3 ವರ್ಷಗಳಲ್ಲಿ 49 ಹುಲಿ, 237 ಆನೆ ಸಾವು..! | ಇದು ಅಚ್ಚರಿಯಾದರೂ ನಿಜ ಸಂಗತಿ | ಹೀಗಂತ ವರದಿ ನೀಡಿದವರಾರು..?

December 13, 2023
11:42 AM

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 49 ಹುಲಿಗಳು(tigers) ಹಾಗೂ 237 ಆನೆಗಳು( elephants) ಮೃತಪಟ್ಟಿವೆ(died ). ಇದೇ ಅವಧಿಯಲ್ಲಿ ಹುಲಿ ದಾಳಿಯಿಂದ 11 ಹಾಗೂ ಆನೆಗಳ ದಾಳಿಯಿಂದ 84 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ(Forest, Biology and Environment Minister) ಈಶ್ವರ ಬಿ.ಖಂಡ್ರೆ(Ishwara B. Khandre) ತಿಳಿಸಿದ್ದಾರೆ.

Advertisement
Advertisement
Advertisement

ಬೆಳಗಾವಿಯ(Belagavi) ವಿಧಾನ ಪರಿಷತ್ತಿನಲ್ಲಿ(Legislative Council) ಸದಸ್ಯ ಮಧು ಜಿ.ಮಾದೇಗೌಡ( Madhu G. Made Gowda) ಅವರ ಪ್ರಶ್ನೆಗೆ ಉತ್ತರ ನೀಡಿರುವ , 2020-21ರಲ್ಲಿ 14 ಹುಲಿಗಳು, 74 ಆನೆಗಳು, 2021-22ರಲ್ಲಿ 19 ಹುಲಿಗಳು, 90 ಆನೆಗಳು ಹಾಗೂ 2022-23ರಲ್ಲಿ 16 ಹುಲಿಗಳು, 73 ಆನೆಗಳು ಮೃತಪಟ್ಟಿವೆ ಎಂದು ವಿವರ ನೀಡಿದ್ದಾರೆ.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ‘ಪ್ರಾಜೆಕ್ಟ್ ಟೈಗರ್’ ಮತ್ತು ‘ಪ್ರಾಜೆಕ್ಟ್ ಎಲಿಫೆಂಟ್’ ಅಡಿಯಲ್ಲಿ ಹುಲಿ ಮತ್ತು ಅನೆಗಳ ಆವಾಸ ಸ್ಥಾನಗಳ ಸಂರಕ್ಷಣೆಗಾಗಿ ಕ್ರಮವಾಗಿ 6782.14 ಲಕ್ಷ ರೂ. ಮತ್ತು 1312.41 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಪರಿಹಾರ: 3 ವರ್ಷಗಳಲ್ಲಿ ಹುಲಿ ದಾಳಿಯಿಂದ ಮೃತಪಟ್ಟ 11 ಮಂದಿಯ ಕುಟುಂಬಗಳಿಗೆ 105 ಲಕ್ಷ ರೂ. ಹಾಗೂ ಆನೆ ದಾಳಿಯಿಂದ ಮೃತಪಟ್ಟ 84 ಮಂದಿಯ ಕುಟುಂಬಗಳಿಗೆ 695 ಲಕ್ಷ ರೂ. ಪರಿಹಾರ ಮೊತ್ತವನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.

Advertisement
  • ಅಂತರ್ಜಾಲ ಮಾಹಿತಿ

In the last three years, 49 tigers and 237 elephants have died in the state. In the same period, 11 people lost their lives due to tiger attacks and 84 people lost their lives due to elephant attacks, said Forest, Biology and Environment Minister Ishwara B. Khandre. In response to a question by Member Madhu G. Made Gowda in the Legislative Council of Belgaum.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror