ಭಾರತೀಯ ಕಿಸಾನ್ ಸಂಘದ ಅಖಿಲ ಭಾರತೀಯ 3ನೇ ತೆಂಗು ಬೆಳೆ(Coconut Growers) ರೈತರ ಸಭೆಯು ಆಂಧ್ರಪ್ರದೇಶದ(AndraPradesha) ಅಮಲಾಪುರದಲ್ಲಿ ಸಮಾವೇಶಗೊಂಡಿದೆ(Meet). ಸಮಾವೇಶದಲ್ಲಿ ತೆಂಗು ಉತ್ಪಾದಕರ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು(Central. state Govt) ಏನೇನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಭಾರಿ ಚರ್ಚೆ ನಡೆಯಲಿದೆ.
ಹಾಗೇ ರೈತರು ಉತ್ತಮ ತೆಂಗು ಕೃಷಿ ಮಾಡಲು ಇರುವ ಅವಕಾಶಗಳು ಉಪ ಉತ್ಪನ್ನಗಳು ಮೌಲ್ಯ ವರ್ಧನೆ ಮಾರುಕಟ್ಟೆ ಸಾಗಾಣಿಕೆ ವ್ಯವಸ್ಥೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಭಾರತೀಯ ಕಿಸಾನ್ ಸಂಘದ ಅಖಿಲ ಭಾರತೀಯ ತೆಂಗು ಬೆಳೆ ರೈತರ ವೇದಿಕೆ ವತಿಯಿಂದ ಬೃಹತ್ ಸಮಾವೇಶ ನಡೆಯಲಿದ್ದು ಬೃಹತ್ ಸಂಖ್ಯೆಯಲ್ಲಿ ಸೇರಿ ಮೆರವಣಿಗೆ ಶೋಭಾಯಾತ್ರೆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದು ಮನವಿ ಸಲ್ಲಿಸಲಿದೆ.
ದೇಶದಲ್ಲಿರುವ ಧಾರ್ಮಿಕ ಕೇಂದ್ರಗಳು ಮಠಗಳು ಮಂದಿರಗಳು ಭಕ್ತರಿಗೆ ಮತ್ತು ಸರಕಾರಗಳು ಬಿಸಿಊಟ/ಮದ್ಯಾಹ್ನ ಊಟ ವಿದ್ಯಾರ್ಥಿ ನಿಲಯಗಳು ಇತ್ಯಾದಿಗಳಲ್ಲಿ ಸಾರ್ವಜನಿಕರಿಗೆ ಕಂಪನಿಗಳ ಕಲಬೆರಕೆ ಅಡುಗೆ ಎಣ್ಣೆ ಬಳಸುತ್ತಿರುವದನ್ನು ಬಿಟ್ಟು ಜನಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ನೇರವಾಗಿ ಅಂದರೆ ಗಾಣದಿಂದ ತಯಾರಿಸಿದ / ಯಾವುದೇ ಕಲಬೆರಕೆ ಇಲ್ಲದ ಎಣ್ಣೆಯನ್ನು ರೈತರಿಂದ ರೈತ ಉತ್ಪಾದಕ ಕಂಪನಿಗಳ ಮೂಲಕ ನೇರವಾಗಿ ಖರೀದಿಸಿ ಬಳಸುವುದರ ಮೂಲಕ ರೈತರಿಗೆ ನೆರವಾಗುವದರ ಜೊತೆಗೆ ಜನರ ಆರೋಗ್ಯ ಕಾಪಾಡಲು ಕಾರ್ಯ ಪ್ರವೃತ್ತ ರಾಗಬೇಕೆಂದು ಭಾರತೀಯ ಕಿಸಾನ್ ಸಂಘದ ಅಖಿಲ ಭಾರತ ತೆಂಗು ರೈತರ ವೇದಿಕೆಯು” ಆಂಧ್ರಪ್ರದೇಶದ ಅಮಲಾಪುರ ಸಮಾವೇಶದಲ್ಲಿ ಆಗ್ರಹಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಹಿಂದಿನ ವರ್ಷವನ್ನು ಮಿಲೆಟ್ ವರ್ಷ ಎಂದು ಘೋಷಿಸಿ ವಿಶ್ವಾದ್ಯಂತ ಪ್ರಚಾರ ಮಾಡಲಾಯಿತೋ ಹಾಗೆ ಮುಂದಿನ (2025-26) ವರ್ಷವನ್ನು ತೆಂಗು ವರ್ಷ ಎಂದು ಘೋಷಿಸಿ ದೇಶಾದ್ಯಂತ ತೆಂಗು ಮತ್ತು ತೆಂಗಿನ ಉತ್ಪನ್ನಗಳ ಬಗ್ಗೆ ಪ್ರಚಾರ ಪ್ರಸಾರ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಲು ನಿರ್ಣಯ ಕೈಗೊಳ್ಳಲಾಯಿತು ಎಂದು ಗಂಗಾಧರ್ ಕಾಸರಘಟ್ಟ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಇವರು ಮಾಹತಿ ನೀಡಿದರು.