Advertisement
MIRROR FOCUS

ಕಂಪನಿಗಾಗಿ 40, ನಿಮಗಾಗಿ 30 ಗಂಟೆ ಕೆಲಸ ಮಾಡಿ | ಟೆಕ್ ಮಹೀಂದ್ರಾ ಸಿಇಒ ಗುರ್ನಾನಿ ಹೇಳಿದ್ದು ಹೀಗೆ… |

Share

ಇನ್ಫೋಸಿಸ್​ನ ಮಾಜಿ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ಅವರು ನೀಡಿರುವ ವಾರದ 70 ಗಂಟೆ ಕೆಲಸದ ಬಗೆಗಿನ ಸಲಹೆ ವಿವಿಧ ಆಯಾಮಗಳಿಂದ ಚರ್ಚೆ ನಡೆಯುತ್ತಲೇ ಇದೆ. ಈ ನಡುವೆಯೇ, ಇನ್ನೊಬ್ಬ ಉದ್ಯಮ ದಿಗ್ಗಜ , ಟೆಕ್ ಮಹೀಂದ್ರ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿಪಿ ಗುರ್ನಾನಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಿ ಪಿ ಗುರ್ನಾನಿ

ಟೆಕ್ ಮಹೀಂದ್ರ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿಪಿ ಗುರ್ನಾನಿ ಅವರು ಸಾಮಾಜಿಕ ಜಾಲತಾಣ ಎಕ್(X), ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ, ಬಹುಶ:  ನಾರಾಯಣಮೂರ್ತಿ ಅವರು 70 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದು ನಿಮಗಾಗಿ, ಕಂಪನಿಗಾಗಿ ಮತ್ತು ದೇಶಕ್ಕಾಗಿ ಎಂಬ ಹೊಸ ವಿವರಣೆ ನೀಡಿದ್ದಾರೆ.ಕಂಪನಿಗಾಗಿ 70 ಗಂಟೆ ಕೆಲಸ ಮಾಡಿ ಎಂದು  ಹೇಳಿಲ್ಲ. ಕಂಪನಿಗೆ 40 ಗಂಟೆ ಕೆಲಸ ಮಾಡಿ, ನಿಮಗಾಗಿ 30 ಗಂಟೆ ಕೆಲಸ ಮಾಡಿ ಹೇಳಿರಬೇಕು ಹೇಳಿದ್ದಾರೆ.ನಿಮ್ಮ ಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸಲು 10,000 ಗಂಟೆಗಳನ್ನು ವಿನಿಯೋಗಿಸಿ, ಹಗಲು ರಾತ್ರಿ ಕಷ್ಟ ಪಟ್ಟು ಕೆಲಸ ಮಾಡಿ, ಪರಿಣತಿಯನ್ನು ಸಾಧಿಸಿ” ಎಂದು ಗುರ್ನಾನಿ ಅವರು ಎಕ್ಸ್‌ನಲ್ಲಿ(ಟ್ವಿಟರ್ ) ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಈ ಮೂಲಕ ಯುವಜನರಿಗೆ  ಪರಿಶ್ರಮಿಗಳಾಗುವಂತೆ ಸಲಹೆ ನೀಡಿದ್ದಾರೆ.

ನೀವು 10 ಗಂಟೆ ಕೆಲಸ ಮಾಡಲು ಮುಂದಾದರೆ, ನಿಮ್ಮ ವ್ಯಕ್ತಿತ್ವ ಇತರರಿಗಿಂತಲೂ ಭಿನ್ನವಾಗುತ್ತದೆ.  ದೇಶದ ಪಥವೂ ಬದಲಾಗುತ್ತದೆ, ಎಂದೂ ಅವರು ಹೇಳಿದ್ದಾರೆ. ಕಠಿಣ ಪರಿಶ್ರಮವು ಯಶಸ್ಸಿನ ಬೆನ್ನೆಲುಬು, ಆದರೆ ವಾರಕ್ಕೆ 70 ಗಂಟೆಗಳ ಕೆಲಸ ಎನ್ನುವುದು ಕೇವಲ ಗಡಿಯಾರದ ಗಂಟೆಗಳ ಕುರಿತಾದ ಸಂಗತಿಯಲ್ಲ. ಆ ಗಂಟೆಗಳಲ್ಲಿ ವ್ಯಕ್ತಿಯು ಕೆಲಸದಲ್ಲಿ ತೋರಿಸುವ ಉತ್ಸಾಹ ಮತ್ತು ಗುಣಮಟ್ಟ ಬಹಳ ಮುಖ್ಯ, ಗಂಟೆಗಳ ಕೆಲಸ ಎನ್ನುವ ಸವಾಲನ್ನು ಯುವಜನರು ಸ್ವೀಕರಿಸಬೇಕು, ಇದರಿಂದ ವೇತನದ ಬೆಳವಣಿಗೆ ಮತ್ತು ಕಲಿಕೆಯು ಸಾಧ್ಯವಾಗುತ್ತದೆ ಎಂದು ಮಾರಿಕೊ ಗ್ರೂಪ್ ಅಧ್ಯಕ್ಷ ಹರ್ಟ್ ಮಾರಿವಾಲಾ ಕೂಡಾ ಹೇಳಿದ್ದಾರೆ.

ಟೆಕ್ ಮಹೀಂದ್ರ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿಪಿ ಗುರ್ನಾನಿ ಅವರು ಸಾಮಾಜಿಕ ಜಾಲತಾಣ ಎಕ್(X), ನಲ್ಲಿ ಅಭಿಪ್ರಾಯ ಹೀಗಿದೆ…

Have been reading about the outrage to Narayana Murthy’s 70 hour work statement.. , I believe when he talks of work, it’s not limited to the company.. it extends to your self and to your country..  He hasn’t said work 70 hours for the company – work 40 hours for the company but work 30 hours for yourself.. Invest the 10,000 hours that makes one a master in one’s subject.. burn the midnight oil and become an expert in your field.  THAT is 70 hours of work which can differentiate you as a youngster and in the process your country..
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

1 hour ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

1 day ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 day ago