#GaneshaChaturthi | ಅತ್ಯಂತ ಶ್ರೀಮಂತ ಗಣೇಶನಿಗೆ 360 ಕೋಟಿ ಇನ್ಸೂರೆನ್ಸ್‌ | 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿ ಅಲಂಕಾರ |

September 18, 2023
3:16 PM
ಮುಂಬೈನ ಜಿಎಸ್‌ಬಿ ಸೇವಾ ಮಂಡಲ ದೇಶದಲ್ಲೇ ಅಂತ್ಯಂತ ಶ್ರೀಮಂತ ಗಣೇಶ ಮೂರ್ತಿಯನ್ನ ಕೂರಿಸಿ, ಗಣೇಶೋತ್ಸವವನ್ನು ಆಚರಿಸುತ್ತಿದೆ. ವಿಶೇಷವೆಂದರೆ ಈ ಗಣೇಶನ ಮೂರ್ತಿಯ ಅಲಂಕಾರಕ್ಕೇ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿಯನ್ನು ಬಳಕೆ ಮಾಡಲಾಗಿದೆ.

ಗಣೇಶ ಹಬ್ಬ ವಿಶೇಷವಾಗಿ ನಡೆಯುವುದು ಮುಂಬೈನಲ್ಲಿ. ಲಕ್ಷಾಂತರ ಭಕ್ತರು ಇಲ್ಲಿ ಸೇರುತ್ತಾರೆ. ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ವಿಘ್ನೇಶ್ವರನ ಭಕ್ತರು ಬಗೆಬಗೆಯ ಗಣೇಶ ಮೂರ್ತಿಗಳನ್ನಕೂರಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಕಲ ವಿಘ್ನಗಳು ನಿವಾರಣೆಯಾಗಲಿ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದಯಪಾಲಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ.

ಈ ನಡುವೆ ಮುಂಬೈನ ಜಿಎಸ್‌ಬಿ ಸೇವಾ ಮಂಡಲ ದೇಶದಲ್ಲೇ ಅಂತ್ಯಂತ ಶ್ರೀಮಂತ ಗಣೇಶ ಮೂರ್ತಿಯನ್ನ ಕೂರಿಸಿ, ಗಣೇಶೋತ್ಸವವನ್ನು ಆಚರಿಸುತ್ತಿದೆ. ವಿಶೇಷವೆಂದರೆ ಈ ಗಣೇಶನ ಮೂರ್ತಿಯ ಅಲಂಕಾರಕ್ಕೇ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿಯನ್ನು ಬಳಕೆ ಮಾಡಲಾಗಿದೆ. ಹೌದು.. ಮುಂಬೈನ ಅತ್ಯಂತ ದೊಡ್ಡ ಗಣೇಶ ಎನ್ನಲಾದ ಕಿಂಗ್ಸ್​ ಸರ್ಕಲ್​​ನ ಈ ಗಣಪತಿಗೆ ಹೀಗೆ ಚಿನ್ನ-ಬೆಳ್ಳಿಯಲ್ಲಿ ಭರ್ಜರಿ ಅಲಂಕಾರ ಮಾಡಲಾಗಿದೆ. ಜಿಎಸ್​​ಬಿ ಸೇವಾ ಮಂಡಲದವರು ಅದ್ಧೂರಿಯಾಗಿ ವರ್ಷಪೂರ್ತಿ ಆಚರಿಸುವ ಈ ಗಣೇಶ ಉತ್ಸವ ಪ್ರಸಿದ್ಧಿ ಪಡೆದಿದ್ದು, ಪ್ರತಿ ವರ್ಷವೂ ದೇಶದ ಗಮನ ಸೆಳೆಯುತ್ತದೆ. ಈ ಬಾರಿ ಸೆ.19ರಿಂದ 23ರ ವರೆಗೂ ಇಲ್ಲಿ ಗಣೇಶ ಚತುರ್ಥಿ ಉತ್ಸವ ಆಚರಣೆ ಆಗಲಿದೆ.

ಈ ಗಣೇಶನಿಗೆ ವೈಭವೋಪೇತ ಅಲಂಕಾರ ಮಾಡಲಾಗುತ್ತಿದ್ದು, ಈ ಸಲ ಅಲಂಕಾರಕ್ಕೆಂದೇ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿ ಬಳಸಲಾಗಿದೆ. ದುಬಾರಿ ಅಲಂಕಾರ ಮತ್ತಿತರ ಕಾರಣಗಳಿಂದಾಗಿ ಈ ಗಣೇಶನಿಗೆ ಪ್ರತಿವರ್ಷ ವಿಮೆ ಕೂಡ ಮಾಡಿಸಲಾಗುತ್ತಿದ್ದು, ಈ ಬಾರಿ 360 ಕೋಟಿ ರೂ.ಗೆ ವಿಮೆ ಮಾಡಿಸಲಾಗಿದೆ. ಕಳೆದ ವರ್ಷ ಜಿಎಸ್‌ಬಿ ಮಂಡಲವು 316.40 ಕೋಟಿ ರೂ. ವಿಮೆ ಮಾಡಿಸಿತ್ತು. ಆದರೆ ಈ ಬಾರಿ ವಿಮೆ ಮೊತ್ತವು 44 ಕೋಟಿ ರೂ. ಹೆಚ್ಚಾಗಿದೆ. ಅದ್ರೆ ಎಷ್ಟು ಪ್ರೀಮಿಯಂ ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕೃತಗೊಳಿಸಿಲ್ಲ.

Source: News Agencies

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ
March 27, 2026
6:50 AM
by: ದ ರೂರಲ್ ಮಿರರ್.ಕಾಂ
ವೈಜ್ಞಾನಿಕ ಬೆಂಬಲ ಬೆಲೆ ಮತ್ತು ವರ್ಷಪೂರ್ತಿ ಖರೀದಿ ಕೇಂದ್ರಕ್ಕೆ ವರ್ಷಪೂರ್ತಿ ಖರೀದಿ ಕೇಂದ್ರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ
March 27, 2026
6:45 AM
by: ದ ರೂರಲ್ ಮಿರರ್.ಕಾಂ
ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ
March 27, 2026
6:34 AM
by: ದ ರೂರಲ್ ಮಿರರ್.ಕಾಂ
ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror