ಮಧ್ಯಪ್ರದೇಶದಲ್ಲಿ ಸುಮಾರು 7.5 ಲಕ್ಷ ರೈತರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಧ್ಯಪ್ರದೇಶದ ಕೃಷಿ ಸಚಿವ ಎಡೆಲ್ ಸಿಂಗ್ ಹೇಳಿದ್ದಾರೆ.
ಅಂತರರಾಷ್ಟ್ರೀಯ ಸಾವಯವ ಕೃಷಿ ಸಾಮರ್ಥ್ಯ ಕೇಂದ್ರ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮತ್ತು ಕರ್ನಾಟಕದ ರೈತರು ಭಾಗವಹಿಸಿದ್ದರು. ದೇಶಾದ್ಯಂತ ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸುವ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಯೋಜನೆಯ ಮೂಲಕ, ಭಾರತದಾದ್ಯಂತ ಸುಮಾರು 25 ಲಕ್ಷ ರೈತರು ಸುಮಾರು 15 ಲಕ್ಷ ಹೆಕ್ಟೇರ್‌ಗಳನ್ನು ಒಳಗೊಂಡಂತೆ ಪ್ರಯೋಜನ ಪಡೆದಿದ್ದಾರೆ ಎಂದು ಎಡೆಲ್ ಸಿಂಗ್ ಹೇಳಿದರು. ರೈತರನ್ನು ಸಾವಯವ ಬೆಳೆಯತ್ತ ಸೆಳೆಯುವುದು ಹಾಗೂ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಗುರಿಯನ್ನು ಹೊಂದಿರುವ ಭಾರತ ಸರ್ಕಾರದ ಸಾವಯವ ಕೃಷಿ ಪೋರ್ಟಲ್‌ನಲ್ಲಿ ಇಲ್ಲಿಯವರೆಗೆ ಆರು ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ ಎಂದು ಎಡೆಲ್ ಸಿಂಗ್ ಮಾಹಿತಿ ನೀಡಿದರು. ಕಳೆದ 21 ವರ್ಷಗಳಲ್ಲಿ ಐಸಿಸಿಒಎ ಸುಮಾರು ಮೂರು ಲಕ್ಷ ರೈತರಿಗೆ ತರಬೇತಿ ನೀಡಿ ಪ್ರಮಾಣೀಕರಣದೊಂದಿಗೆ ಲಿಂಕ್ ಮಾಡಿದೆ ಎಂದು ಅವರು ಹೇಳಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
ರೈತರು ಮತ್ತು ಖರೀದಿದಾರರ ನಡುವಿನ ಸಂವಹನಕ್ಕೆ ನೇರ ವೇದಿಕೆಯನ್ನು ಇಂತಹ ಕಾರ್ಯಕ್ರಮ ಅವಕಾಶ ನೀಡುತ್ತದೆ. ಇದು ಮಧ್ಯಪ್ರದೇಶದ ರೈತರಿಗೆ ಮಾತ್ರವಲ್ಲದೆ ಭಾರತದಾದ್ಯಂತದ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು. ಕೃಷಿಯೊಂದಿಗೆ ಜಾನುವಾರುಗಳ ಅಗತ್ಯವೂ ಸಾವಯವ ಕೃಷಿಗೆ ಇದೆ ಎಂದ ಅವರು ಹಿಂದೆ ದನಗಳನ್ನು ಸಾಕಷ್ಟು ಪೋಷಿಸುತ್ತಿದ್ದರು, ನೈಸರ್ಗಿಕ ಗೊಬ್ಬರ ಪೂರೈಕೆಯನ್ನು ನೀಡುತ್ತಿದ್ದವು. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ ಅವರು, ಪಶುಸಂಗೋಪನೆಯ ಜೊತೆಗೆ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಕರೆ ನೀಡಿದರು.

