5 ಒಳ್ಳೆಯ ಅಭ್ಯಾಸ , ಮಳೆಗಾಲ ರೋಗಗಳಿಂದ ದೂರ ಇರಲು

 

Advertisement

ಡಾ.ಆದಿತ್ಯ ಚಣಿಲ
BHMS(Intern)

Advertisement

 

 

Advertisement

 

ಮಳೆಗಾಲ ಎಂದರೆ ವಿವಿಧ ರೋಗಗಳು ಮನುಷ್ಯನನ್ನು  ಕಾಡುತ್ತವೆ ಎಂಬ ಮಾತಿದೆ. ಆದರೆ ಅಪಾಯವಾಗುವ ಮುನ್ನವೇ ಮುನ್ನಚ್ಚರಿಕೆ ವಹಿಸುವುದು ಉತ್ತಮ. ಹೀಗಾಗಿ ಮಳೆಗಾದಲ್ಲಿ  ಮುನ್ನೆಚ್ಚರಿಕಾ ಕ್ರಮವಾಗಿ ನಾವೇನು ಮಾಡಬಹುದು ?

Advertisement

1. ಮಳೆ ನೀರು ಯಾವುದೇ ಪುಟ್ಟ ತೊಟ್ಟಿ ಪ್ಲಾಸ್ಟಿಕ್ನಲ್ಲಿ ನಿಂತುಕೊಳ್ಳದಂತೆ ಮಾಡುವುದು.   ಈ ತರಹ ಮಾಡುವುದರಿಂದ Mosquito borne (ಸೊಳ್ಳೆಯ ಮುಖಾಂತರ)ಹರಡುವಂತಹ ರೋಗಗಳು ಮಲೇರಿಯಾ ಡೆಂಗೂ ಜ್ವರ,ವಾಂತಿ ಮುಂತಾದ ಕಾಯಿಲೆಗಳನ್ನು ತಡೆಗಟ್ಟಬಹುದು.

ಹೀಗೆ ಮಲೇರಿಯಾ ಬರುತ್ತದೆ:
ಒಮ್ಮೆ ಈ ಸೊಳ್ಳೆಗಳು ಮಲೇರಿಯಾ ಸೋಂಕಿತ ಮನುಷ್ಯನನ್ನು ಕಚ್ಚಿದಾಗ ಅದು ಮತ್ತೊಮ್ಮೆ ಮಲೇರಿಯಾ ಸೋಂಕಿತನಲ್ಲದ ವ್ಯಕ್ತಿಗೆ ಕಚ್ಚಿದರೆ ಮಲೇರಿಯಾ ಹರಡುತ್ತದೆ ಈ ಮಲೇರಿಯಾ ಹರಡುವ ಹೆಣ್ಣು ಅನಾಫಿಲಿಸ್ ಸೊಳ್ಳೆಯು ಕಲುಷಿತ ಶೇಖರಣೆಯಾದ ನೀರಿನಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತದೆ .ಈ ರೋಗದ ಲಕ್ಷಣಗಳು: ತಲೆಸುತ್ತುವುದು ಜ್ವರ ಚಳಿ ವಾಕಡಿಕೆ ಮುಂತಾದವುಗಳು ಮೊದಲನೆಯದಾಗಿ ಕಾಣುವ ರೋಗದ ಲಕ್ಷಣಗಳು.

Advertisement

 

2. ರಸ್ತೆ ಬದಿ ಸಿಗುವ ತಿಂಡಿ ಪದಾರ್ಥಗಳನ್ನು ತಿನ್ನುವುದನ್ನು ಸದ್ಯ ನಿಲ್ಲಿಸಿ:
ಏಕೆಂದರೆ ಇದರಲ್ಲಿ Germ(ರೋಗಾಣುವಿನ ಅಂಶ)ದ ಬೆಳವಣಿಗೆ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ.ಇದು ಮಳೆಗಾಲದಲ್ಲಿ ಹೆಚ್ಚು.  ಏಕೆಂದರೆ ಕಲುಷಿತವಾದ ನೀರಿನ ಬಳಿ ಇರುವ ಅಂಗಡಿಯಲ್ಲಿ ತಯಾರಾದ ವಸ್ತುವಿನಲ್ಲಿ ರೋಗಾಣುಗಳಿದ್ದರೆ ಅದರಿಂದ ರೋಗ ಹರಡುವುದು ಸುಲಭ.

Advertisement

 

3.ಮಳೆಯಲ್ಲಿ ನೆನೆಯುವುದನ್ನು ನಿಲ್ಲಿಸಿ ಅಥವಾ ನೆನೆದರೂ ಶುಚಿಯಾಗಿರುವ ಬೆಚ್ಚನೆಯ ಬಟ್ಟೆಯಿಂದ ಪೂರ್ತಿ ಮಯ್ಯನ್ನು ಒರೆಸಿಕೊಳ್ಳಿ.ಮುಖ್ಯವಾಗಿ ತಲೆಯನ್ನು ಒದ್ದೆಯಾಗಿದಲು ಬಿಡದಿರಿ.

Advertisement

4.ಕೈಯನ್ನು ಶುಭ್ರವಾಗಿ ಒರೆಸಿರಿ ಅಥವಾ ತೊಳೆಯಿರಿ . ಇದು ಅತ್ಯಂತ ಮುಖ್ಯವಾದ ಅಂಶ ಮತ್ತು ಅತಿ ಹೆಚ್ಚು ರೋಗಗಳು ಬರುವ ದಾರಿಯಾಗಿದೆ.

 

Advertisement

5.ಆಹಾರ ಪದಾರ್ಥದಲ್ಲಿ ಕೊಂಚ ಬದಲಾವಣೆ ಅಗತ್ಯ. ಹಣ್ಣುಗಳು  – ಇದು ದೇಹಕ್ಕೆ Enegry(ತ್ರಾಣ) ಬರಲು ಸಹಾಯ ಮಾಡುತ್ತದೆ. ಮಾವು ,ದಾಳಿಂಬೆ ,ಪೇರಳೆ ಇತ್ಯಾದಿ . ಆದಷ್ಟು ಹಸಿರು ತರಕಾರಿ ಧಾನ್ಯ ಮುಂತಾದವುಗಳನ್ನು ನಿತ್ಯದ ಊಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿರಲಿ. ಕೊಂಚ ತಂಪಾದ ಪಾನಿಯಕ್ಕೆ ತಡೆ ಇಟ್ಟರೆ ನಿಮ್ಮ ಈ ಮಳೆಗಾಲ ರೋಗಮುಕ್ತ ಮಳೆಗಾಲವಾಗುವುದರಲ್ಲಿ ಸಂಶಯವೇ ಇಲ್ಲ.

 

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "5 ಒಳ್ಳೆಯ ಅಭ್ಯಾಸ , ಮಳೆಗಾಲ ರೋಗಗಳಿಂದ ದೂರ ಇರಲು"

Leave a comment

Your email address will not be published.


*