಒತ್ತಡ ಹೆಚ್ಚಳ, ರೈತರಿಗೆ ಮಾರ್ಗಸೂಚಿ ಪ್ರಕಟ
March 21, 2026
10:06 PM
by: ಮಿರರ್‌ ಡೆಸ್ಕ್
ಭಾರತದಲ್ಲಿ ಸಸ್ಯ ಆಧಾರಿತ ನ್ಯಾನೋ ಕೃಷಿ ಉತ್ಪನ್ನಗಳ ನೋಂದಣಿ | ವೈಜ್ಞಾನಿಕ ಮತ್ತು ನಿಯಂತ್ರಕ ಮಾರ್ಗಸೂಚಿಗಳು ರೈತರಿಗೆ ತಿಳಿದಿರಬೇಕು ಏಕೆ..?
March 1, 2026
7:22 AM
by: ದ ರೂರಲ್ ಮಿರರ್.ಕಾಂ
ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು
February 12, 2026
6:40 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror