2030ರ ವೇಳೆಗೆ ವಾರ್ಷಿಕ 5 ದಶಲಕ್ಷ ಮೆಟ್ರಿಕ್ ಟನ್ ಹಸಿರು ಜಲಜನಕ ಉತ್ಪಾದನಾ ಗುರಿ ಹೊಂದಿದ್ದು, 2047ರ ವೇಳೆಗೆ ಈ ಪ್ರಮಾಣ 25 ದಶಲಕ್ಷ ಮೆಟ್ರಿಕ್ ಟನ್ ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ದೆಹಲಿಯಲ್ಲಿ ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
MINT SUSTAINABILITY ಶೃಂಗಸಭೆಯ 3ನೇ ಅವೃತ್ತಿಯಲ್ಲಿ ಭಾಗಿಯಾಗಿದ್ದ ಅವರು, ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಗೆ ದೇಶದಲ್ಲಿ ಅಭೂತ ಪೂರ್ವ ಬೆಂಬಲ ದೊರೆಯುತ್ತಿದೆ. ಈ ಯೋಜನೆಯಡಿ 1 ಕೋಟಿ ಮನೆಗಳಿಗೆ ಮಾಸಿಕ 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಲಾಗಿದೆ. ಜೊತೆಗೆ ಪ್ರಧಾನಮಂತ್ರಿ ಕುಸುಮ್ ಯೋಜನೆ ಮೂಲಕವೂ ರೈತರಿಗೆ ಸೌರಶಕ್ತಿ ಪಂಪ್ ಸೆಟ್ ಗಳಿಗಾಗಿ ಸಹಾಯಧನ ಒದಗಿಸಲಾಗುತ್ತಿದೆ ಎಂದರು.ಪ್ರಧಾನಮಂತ್ರಿ ನೇತೃತ್ವದ ಸರ್ಕಾರ ನವೀಕರಿಸಬಹುದಾದ ಇಂಧನ ಮೂಲಗಳನ್ನು ಉತ್ತೇಜಿಸಲು ಹೆಚ್ಚಿನ ಆದ್ಯತೆ ನೀಡಿದ್ದು, ಹಸಿರು ಇಂಧನ ಬಳಕೆಯಲ್ಲಿ ಭಾರತ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಸಾಗುತ್ತಿದೆ ಎಂದು ತಿಳಿಸಿದರು. ಸೌರ ಘಟಕ ಉತ್ತೇಜಿಸಲು 24 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಇದರಿಂದ 13 ಸಾವಿರ ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ 9 ಸಾವಿರ ಮೆಗಾವ್ಯಾಟ್ ಸೌರಶಕ್ತಿ , 4 ಸಾವಿರ ಮೆಗಾ ವ್ಯಾಟ್ ಪವನ ಶಕ್ತಿ ಜೊತೆಗೆ ಲಡಾಖ್ ನಲ್ಲಿ 12 ಸಾವಿರ ಮೆಗಾ ವ್ಯಾಟ್ ಬ್ಯಾಟರಿ ಆಧಾರಿತ ಇಂಧನ ಶಕ್ತಿ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
In Delhi, Union Minister of Renewable Energy Pralhad Joshi announced that the target for green hydrogen production is 5 million metric tons by 2030 and aims to increase it to 25 million metric tons by 2047.