ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ | ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಪಣ | ಬರೋಬ್ಬರಿ 4,800 ಕೋಟಿ ಬಿಡುಗಡೆ |

February 17, 2023
10:43 AM

ಗಾಂಧೀಜಿ ಒಂದು ಮಾತು ಹೇಳಿದ್ದಾರೆ. ನಮ್ಮ ದೇಶದ ಹಳ್ಳಿಗಳು ಯಾವಾಗ ಅಭಿವೃದ್ಧಿ ಹೊಂದುತ್ತಾವೆಯೋ, ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು. ಈ ನಿಟ್ಟಿನಲ್ಲಿ  ಸರ್ಕಾರಗಳು ಹಳ್ಳಿಗಳ ಉದ್ದಾರಕ್ಕೆ ಕೆಲಸ ಮಾಡಿವೆ. ಆದ್ರೂ ಇಂದಿಗೂ ಅನೇಕ ಹಳ್ಳಿ, ಗ್ರಾಮಗಳು ಮುಖ್ಯ ಮೂಲಭೂತ ಸೌಕರ್ಯ ಇಲ್ಲದೆ ನಲುಗುತ್ತಿವೆ. ಈ ನಿಟ್ಟಿನಲ್ಲಿ ದೇಶದ ಗ್ರಾಮಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಕೊಡುಗೆಯನ್ನು ನೀಡಿದೆ. 4800 ಕೋಟಿ ರೂಪಾಯಿಗಳ ಹಣ ಹಂಚಿಕೆಯೊಂದಿಗೆ 2022-23ರಿಂದ 2025-26ನೇ ಹಣಕಾಸು ವರ್ಷದವರೆಗೆ ಕೇಂದ್ರ ಪ್ರಾಯೋಜಿತ ಯೋಜನೆ “ರೋಮಾಂಚಕ ಗ್ರಾಮಗಳ ಕಾರ್ಯಕ್ರಮ”ಕ್ಕೆ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 4800 ಕೋಟಿ ರೂಪಾಯಿಗಳ ಹಣ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ 2022-23ರಿಂದ 2025-26ರ ಹಣಕಾಸು ವರ್ಷದವರೆಗೆ ಕೇಂದ್ರ ಪ್ರಾಯೋಜಿತ ಯೋಜನೆ “ರೋಮಾಂಚಕ ಗ್ರಾಮ ಕಾರ್ಯಕ್ರಮ” (ವಿವಿಪಿ)ಕ್ಕೆ ತನ್ನ ಅನುಮೋದನೆ ನೀಡಿದೆ.

ಉತ್ತರದ ಗಡಿಯಲ್ಲಿರುವ ವಿಭಾಗದ ಗ್ರಾಮಗಳ ಸಮಗ್ರ ಅಭಿವೃದ್ಧಿಯಿಂದ ಗುರುತಿಸಲಾದ ಗಡಿ ಗ್ರಾಮಗಳಲ್ಲಿ ವಾಸಿಸುವ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲಿದೆ. ಹಾಗೆ ಇದು ಗಡಿ ಪ್ರದೇಶಗಳಲ್ಲಿ ತಮ್ಮ ಜನ್ಮಸ್ಥಳಗಳಲ್ಲೇ ಉಳಿಯಲು ಜನರನ್ನು ಉತ್ತೇಜಿಸಲು ನೆರವಾಗುತ್ತದೆ ಮತ್ತು ಈ ಗ್ರಾಮಗಳಿಂದ ವಲಸೆ ಹೋಗೋದನ್ನು ತಡೆಯುತ್ತದೆ ಮತ್ತು ಗಡಿಯ ಸುಧಾರಿತ ಭದ್ರತೆಯನ್ನು ಹೆಚ್ಚಿಸಲಿದೆ.

ಈ ಯೋಜನೆಯು ದೇಶದ ಉತ್ತರದ ಭೂ ಗಡಿಯುದ್ದಕ್ಕೂ ಇರುವ 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳಲ್ಲಿನ 19 ಜಿಲ್ಲೆಗಳು ಮತ್ತು 46 ಗಡಿ ವಿಭಾಗಗಳ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಮತ್ತು ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಹಣವನ್ನು ಒದಗಿಸಲಿದೆ. ಇದು ಸಮಗ್ರ ಪ್ರಗತಿ ಸಾಧಿಸಲು ಮತ್ತು ಗಡಿ ಪ್ರದೇಶಗಳಲ್ಲಿ ಜನಸಂಖ್ಯೆಯನ್ನು ಉಳಿಸಿಕೊಳ್ಳಲು ನೆರವಾಗಲಿದೆ. ಮೊದಲ ಹಂತದಲ್ಲಿ 663 ಗ್ರಾಮಗಳನ್ನು ಈ ಕಾರ್ಯಕ್ರಮದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು.

ಈ ಯೋಜನೆಯು ಉತ್ತರದ ಗಡಿಯಲ್ಲಿರುವ ಗಡಿ ಗ್ರಾಮಗಳ ಸ್ಥಳೀಯ ನೈಸರ್ಗಿಕ ಮಾನವ ಮತ್ತು ಇತರ ಸಂಪನ್ಮೂಲಗಳ ಆಧಾರದ ಮೇಲೆ ಆರ್ಥಿಕ ಚಾಲಕಶಕ್ತಿಯನ್ನು ಗುರುತಿಸಲು ಮತ್ತು ಅಭಿವೃದ್ಧಿಪಡಿಸಲು ಪೂರಕವಾಗಿದ್ದು, ಸಾಮಾಜಿಕ ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ “ಹಬ್ ಮತ್ತು ಸ್ಪೋಕ್ ಮಾದರಿ” ಯಲ್ಲಿ ಪ್ರಗತಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಇದರಲ್ಲಿ ಸೇರಿದೆ.

ಸಮುದಾಯ ಆಧಾರಿತ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಎನ್.ಜಿ.ಒಗಳು ಇತ್ಯಾದಿಗಳ ಮೂಲಕ “ಒಂದು ಗ್ರಾಮ-ಒಂದು ಉತ್ಪನ್ನ” ಪರಿಕಲ್ಪನೆಯ ಮೇಲೆ ಸುಸ್ಥಿರ ಪರಿಸರ ಕೃಷಿ ವ್ಯವಹಾರಗಳ ಸಾಂಪ್ರದಾಯಿಕ ಜ್ಞಾನ ಮತ್ತು ಪರಂಪರೆ ಮತ್ತು ಅಭಿವೃದ್ಧಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಮೂಲಕ ಯುವಜನರು ಮತ್ತು ಮಹಿಳೆಯರ ಸಬಲೀಕರಣ, ಸ್ಥಳೀಯ ಸಾಂಸ್ಕೃತಿಕ ಪ್ರಚಾರದ ಮೂಲಕ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರೋಮಾಂಚಕ ಗ್ರಾಮ ಕ್ರಿಯಾ ಯೋಜನೆಗಳನ್ನು ಜಿಲ್ಲಾ ಆಡಳಿತವು ಗ್ರಾಮ ಪಂಚಾಯಿತಿಗಳ ಸಹಾಯದಿಂದ ರಚಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯದ ಯೋಜನೆಗಳ ಶೇ.100ರಷ್ಟು ಗರಿಷ್ಠತೆಯನ್ನು ಖಚಿತಪಡಿಸಲಾಗುತ್ತೆ.

ಎಲ್ಲಾ ಹವಾಮಾನದ ರಸ್ತೆಗಳೊಂದಿಗೆ ಸಂಪರ್ಕ, ಕುಡಿಯುವ ನೀರು, 24×7 ವಿದ್ಯುತ್ – ಸೌರ ಮತ್ತು ಪವನ ವಿದ್ಯುತ್ ಗೆ ಗಮನ ಹರಿಸುವುದು, ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕ, ಪ್ರವಾಸಿ ಕೇಂದ್ರಗಳು, ವಿವಿಧೋದ್ದೇಶ ಕೇಂದ್ರಗಳು ಮತ್ತು ಆರೋಗ್ಯ ಹಾಗೂ ಸ್ವಾಸ್ಥ್ಯ ಕೇಂದ್ರಗಳು ಪ್ರಯತ್ನಶೀಲತೆಯ ಫಲಶ್ರುತಿಗಳಾಗಿವೆ. ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮದೊಂದಿಗೆ ಈ ಯೋಜನೆ ಪುನರಾವರ್ತನೆ (ಓವರ್ ಲ್ಯಾಪ್) ಆಗಿರುವುದಿಲ್ಲ. 4800 ಕೋಟಿ ರೂಪಾಯಿಗಳ ಹಣ ಹಂಚಿಕೆಯಲ್ಲಿ 2500 ಕೋಟಿ ರೂ.ಗಳನ್ನು ರಸ್ತೆಗಳಿಗಾಗಿ ಬಳಸಲಾಗುವುದು ಎಂದು ವಿವರಿಸಲಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror