ವಿಶ್ವದ 100 ವಾಯುಮಾಲಿನ್ಯ ನಗರಗಳಲ್ಲಿ 63 ನಗರಗಳು ಭಾರತದಲ್ಲಿವೆ. ಈ ಕುರಿತು ವಿಶ್ವವಾಯು ಗುಣಮಟ್ಟ ವರದಿಯನ್ನು ಸ್ವಿಡ್ಜರ್ಲ್ಯಾಂಡ್ನ ಐಕ್ಯೂ ಏರ್ ಸಂಸ್ಥೆ ಪ್ರಕಟಿಸಿದೆ. ಭಾರತದಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆ ಮಟ್ಟದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಉತ್ತರ ಭಾರತವು ಅತಿ ಕಲುಷಿತವಾಗಿದ್ದು, ದೆಹಲಿ ಸತತ ಎರಡನೇ ವರ್ಷ ‘ವಿಶ್ವದ ಅತ್ಯಂತ ಕಲುಷಿತ ರಾಜಧಾನಿ’ಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯವು ಹಿಂದಿನ ವರ್ಷಕ್ಕಿಂತ ಶೇ.15 ರಷ್ಟು ಏರಿಕೆಯಾಗಿದ್ದು, ಇಲ್ಲಿ ವಾಯು ಮಾಲಿನ್ಯವು ವಿಶ್ವಸಂಸ್ಥೆಯ ಸುರಕ್ಷತಾ ಮಿತಿಗಳಿಗಿಂತ ಸುಮಾರು 20 ಪಟ್ಟು ಹೆಚ್ಚಿದೆ ಎಂದಿದೆ ವರದಿ. ವಿಶ್ವದಲ್ಲಿಯೇ ಅತ್ಯಂತ ಕಲುಷಿತ ಸ್ಥಳವಾಗಿ ರಾಜಸ್ಥಾನದ ಭಿವಾಡಿ ಹೊರಹೊಮ್ಮಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel