#RubberMarket | ಈ ವರ್ಷ ಶೇ.5 ರಷ್ಟು ಹೆಚ್ಚು ರಬ್ಬರ್‌ ಬೇಡಿಕೆ | ರಬ್ಬರ್‌ ಉದ್ಯಮದ ನಿರೀಕ್ಷೆ |

August 18, 2023
11:40 AM
ಕಳೆದ ಹಣಕಾಸು ವರ್ಷದಲ್ಲಿ ಭಾರತದ ನೈಸರ್ಗಿಕ ರಬ್ಬರ್ ಉತ್ಪಾದನೆಯು 8 ಲಕ್ಷ ಮೆಟ್ರಿಕ್ ಟನ್ ಆಗಿತ್ತು. ಈ ವರ್ಷ ಶೇ.5 ರಷ್ಟು ಹೆಚ್ಚು ಭಾರತ ರಬ್ಬರ್ ಉದ್ಯಮದ ಬೇಡಿಕೆ ಇದೆ. ಇದು ರಬ್ಬರ್‌ ಬೆಳೆಗಾರರು ಗಮನಿಸಬೇಕಾದ ಅಂಶವಾಗಿದೆ.

ಭಾರತದ ರಬ್ಬರ್‌ ಉದ್ಯಮವು ಈ ಬಾರಿ ಶೇ.5 ರಷ್ಟು ಹೆಚ್ಚು ರಬ್ಬರ್‌ ಬಳಕೆಯ ನಿರೀಕ್ಷೆಯಲ್ಲಿದೆ. ಹೀಗಾಗಿ ಈ ವರ್ಷ 5% ಹೆಚ್ಚಿನ  ರಬ್ಬರ್ ಉತ್ಪಾದನೆಯನ್ನು ರಬ್ಬರ್‌ ಉದ್ಯಮವು ನಿರೀಕ್ಷೆ ಮಾಡುತ್ತದೆ ಎಂದು ಅಖಿಲ ಭಾರತ ರಬ್ಬರ್ ಇಂಡಸ್ಟ್ರಿ ಅಸೋಸಿಯೇಷನ್ ​​ಅಧ್ಯಕ್ಷ ರಮೇಶ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement
Advertisement
Advertisement

ಕಳೆದ ಹಣಕಾಸು ವರ್ಷದಲ್ಲಿ ಭಾರತದ ನೈಸರ್ಗಿಕ ರಬ್ಬರ್ ಉತ್ಪಾದನೆಯು 8 ಲಕ್ಷ ಮೆಟ್ರಿಕ್ ಟನ್ ಆಗಿತ್ತು. ಈ ವರ್ಷ  ಇದಕ್ಕಿಂತ ಶೇ.5 ರಷ್ಟು ಹೆಚ್ಚು ರಬ್ಬರ್‌ ಉತ್ಪಾದನೆಯ ನಿರೀಕ್ಷೆಯಲ್ಲಿದ್ದೇವೆ ಎಂದು ರಮೇಶ್‌ ಹೇಳಿದ್ದಾರೆ. Economic Times ಗೆ ನೀಡಿದ ಮಾಹಿತಿಯಲ್ಲಿ ಈ ಅಂಶವನ್ನು ರಮೇಶ್‌ ಬಹಿರಂಗಪಡಿಸಿದ್ದಾರೆ. ಬೆಳೆಯುತ್ತಿರುವ ಅಟೊಮೊಬೈಲ್‌ ಕ್ಷೇತ್ರದ ಕಾರಣದಿಂದ ಟಯರ್‌ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ರಬ್ಬರ್‌ ಬೇಡಿಕೆ ಹೆಚ್ಚಿದೆ. ರಬ್ಬರ್ ಉದ್ಯಮದ ಬೆಳವಣಿಗೆಯ ಹಿಂದಿನ ದೊಡ್ಡ ಅಂಶ ಆಟೋಮೊಬೈಲ್ ಉದ್ಯಮದ ಬೆಳವಣಿಗೆ.

Advertisement

ಕಳೆದ ವರ್ಷ ಬೇಡಿಕೆಯ ಸರಿಯಾದ ಪೂರೈಕೆ ಇಲ್ಲದ ಕಾರಣದಿಂದ ಭಾರತದಲ್ಲಿ ಹೆಚ್ಚುತ್ತಿರುವ ರಬ್ಬರ್ ಬೇಡಿಕೆಯಿಂದಾಗಿ ಕಳೆದ ಹಣಕಾಸು ವರ್ಷದಲ್ಲಿ ಥೈಲ್ಯಾಂಡ್, ಮಲೇಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂನಿಂದ ಸುಮಾರು 5 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿದೆ ಎಂದು‌ ರಮೇಶ್ ಕೇಜ್ರಿವಾಲ್ ಹೇಳಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ
February 5, 2025
6:45 AM
by: The Rural Mirror ಸುದ್ದಿಜಾಲ
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ  ಬೆಳೆಗಳಿಗೆ ರಾಸಾಯನಿಕ ಬಳಸಬೇಡಿ
February 5, 2025
6:42 AM
by: The Rural Mirror ಸುದ್ದಿಜಾಲ
ಕಾರವಾರದಲ್ಲಿ ಎ.18-22 ವರೆಗೆ ಕರಾವಳಿ ಉತ್ಸವ
February 5, 2025
6:40 AM
by: The Rural Mirror ಸುದ್ದಿಜಾಲ
ಕೋಲಾರ ಜಿಲ್ಲೆ | ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ
February 5, 2025
6:37 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror