ಜಾಗತಿಕ ತಾಪಮಾನದ ಬಗ್ಗೆ ಎಚ್ಚರಿಕೆ ಕೇಳಿ ಬರುತ್ತಲೇ ಇದೆ. ಇದಕ್ಕೆ ಕಾರಣ ಜಾಗತಿಕ ತಾಪಮಾನದಿಂದಾಗಿ ಉಂಟಾಗುವ ಸಮಸ್ಯೆಗಳು. ಸಮದ್ರ ಮಟ್ಟ ಏರಿಕೆ, ಹವಾಮಾನಬದಲಾವಣೆ, ಅತಿಯಾದ ತಾಪಮಾನ ಹೀಗೆ ಇವುಗಳು ಗ್ಲೋಬಲ್ ವಾರ್ಮಿಂಗ್ ಜೊತೆ ನೇರವಾದ ಸಂಬಂಧ ಹೊಂದಿವೆ. ಈ ಹಿಂದೆ ಬಂದ ಸುಮಾರು ಅಧ್ಯಯನಗಳು ಜಾಗತಿಕ ತಾಪಮಾನದಿಂದಾಗಿ ಸಮುದ್ರಗಳ ಮಟ್ಟ ಏರಿಕೆ ಆಗುತ್ತಿದೆ, ಇದರಿಂದ 2050ರ ವೇಳೆಗೆ ಹಲವು ಪ್ರದೇಶಗಳು ಮುಳುಗಡೆಯಾಗಬಹುದು ಎಂದು ಸೂಚಿಸಿವೆ. ಭಾರತದಲ್ಲಿ ಮುಂಬೈ, ಮಹಾರಾಷ್ಟ್, ಕೇರಳ#Kerala, ಗುಜರಾತ್ ಕರಾವಳಯಂತಹ ಪ್ರದೇಶಗಳು ಅಪಾಯದಲ್ಲಿವೆ ಎಂದು ತಿಳಿಸಿವೆ.
ಕೇರಳದ ನಾಲ್ಕು ಜಿಲ್ಲೆಗಳಿಗೆ ಹೆಚ್ಚಿನ ಅಪಾಯ: ಇದೇ ರೀತಿಯ ಮತ್ತೊಂದು ವರದಿ ಬಹಿರಂಗವಾಗಿದ್ದು, ಜಾಗತಿಕ ತಾಪಮಾನದ ಕಾರಣ 2050ರ ವೇಳೆಗೆ ಕೇರಳದ 4 ಜಿಲ್ಲೆಗಳು ಸಮುದ್ರ ಮಟ್ಟಕ್ಕಿಂತ ಕೆಳಕ್ಕೆ ಹೋಗಬಹುದು ಎಂದು ಎಚ್ಚರಿಸಿದೆ. ನ್ಯೂಜೆರ್ಸಿ ಮೂಲದ ವಿಜ್ಞಾನ ಸಂಸ್ಥೆಯಾದ ಕ್ಲೈಮೇಟ್ ಸೆಂಟ್ರಲ್ ನಿರ್ಮಿಸಿದ ಹೊಸ ಡಿಜಿಟಲ್ ಎಲಿವೇಶನ್ ಮಾಡೆಲ್#DEM ಮೊದಲ ವರದಿಯಲ್ಲಿ ಮಧ್ಯ ಕೇರಳದ ಭಾಗಗಳು ಸಮುದ್ರ ಮಟ್ಟ ಏರಿಕೆಯ ಹೆಚ್ಚಿನ ಅಪಾಯದ ವಲಯಗಳು ಎಂದು ತಿಳಿಸಿತ್ತು. ಆದರೆ ಇದೀಗ ಮತ್ತೊಂದು ವರದಿಯನ್ನು ಬಿಡುಗಡೆ ಮಾಡಿದ್ದು, 2050 ರ ವೇಳೆಗೆ ಜಿಲ್ಲೆಯ ಹಲವು ಭಾಗಗಳು ಮುಳುಗಡೆಯಾಗಬಹುದು ಎಂದು ತಿಳಿಸಿದೆ.
ಪ್ರಮುಖ ಕರಾವಳಿ ನಗರಗಳಿಗೆ ಸಂಬಂಧಿಸಿದ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್#IPCC ವರದಿಯು ಸಮುದ್ರ ಮಟ್ಟವು 2050 ರ ವೇಳೆಗೆ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಸೂಚಿಸಿದೆ. ಉತ್ತರ ಹಿಂದೂ ಮಹಾಸಾಗರದಲ್ಲಿ#NIO ಸಮುದ್ರ ಮಟ್ಟ ಏರಿಕೆಯು ವರ್ಷಕ್ಕೆ 1.06-1.75mm ದರದಲ್ಲಿ ಸಂಭವಿಸಿದೆ. 1874 ರಿಂದ 2004 ರವರೆಗೆ ಮತ್ತು 25 ವರ್ಷಗಳಲ್ಲಿ ವರ್ಷಕ್ಕೆ 3mm ಗಿಂತ ಹೆಚ್ಚಾಗಿದೆ. ಈ ಬಗ್ಗೆ ಮಾತನಾಡಿದ ಹಿರಿಯ ಪರಿಸರ ವಿಜ್ಞಾನಿ ಕೆ ಕೆ ರಾಮಚಂದ್ರನ್ “1m ಏರಿಕೆಯ ಪ್ರಕ್ಷೇಪಣವನ್ನು ಈಗಾಗಲೇ ಮಾಡಲಾಗಿದೆ ಮತ್ತು ರಾಜ್ಯ ಹವಾಮಾನ ಕ್ರಿಯಾ ಯೋಜನೆಯು ಈ ಪ್ರಕ್ಷೇಪಣೆಯ ಆಧಾರದ ಮೇಲೆ ಈ ಸ್ಥಳಗಳ ಬಗ್ಗೆ ಎಚ್ಚರಿಕೆ ವಹಿಸಿದೆ. ಹವಮಾನವನ್ನು ಸುಧಾರಿಸುವ ಅನಿವಾರ್ಯತೆ ಈಗ ಬಂದಿದೆ. ರಾಜ್ಯ ಸರ್ಕಾರ ಹವಮಾನಕ್ಕೆ ಸಂಬಂಧಿಸಿದ ಗ್ರೀನ್ ಕ್ರೆಡಿಟ್ ಕಾರ್ಯಕ್ರಮವನ್ನು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಕೆ ಕೆ ರಾಮಚಂದ್ರನ್ ಹೇಳಿದ್ದಾರೆ.
– ಆಂತರ್ಜಾಲ ಮಾಹಿತಿ