ರಬ್ಬರ್ ಉತ್ಪಾದನಾ ಪ್ರೋತ್ಸಾಹ ಯೋಜನೆಯಡಿ 2022-23 ನೇ ಹಣಕಾಸು ವರ್ಷದಲ್ಲಿ ರಬ್ಬರ್ ಬೆಳೆಗಾರರಿಗೆ 33.195 ಕೋಟಿ ರೂಪಾಯಿಯನ್ನು ಕೇರಳ ಸರ್ಕಾರ ವಿತರಿಸಿದೆ ಎಂದು ಕೃಷಿ ಸಚಿವ ಪಿ.ಪ್ರಸಾದ್ ತಿಳಿಸಿದ್ದಾರೆ.
ಕೇರಳ ರಾಜ್ಯದಲ್ಲಿ ರೈತರು ಉತ್ಪಾದಿಸುವ ರಬ್ಬರ್‌ಗೆ ಕೆಜಿಗೆ 170 ರೂಪಾಯಿ ಬೆಂಬಲ ಬೆಲೆಯನ್ನು ರಬ್ಬರ್ ಮಂಡಳಿಯ ಸಹಯೋಗದಲ್ಲಿ ಜಾರಿಗೆ ತರುತ್ತಿರುವ ಯೋಜನೆಗೆ 2022-23 ರ ಬಜೆಟ್‌ನಲ್ಲಿ 500 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.ಇದುವರೆಗೆ ಆಯಾ ರಬ್ಬರ್ ಉತ್ಪಾದಕರ ಸೊಸೈಟಿಗೆ ಬಿಲ್‌ಗಳನ್ನು ಸಲ್ಲಿಸಿ ರಬ್ಬರ್ ಮಂಡಳಿಯಿಂದ ಪ್ರಮಾಣೀಕರಣ ಪಡೆದ ರಬ್ಬರ್ ರೈತರಿಗೆ ಮಾತ್ರ ಆರ್ಥಿಕ ಇಲಾಖೆಯಿಂದ ನೆರವು ಮಂಜೂರಾಗಿದೆ ಎಂದು ಅವರು ಹೇಳಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel