ದೇಶಬಿಟ್ಟು ಹೊರಟ 6,500 ಮಂದಿ ಕೋಟ್ಯಾಧಿಪತಿಗಳು…! | ಶ್ರೀಮಂತರನ್ನು ಸೆಳೆಯುತ್ತಿದೆ ವಿದೇಶದ ಹಲವು ಅಂಶಗಳು |

September 22, 2023
7:48 PM
ಅತಿಹೆಚ್ಚು ಶ್ರೀಮಂತರು ದೇಶ ಬಿಟ್ಟು ಹೋಗುತ್ತಿರುವುದು ಚೀನಾದಿಂದ. ಬರೋಬ್ಬರಿ 13,500 ಮಂದಿ ಕೋಟ್ಯಧಿಪತಿಗಳು ಈ ವರ್ಷ ಚೀನಾದಿಂದ ನಿರ್ಗಮಿಸುವ ಸಾಧ್ಯತೆ ಇದೆ. ಕಳೆದ ವರ್ಷ ಚೀನಾದ 10,800 ಮಂದಿ ಕೋಟ್ಯಧಿಪತಿಗಳು ದೇಶ ಬಿಟ್ಟು ಹೋಗಿದ್ದರು. ಈ ಸಂಖ್ಯೆ ಈ ವರ್ಷ ಇನ್ನೂ ಹೆಚ್ಚಾಗಿದೆ. ಚೀನಾ ಮತ್ತು ಭಾರತದಿಂದ ಮಾತ್ರವಲ್ಲ, ಬ್ರಿಟನ್​ನಂತಹ ಸಿರಿವಂತ ದೇಶದಿಂದಲೂ ಸಾಕಷ್ಟು ಶ್ರೀಮಂತರ ಹೊರಗೆ ವಲಸೆ ಹೋಗುತ್ತಿದ್ದಾರೆ.

ಭಾರತ (Bharat) ಶ್ರೀಮಂತರನ್ನು ಒಳಗೊಂಡ ದೇಶ. ಶ್ರೀಮಂತರಿಗೆ ಇಲ್ಲಿನ ಮಣ್ಣು, ಹೊನ್ನು ಎಲ್ಲಾ ಬೇಕು. ಆದರೆ ದೇಶದಲ್ಲಿ ನೆಲೆಸುವುದು ಮಾತ್ರ ಬೇಡ…!. ತಾವು ಮಾಡಿದ ಹಣವನ್ನು ಪರ ದೇಶದಲ್ಲಿ ಚೆಲ್ಲಿ ಅಲ್ಲಿ ಐಶರಾಮಿ ಜೀವನ ಮಾಡುತ್ತಾರೆ. ಕಳೆದ ವರ್ಷ 7,500 ಕೋಟ್ಯಾಧಿಪತಿಗಳನ್ನು ಕಳೆದುಕೊಂಡಿದ್ದ ಭಾರತದಿಂದ ಈ ವರ್ಷ 6,500 ಶ್ರೀಮಂತರು ಹೊರಹೋಗುತ್ತಿದ್ದಾರೆ..!

Advertisement
Advertisement
Advertisement

ಈ ವರ್ಷವೂ ಅತಿಹೆಚ್ಚು ಶ್ರೀಮಂತರು ದೇಶ ಬಿಟ್ಟು ಹೋಗುತ್ತಿರುವುದು ಚೀನಾದಿಂದ. ಬರೋಬ್ಬರಿ 13,500 ಮಂದಿ ಕೋಟ್ಯಧಿಪತಿಗಳು ಈ ವರ್ಷ ಚೀನಾದಿಂದ ನಿರ್ಗಮಿಸುವ ಸಾಧ್ಯತೆ ಇದೆ. ಕಳೆದ ವರ್ಷ ಚೀನಾದ 10,800 ಮಂದಿ ಕೋಟ್ಯಧಿಪತಿಗಳು ದೇಶ ಬಿಟ್ಟು ಹೋಗಿದ್ದರು. ಈ ಸಂಖ್ಯೆ ಈ ವರ್ಷ ಇನ್ನೂ ಹೆಚ್ಚಾಗಿದೆ. ಚೀನಾ ಮತ್ತು ಭಾರತದಿಂದ ಮಾತ್ರವಲ್ಲ, ಬ್ರಿಟನ್​ನಂಥ ಸಿರಿವಂತ ದೇಶದಿಂದಲೂ ಸಾಕಷ್ಟು ಶ್ರೀಮಂತರ ಹೊರಗೆ ವಲಸೆ ಹೋಗುತ್ತಿದ್ದಾರೆ. ಇದು ಹೆನ್ಲೀ ಅಂಡ್ ಪಾರ್ಟ್ನರ್ಸ್ ಸಂಸ್ಥೆಯ ಪ್ರೈವೇಟ್ ವೆಲ್ತ್ ಮೈಗ್ರೇಶನ್ ರಿಪೋರ್ಟ್​ನಲ್ಲಿ ಬಂದಿರುವ ವಿಚಾರ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಶ್ರೀಮಂತರು ಹೊರಹೋಗುತ್ತಿರುವ ದೇಶಗಳಲ್ಲಿ ಚೀನಾ, ಬ್ರಿಟನ್, ಬ್ರೆಜಿಲ್, ಹಾಂಕಾಂಗ್, ಸೌತ್ ಕೊರಿಯಅ, ಮೆಕ್ಸಿಕೋ, ಸೌತ್ ಆಫ್ರಿಕಾ, ಜಪಾನ್, ವಿಯೆಟ್ನಾಂ, ನೈಜೀರಿಯಾ ಇವೆ.

Advertisement

ಶ್ರೀಮಂತರು ಹೋಗುತ್ತಿರುವುದು ಎಲ್ಲಿಗೆ? : ಆಸ್ಟ್ರೇಲಿಯಾ, ಯುಎಇ, ಸಿಂಗಾಪುರ, ಅಮೆರಿಕ, ಸ್ವಿಟ್ಜರ್​ಲ್ಯಾಂಡ್, ಕೆನಡಾ, ಗ್ರೀಸ್, ಫ್ರಾನ್ಸ್, ಪೋರ್ಚುಗಲ್, ನ್ಯೂಜಿಲ್ಯಾಂಡ್ ಮತ್ತು ಇಟಲಿ ದೇಶಗಳಿಗೆ ವಲಸೆ ಹೋಗುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಾಗಲಿದೆ. ಮಿಲಿಯನೇರ್​ಗಳಿಗೆ 2023ರಲ್ಲಿ ಆಸ್ಟ್ರೇಲಿಯಾ ಫೇವರಿಟ್ ಎನಿಸಿದೆ. ಯುಎಇಗೂ ಶ್ರೀಮಂತರು ಪ್ರಾಶಸ್ತ್ಯ ಕೊಟ್ಟಿದ್ದಾರೆ. ಬ್ರಿಟನ್, ರಷ್ಯಾ, ಪಾಕಿಸ್ತಾನ್, ಟರ್ಕಿ, ಚೀನಾ ಮೊದಲಾದ ದೇಶಗಳ ಶ್ರೀಮಂತರಿಗೆ ವಲಸೆ ಹೋಗಲು ಯುಎಇ ಫೇವರಿಟ್ ಎನಿಸಿದೆ.

ಶ್ರೀಮಂತರು ಯಾಕೆ ದೇಶ ಬಿಟ್ಟು ಹೋಗುತ್ತಾರೆ?: ಶ್ರೀಮಂತರು ಸಾಮಾನ್ಯವಾಗಿ ಒಂದು ಸ್ಥಳಕ್ಕೆ ಸೀಮಿತರಾಗುವವರಲ್ಲ. ತಾವಿರುವ ಪ್ರದೇಶದ ಬಗ್ಗೆ ನಂಬಿಕೆ ಹೋದರೆ ಅವರು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಹೀಗಾಗಿ, ಒಂದು ದೇಶದ ಆರ್ಥಿಕ ಪರಿಸ್ಥಿತಿಗೆ ಅಲ್ಲಿನ ಶ್ರೀಮಂತರ ವಲಸೆ ಕನ್ನಡಿ ಹಿಡಿಯುತ್ತದೆ ಎಂದು ನಂಬಲಾಗಿದೆ. ರಾಜಕೀಯ ಸ್ಥಿರತೆ, ಕಡಿಮೆ ತೆರಿಗೆ, ವೈಯಕ್ತಿಕ ಸ್ವಾತಂತ್ರ್ಯ ಈ ಅಂಶಗಳು ಕೋಟ್ಯಧಿಪತಿಗಳ ಇರುವಿಕೆಯ ಮೇಲೆ ಪರಿಣಾಮ ಬೀರುತ್ತವೆ. ಆದರೆ, ಈಗೀಗ ಜೀವನ ಗುಣಮಟ್ಟ, ಮಕ್ಕಳ ಪಾಲನೆ ಪೋಷಣೆಗೆ ಬೇಕಾದ ವಾತಾವರಣ, ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ಅನುಕೂಲ ಹವಾಮಾನ ಇರುವ ಸ್ಥಳ, ಉತ್ತಮ ಕಾನೂನು ವ್ಯವಸ್ಥೆ ಇವೆಲ್ಲವನ್ನೂ ಕೋಟ್ಯಧಿಪತಿಗಳು ಪರಿಗಣಿಸುತ್ತಾರೆ. ಮುಂದಿನ ತಲೆಮಾರುಗಳವರೆಗೆ ತಮ್ಮ ಸಂಪತ್ತು ನಶಿಸದೇ ಸುರಕ್ಷಿತವಾಗಿರಬೇಕೆಂದು ಅವರು ಬಯಸುತ್ತಾರೆ.

ಆಸ್ಟ್ರೇಲಿಯಾ ಮೇಲೆ ಯಾಕೆ ಜಾಸ್ತಿ ಪ್ರೀತಿ?: ಆಸ್ಟ್ರೇಲಿಯಾದ ಜೀವನ ಗುಣಮಟ್ಟ, ಅಲ್ಲಿನ ಹವಾಮಾನ, ಭದ್ರತೆ, ಶಿಕ್ಷಣ, ತೆರಿಗೆ ಇತ್ಯಾದಿ ಅಂಶಗಳು ಶ್ರೀಮಂತರನ್ನು ಸೆಳೆಯುತ್ತಿದೆ. ಶ್ರೀಮಂತ ದೇಶಗಳಿಂದಲೂ ಕೋಟ್ಯಧಿಪತಿಗಳು ಆಸ್ಟ್ರೇಲಿಯಾಗೆ ಹೋಗಿ ನೆಲಸುತ್ತಿದ್ದಾರೆ. ಇನ್ನು, ಯುಎಇ ದೇಶ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ತೆರಿಗೆಯೂ ಬಹಳ ಕಡಿಮೆ ಇದೆ. ಹೀಗಾಗಿ, ಬಹಳಷ್ಟು ಶ್ರೀಮಂತರು ದುಬೈ, ಅಬುಧಾಬಿಗಳತ್ತ ಹೋಗುತ್ತಿದ್ದಾರೆ.

Advertisement

( ಅಂತರ್ಜಾಲ ಮಾಹಿತಿ )

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |
November 22, 2024
9:02 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror