6 ವರ್ಷಗಳ ನಂತರ ತಾಯಿ ಮಕ್ಕಳು ಪುನರ್ಮಿಲನ ಆದದ್ದು ಹೇಗೆ ಗೊತ್ತಾ ?

November 25, 2019
6:00 PM
ಪುತ್ತೂರು: ಇದು ಯಾವುದೇ ಸೀರಿಯಲ್ ಅಲ್ಲ, ಸಿನಿಮಾವೂ ಅಲ್ಲ. ಇದು ಮಾನವೀಯ ಕಾರ್ಯ, ಸೇವೆಯ ಫಲ. ಈ ಕಾರಣದಿಂದ 6 ವರ್ಷಗಳ ನಂತರ ತಾಯಿ ಮಕ್ಕಳು ಒಂದಾದರು. ಪಾಟ್ನಾ ಜಿಲ್ಲೆಯ ನೆಹಾರ್ ಗ್ರಾಮದ ಈ ಕುಟುಂಬದ ಮಕ್ಕಳು ಮತ್ತೆ ಒಂದಾದ್ದು ಕಾಸರಗೋಡು ಜಿಲ್ಲೆಯ ಕರ್ನಾಟಕ ಗಡಿಭಾಗದ ದೈಗೋಳಿಯ ಸಾಯಿನಿಕೇತನ ಆಶ್ರಮದಲ್ಲಿ. ಅದು ಹೇಗೆ ?
ಈ ಮಾನವೀಯ ಕಾರ್ಯದ,  ಸೇವಾ ಕಾರ್ಯ  ಅನೇಕ ಸಮಯಗಳಿಂದ ನಡೆಯುತ್ತಿದೆ. ಹಾಗೆಂದು ಇದರ ಪ್ರಚಾರವೂ ಇಲ್ಲ. ಆದರೆ ಈ ಸೇವೆ ಸಮಾಜಕ್ಕೆ ತಿಳಿಯಬೇಕು, ಮಾನವೀಯ ಸೇವೆಯ ಬೆಳಕಿಗೆ ಬರಬೇಕು. ಇದು ಸುಳ್ಯನ್ಯೂಸ್.ಕಾಂ ಕಾಳಜಿ. ಏಕೆಂದರೆ ರಸ್ತೆ ಬದಿಯಲ್ಲಿ  ಮಾನಸಿಕ ವಿಕಲಚೇತನರಾಗಿ ಓಡಾಡುವ ಯಾರೂ ಕೂಡಾ ಕುಟುಂಬ ಇಲ್ಲದವರಲ್ಲ, ಅವರಿಗೂ ಬದುಕುವ ಹಕ್ಕಿದೆ. ಇನ್ನೆಷ್ಟೂ ಜನ ಇಂತಹವರು ಬೀದಿಯಲ್ಲಿದ್ದಾರೆ. ಸಾರ್ವಜನಿಕರ ಸಹಕಾರ ದೊರೆತಷ್ಟೂ ಇನ್ನಷ್ಟು ಜನರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಬಹುದು.  ಅದಕ್ಕೆ ಬೇಕಾದ್ದು ಇಂತಹ ಸೇವೆ.  ಆ ಘಟನೆ ಏನಾಯಿತು….?
ಪಾಟ್ನಾ ಜಿಲ್ಲೆಯ ನೆಹಾರ್ ಗ್ರಾಮದ ಮನೆಯೊಂದರಲ್ಲಿ ಕಾರೂ ಕುಮಾರನ ಪುತ್ರನ ಮೊದಲ ಹುಟ್ಟು ಹಬ್ಬದ ಸಂಭ್ರಮ. ಆದರೆ ಮನೆಯವರ ಮನದಾಳದಲ್ಲಿ ಮಡುಗಟ್ಟಿದ ನೋವು.
ಕಳೆದ 6 ವರ್ಷಗಳಿಂದ ಮನೆಯ ಗೃಹ ಲಕ್ಷ್ಮಿ ಕಾರೂ ಕುಮಾರನ ತಾಯಿ ಧರ್ಮಶೀಲಾ(ಕಾಲೋ) ಕಾಣೆಯಾಗಿದ್ದರು. ಸ್ವಲ್ಪ ಮಾನಸಿಕ ವಿಕಲ್ಪತೆಗೊಳಗಾಗಿದ್ದ ಆಕೆ ಮನೆ ಬಿಟ್ಟು ಹೋಗಿದ್ದವಳು ಎಲ್ಲಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಪೊಲೀಸ್ ದೂರು ಎಲ್ಲವೂ ಆಗಿದ್ದರೂ ತಾಯಿ ಕಾಣೆಯಾಗಿದ್ದರು.
ಆದರೆ ಮನೆಯವರ ಪ್ರಯತ್ನ, ಪ್ರಾರ್ಥನೆಗೆ ದೈವ ಸಹಾಯ ಪೋಲೀಸರ ಮುಖಾಂತರ ಮನೆ ತಲುಪಿತು.  ತಾಯಿ ಧರ್ಮಶೀಲಾ ಮರಳಿ ಮನೆಗೆ ಬರುವರೆಂಬ ಸಂತಸ ಮನೆಯ ಸಂಭ್ರಮಕ್ಕೆ ಕಳೆ ನೀಡಿತು.
ಕಳೆದ ಮೂರು ವರ್ಷಗಳಿಂದ ದೈಗೋಳಿಯ ಸಾಯಿನಿಕೇತನ ಸೇವಾಶ್ರಮದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರೂ ಭಾಷಾ ಸಮಸ್ಯೆಯಿಂದ ಮನೆಯವರನ್ನು ತಲುಪಲಾಗದ ಧರ್ಮಶೀಲಾ(ಕಾಲೋ) ಗೆ ಆಕಸ್ಮಿಕವಾಗಿ ಅರುಣಾಚಲ ಪ್ರದೇಶದ ಅಸಿಸ್ಟೆಂಟ್ ಕಮಿಷನರ್ ಕುಮಾರಿ ಅಂಜು ಉಪಾಧ್ಯಾಯ ಸಾಯಿ ನಿಕೇತನ ಆಶ್ರಮಕ್ಕೆ  ನೀಡಿದ ಭೇಟಿ ಮನೆ ತಲುಪಲು ಸಹಕರಿಸಿತು. ಆಶ್ರಮದ ವ್ಯವಸ್ಥಾಪಕರ ವಿನಂತಿಯ ಮೇರೆಗೆ ಕೆಲವಾರು  ಉತ್ತರ ಭಾರತದ ನಿವಾಸಿಗಳನ್ನು ಅವರವರ ಗ್ರಾಮ್ಯ ಭಾಷೆಯಲ್ಲಿ ಮಾತನಾಡಿಸಿ, ಅವರು ಕೊಟ್ಟ ಮಾಹಿತಿಯನ್ನು ಆಧರಿಸಿ ವಿಳಾಸ ಪತ್ತೆ ಹಚ್ಚುವ ಕಾರ್ಯ ಮಾಡಲಾಯಿತು.
ಪಾಟ್ನಾದ ನೆಹಾರ್ ಹಳ್ಳಿಯಿಂದ ಬಂದ ಪುತ್ರ ಹಾಗೂ ಸೋದರಳಿಯ ಕಾಲೋರವರನ್ನು ಪ್ರೀತಿಯಿಂದ ಮನೆಗೆ ಕರದೊಯ್ದರು. ಬೀದಿಯಲ್ಲಿ ಅಲೆದಾಡುತ್ತಿದ್ದ  ಅವರನ್ನು ಕರೆದುಕೊಂಡು ಬಂದು ಚಿಕಿತ್ಸೆ ನೀಡಿ, ಸಲಹಿ ಇದೀಗ ಮನೆಗೆ ಕಳಿಸುತ್ತಿರುವುದಕ್ಕೆ ಸಾಯಿ ನಿಕೇತನ ಮಾನಸಿಕ ಪುನಶ್ಚೇತನ ಕೆಂದ್ರಕ್ಕೆ   ಧನ್ಯವಾದಗಳನ್ನು ಅರ್ಪಿಸಿದರೆ ಕೇಂದ್ರದವರಿಗೆ ತಾಯಿಮಕ್ಕಳನ್ನು ಒಂದುಗೂಡಿಸಿದ ತೃಪ್ತಿ.  ಈ ಕಾರ್ಯಕ್ಕೆ ಸೇತುವಾದ್ದು  ಅಸಿಸ್ಟೆಂಟ್ ಕಮಿಷನರ್  ಎನ್ನುತ್ತಾರೆ ಆಶ್ರಮದ ವ್ಯವಸ್ಥಾಪಕ ಡಾ.ಉದಯಕುಮಾರ್ ನೂಜಿ.
ಈ ಮಾನವೀಯ ಕಾರ್ಯ ಮಾಡಿರುವ ಸಾಯಿನಿಕೇತನ ಆಶ್ರಮದ ವ್ಯವಸ್ಥಾಪಕರಿಗೆ ನೈತಿಕ ಬೆಂಬಲ ನೀಡುವಿರಾದರೆ ಈ ಸಂಖ್ಯೆಗೆ ಕರೆ ಮಾಡಿ ಹೇಳಿ : 09645126739

Advertisement
Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 28-05-2025 | ಮೇ. 31ರಿಂದ ಕಡಿಮೆಯಾಗಿ ಜೂನ್ 3 ರ ತನಕ ಸಾಮಾನ್ಯ ಮಳೆ |
May 28, 2025
2:27 PM
by: ಸಾಯಿಶೇಖರ್ ಕರಿಕಳ
ಶಶಿ ಆದಿತ್ಯ ಯೋಗ, ಈ 5 ರಾಶಿಗೆ ಬೇಡವೆಂದರೂ ಲಾಭ..!
May 28, 2025
11:04 AM
by: ದ ರೂರಲ್ ಮಿರರ್.ಕಾಂ
ಪ್ರವಾಸಿಗರು ಚಾರಣ, ನದಿ ತೀರ ಹೋಗದಂತೆ  ಸೂಚನೆ
May 27, 2025
10:57 PM
by: ದ ರೂರಲ್ ಮಿರರ್.ಕಾಂ
ಕೇರಳದಾದ್ಯಂತ ತೀವ್ರಗೊಂಡ ನೈಋತ್ಯ ಮಾನ್ಸೂನ್ | ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆ | ಆಲುವಾ ಶಿವ ದೇವಾಲಯದಲ್ಲಿ ನೀರು |
May 27, 2025
1:31 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group