ಸುಳ್ಯ: ನೀರಿಲ್ಲದೆ ಜನರು ಹಪ ಹಪಿಸುತ್ತರುವ ಇಂದಿನ ದಿನಗಳಲ್ಲಿ 5 ರೂಗೆ 20 ಲೀಟರ್ ಶುದ್ಧ ಕುಡಿಯುವ ನೀರನ್ನು ವಿತರಿಸುವ ಸುಳ್ಯ ನಗರ ಪಂಚಾಯತ್ ನ ಹೊಸ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಘಟಕಕ್ಕೆ ಭೇಟಿ ನೀಡಿದ ಸಚಿವರು ಘಟಕದ ವಿವರ ತಿಳಿದು ಶಹಬ್ಬಾಸ್ ಎಂದ ಸಚಿವರು ಘಟಕವನ್ನು ಚೆನ್ನಾಗಿ ನಿರ್ವಹಣೆ ಮಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು. ನಗರ ಪಂಚಾಯತ್ ಸಮೀಪ ಮತ್ತು ಗಾಂಧಿನಗರಗಳಲ್ಲಿ ಎರಡು ಶುದ್ಧ ನೀರಿನ ಘಟಕವನ್ನು ನಗರ ಪಂಚಾಯತ್ ವತಿಯಿಂದ ತೆರೆಯಲಾಗಿದೆ.
Advertisement
ಶಾಸಕ ಎಸ್.ಅಂಗಾರ, ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್, ನ.ಪಂ.ಸದಸ್ಯರಾದ ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್ ಕೊಡೆಂಕೇರಿ, ಡೇವಿಡ್ ಧೀರಾ ಕ್ರಾಸ್ತಾ, ಶರೀಫ್ ಕಂಠಿ, ಪ್ರಮುಖರಾದ ಟಿ.ಎಂ.ಶಹೀದ್, ಎಂ.ಬಿ.ಸದಾಶಿವ ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement