ಒಂದು ಗಂಟೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಯಶಸ್ವಿ ಅಭಿಯಾನ | ದಾಖಲೆ ನಿರ್ಮಿಸಿದ ಪ್ರಾದೇಶಿಕ ಸೇನೆ |

September 23, 2024
8:34 PM
ಜೈಸಲ್ಮೇರ್‌ನಲ್ಲಿ ವಿಶೇಷ ಪ್ಲಾಂಟೇಶನ್ ಡ್ರೈವ್ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷ 20 ಸಾವಿರ ಸಸಿಗಳನ್ನು ನೆಡಲಾಗಿದೆ.

ಒಂದು ಗಂಟೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪ್ರಾದೇಶಿ ಸೇನೆಯು ಇತಿಹಾಸ ಸೃಷ್ಟಿಸಿದೆ. ಇದೀಗ ಸಾಧನೆಯು ವಿಶ್ವದಾಖಲೆಯಾಗಿದೆ.…..ಮುಂದೆ ಓದಿ….

Advertisement
Advertisement
Advertisement

Advertisement

ಭಾರತ-ಪಾಕಿಸ್ತಾನ ಗಡಿ ಭಾಗಕ್ಕೆ ಸಮೀಪವಿರುವ ಜೈಸಲ್ಮೇರ್‌ ಜಿಲ್ಲೆಯಲ್ಲಿ ಈ ದಾಖಲೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಹಸಿರು ಯೋಜನೆಯನ್ನು ಸಂಪೂರ್ಣವಾಗಿ ಜಾರಿ ಮಾಡುವ ಮಹತ್ವದ ಗುರಿಯನ್ನೂ ಹೊಂದಲಾಗಿದೆ.  ಇಲ್ಲಿನ ಪ್ರಾದೇಶಿಕ ಸೇನೆ ಮತ್ತು 128 ಪದಾತಿದಳ ಬೆಟಾಲಿಯನ್ ಭಾನುವಾರ ಈ ಸಾಧನೆ ಮಾಡಿದೆ.  ಸೇನೆಯ ಈ ಕಾರ್ಯವನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವ ಭೂಪೇಂದರ್ ಯಾದವ್ ಅವರು  ಸೇನೆಯ ಪರಿಸರ ಕಾರ್ಯಪಡೆಯ  ಕಾರ್ಯವನ್ನು ಅಭಿನಂದಿಸಿದ್ದಾರೆ. ಜೈಸಲ್ಮೇರ್‌ನಲ್ಲಿ ವಿಶೇಷ ಪ್ಲಾಂಟೇಶನ್ ಡ್ರೈವ್ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷ 20 ಸಾವಿರ ಸಸಿಗಳನ್ನು ನೆಡಲಾಗಿದೆ ಎಂದು ಹೇಳಿದ್ದಾರೆ.

ಈ ಯೋಜನೆಯು ಪ್ರಧಾನ ಮಂತ್ರಿಯವರ ಅಭಿಯಾನದ “ಏಕ್ ಪೆಡ್ ಮಾ ಕೆ ನಾಮ್” ಮತ್ತು ಪ್ರಾದೇಶಿಕ ಸೇನೆಯ “ಭಾಗವಹಿಸುವಿಕೆ ಮತ್ತು ಜವಾಬ್ದಾರಿ” ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಅಭಿಯಾನದ ರೂಪದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಮೂಲಕ   ಪರಿಸರದ ಉಳಿವು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ.

Advertisement

‘ಮರಗಳನ್ನು ರಕ್ಷಿಸಿ’ ಎಂಬ ಶೀರ್ಷಿಕೆ ಅಡಿಯಲ್ಲಿ ‘ಮರಗಳನ್ನು ರಕ್ಷಿಸುವವರಿಗೆ ರಕ್ಷಣೆ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಅಭಿಯಾನದಲ್ಲಿ ಭಾರತೀಯ ಸೇನೆ, ಭಾರತೀಯ ವಾಯುಪಡೆ, ಗಡಿ ಭದ್ರತಾ ಪಡೆ, ಜೈಸಲ್ಮೇರ್ ಜಿಲ್ಲಾಡಳಿತ, ಪೊಲೀಸ್, ಗೃಹರಕ್ಷಕ ದಳ, ಸಂಕಲ್ಪ ಎನ್‌ಜಿಒ ಮತ್ತು ಸ್ಥಳೀಯ ವಿದ್ಯಾರ್ಥಿಗಳು  ಭಾಗವಹಿಸಿದ್ದರು. ಜೈಸಲ್ಮೇರ್‌ನ ಏಳು ಕಡೆಗಳಲ್ಲಿ ಏಕಕಾಲದಲ್ಲಿ ಗಿಡ ನಡೆಸಲಾಯಿತು.  ಈ ಕಾರ್ಯಕ್ರಮವು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಿಂದ  ಗುರುತಿಸಲ್ಪಟ್ಟಿದೆ. ಒಂದು ಗಂಟೆಯಲ್ಲಿ ತಂಡವೊಂದು ನೆಟ್ಟ ಅತಿ ಹೆಚ್ಚು ಸಸಿಗಳು ಹಾಗೂ ಒಂದು ಗಂಟೆಯಲ್ಲಿ ಮಹಿಳೆಯರ ತಂಡ ನೆಟ್ಟ ಅತಿ ಹೆಚ್ಚು ಸಸಿಗಳು ಮತ್ತು ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅತಿ ಹೆಚ್ಚು ಜನರು ಸಸಿಗಳನ್ನು ನೆಟ್ಟಿರುವುದು ಈ ದಾಖಲೆಯಲ್ಲಿ ಸೇರಿದೆ.

Advertisement

A historic plantation drive took place in Jaisalmer on September 22, where the 128 Infantry Battalion of the Territorial Army and the Ecological Task Force planted more than 5 lakh saplings in just one hour. Union Minister for Environment, Forest and Climate Change, Bhupendra Yadav, congratulated all participants for this significant achievement.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror