ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿಯೇ ಪಂಚತಾರಾ ಹೋಟೆಲ್‌ನ್ನು ತೆರೆಯಲಾಗಿದೆ. ಒಂಟೆಗಳಿಗಾಗಿಯೇ ತೆರೆಯಲಾಗಿರುವ ಟ್ಯಾಟ್‌ಮ್ಯಾನ್ ಎಂಬ ಹೆಸರಿನ ಪಂಚತಾರಾ ಹೋಟೆಲ್ ಇದು ವಿಶದಲ್ಲೇ ಮೊದಲು ನಿರ್ಮಾಣಗೊಂಡ ಯೋಜನೆಯಾಗಿದೆ. ಸೌದಿ ಅರೇಬಿಯಾದಲ್ಲಿ 6ನೇ ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವಕ್ಕಾಗಿ ಹೋಟೆಲ್‌ನ್ನು ತೆರೆಯಲಾಗಿದೆ.
ಒಂಟೆಗಳು ವಿಶ್ರಾಂತಿ ಪಡೆಯಲು ಸುಮಾರು 120 ಕ್ಕೂ ಹೆಚ್ಚು ಕೊಠಡಿಗಳಿವೆ. ಇಲ್ಲಿ ಒಂಟೆಗಳಿಗಾಗಿ ರೂಂ ಸರ್ವೀಸ್, ಹೌಸ್ ಕೀಪಿಂಗ್, ಒಂಟೆಗಳ ಆರೈಕೆ, ಕಾವಲು ಮತ್ತು ಭದ್ರತೆ ಇನ್ನೂ ಮೊದಲಾದ ಸೇವಗಳನ್ನು ನೀಡಲಾಗಿದೆ. ಮಾತ್ರವಲ್ಲ ಪ್ರಸ್ತುತ 50ಕ್ಕೂ ಹೆಚ್ಚು ಜನರು ಇಲ್ಲಿ ತಮ್ಮ ಒಂಟೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದರ ಕಾರ್ಯಶೈಲಿ ವಿಭಿನ್ನ ಮತ್ತು ನವೀನವಾಗಿದೆ. ಸ್ವಚ್ಛಗೊಳಿಸುವ ಕೊಠಡಿಗಳಿಂದ ಹಿಡಿದು ಬೆಚ್ಚಗಿನ ಹವಾನಿಯಂತ್ರಣ ಸೌಲಭ್ಯಗಳವರೆಗೆ ಎಲ್ಲವೂ ಇಲ್ಲಿ ಲಭ್ಯವಿದೆ. ಅದು ಅಲ್ಲದೇ ಕೊಠಡಿಗಳಿಗೆ ಪ್ರವೇಶಿಸುವ ಮೊದಲು ಒಂಟೆಗಳನ್ನು ಅಗತ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ.
ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವದಲ್ಲಿ ಸಾವಿರಕ್ಕೂ ಹೆಚ್ಚು ಒಂಟೆಗಳು ಪಾಲ್ಗೊಳ್ಳುತ್ತದೆ.ಇಲ್ಲಿ ಒಂಟೆ ಓಟ, ಒಂಟೆ ಸೌಂದರ್ಯ ಸ್ಪರ್ಧೆ ಮತ್ತು ಮಾರಾಟವಾಗಿದೆ. ಮಾತ್ರವಲ್ಲದೆ ಅತ್ಯಂತ ಸುಂದರವಾದ ಒಂಟೆಯ ಮಾಲೀಕರು $ 66 ಮಿಲಿಯನ್ ಬಹುಮಾನವನ್ನು ಸ್ವೀಕರಿಸುತ್ತಾರೆ.
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…
ರೈತರಿಗೆ ನ್ಯಾಯ ಕೊಡಲು MSPಗೆ ವೈಜ್ಞಾನಿಕ ಆಧಾರ ಅಗತ್ಯ ಎಂದು ಕೋಡಿಹಳ್ಳಿ ಚಂದ್ರಶೇಖರ್…
ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…