ಆಪತ್ತಿಗಾದ ಗೆಳತಿಯರು : ಕುಡಿಯುವ ನೀರಿಗಾಗಿ ಬಾವಿ ತೋಡಲು ಸ್ನೇಹಿತೆಗೆ ಸಹಾಯಹಸ್ತ ಚಾಚಿದ ಮಹಿಳೆಯರು

March 23, 2023
12:21 PM

ಸ್ನೇಹಿತರು ಜೊತೆಗಿದ್ರೆ ಏನು ಬೇಕಾದರು ಮಾಡಬಹುದು ಅನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆ.. ಹಣೆ ಬರಹ ಎಷ್ಟೇ ಕೆಟ್ಟಿದ್ರು ಸ್ನೇಹಕ್ಕೆ ಅದನ್ನು ಸರಿ ಮಾಡುವ ತಾಕತ್ತು ಇರುತ್ತದೆ.

Advertisement

ಪ್ರತಿ ಬೇಸಿಗೆಯಲ್ಲೂ ಜೆಸ್ಸಿ ಸಾಬು ಮತ್ತು ಅವರ ಕುಟುಂಬಕ್ಕೆ ಅಗ್ನಿ ಪರೀಕ್ಷೆ. ಪತಿ ಸಾಬು ಮತ್ತು ಮೂವರು ಮಕ್ಕಳೊಂದಿಗೆ ಕೇರಳದ ಪತ್ತನಂತಿಟ್ಟದ ನಾರಣಮ್ಮೂಜಿಯಲ್ಲಿ ವಾಸಿಸುವ 45 ವರ್ಷದ ಜೆಸ್ಸಿ ಅವರು ಬೇಸಿಗೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರು.

ಆದರೆ, ಈ ಬಾರಿ ಅವರು ತುಂಬಾ ನಿರಾಳವಾಗಿದ್ದಾರೆ. ತನ್ನ ಮನೆಯ ಆವರಣದಲ್ಲಿಯೇ ಕುಡಿಯುವ ನೀರಿಗಾಗಿ ಬಾವಿ ತೋಡಲು ಸಹಾಯ ಮಾಡಿದ ಏಳು ಮಹಿಳೆಯರಿಗೆ ಧನ್ಯವಾದ ಹೇಳಿದ್ದಾರೆ.

ಪ್ರತಿ ವರ್ಷ ನೀರಿನ ಕೊರತೆ ಎದುರಿಸುತ್ತಿದ್ದರೂ, ಈ ಬಾರಿ ತಾಪಮಾನದ ತೀವ್ರ ಏರಿಕೆಯು ನಾರಣಮ್ಮೂಜಿ ಪಂಚಾಯಿತಿಯ ವಾರ್ಡ್ 2 ರಲ್ಲಿ ವಾಸಿಸುವ ಈ ಕುಟುಂಬವನ್ನು ಮತ್ತಷ್ಟು ಕಂಗೇಡಿಸಿತು. 2,000 ಲೀಟರ್ ನೀರಿಗೆ ಖಾಸಗಿ ಟ್ಯಾಂಕರ್‌ಗಳಿಗೆ 1,000 ರೂ. ಪಾವತಿಸಬೇಕಾಗಿತ್ತು. ಈ ನೀರು ಕೇವಲ ಒಂದು ವಾರಕ್ಕೆ ಸಾಕಾಗುತ್ತಿತ್ತು. ಪ್ರತಿ ಬೇಸಿಗೆಯಲ್ಲಿ ಬಟ್ಟೆ ಒಗೆಯಲು ಸುಮಾರು 7 ಕಿ.ಮೀ ದೂರದ ಪಂಪಾ ನದಿಗೆ ಹೋಗಲು ಜೆಸ್ಸಿ ಅವರು 400 ರೂ. ಆಟೋರಿಕ್ಷಾ ಬಾಡಿ ನೀಡುತ್ತಿದ್ದಾರೆ.

ವರ್ಷವಿಡೀ ಕುಡಿಯುವ ನೀರಿಗಾಗಿ ಈ ಕುಟುಂಬ ಟ್ಯಾಂಕರ್ ಲಾರಿಗಳ ಮೇಲೆ ಅವಲಂಬಿತವಾಗಿದ್ದರೂ, ಬೇಸಿಗೆಯಲ್ಲಿ ಬೆಲೆ ತೀವ್ರವಾಗಿ ಹೆಚ್ಚಾಗುತ್ತದೆ. ಒಂದು ಬಾವಿ ತೋಡಿದರೆ ತಮ್ಮ ನೀರಿನ ಸಮಸ್ಯೆ ಪರಿಹಾರವಾಗಬಹುದಾದರೂ, ಬಾವಿ ತೋಡುವ ಕಾರ್ಮಿಕರಿಗೆ ಪಾವತಿಸಲು ಅವರ ಬಳಿ ಹಣ ಇರಲಿಲ್ಲ. ಹೀಗಾಗಿ ತಾವೇ ಬಾವಿ ತೋಡಲು ನಿರ್ಧರಿಸಿ ಮಾ.2ರಂದು ಕಾಮಗಾರಿ ಆರಂಭಿಸಿದ್ದರು.

ತಮ್ಮ ಸ್ನೇಹಿತೆಯ ಕಷ್ಟವನ್ನು ಮನಗಂಡ ಮಹಿಳೆಯರು, ಮರಿಯಮ್ಮ ಥಾಮಸ್(52), ಲೀಲಮ್ಮ ಜೋಸ್(50), ಉಷಾಕುಮಾರಿ (51), ಲಿಲ್ಲಿ ಕೆಕೆ(51), ಕೊಚುಮೋಲ್(49), ರೆಜಿಮೋಲ್(42), ಮತ್ತು ಅನು ಥಾಮಸ್(34) ಅವರು ಜೆಸ್ಸಿ ಸಹಾಯ ಮಾಡಲು ಮತ್ತು ಉಚಿತವಾಗಿ ಕೆಲಸ ಮಾಡಲು ನಿರ್ಧರಿಸಿದರು.

“ಅವರಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಅಂತ ನನಗೆ ಅರ್ಥವಾಗುತ್ತಿಲ್ಲ. 4 ಮೀಟರ್ ವರೆಗೆ ಅಗೆದಾಗ ಸ್ವಲ್ಪ ನೀರು ನೋಡಿದೆವು. ನಾವು ಸುಮಾರು 7 ಮೀಟರ್ ಆಳಕ್ಕೆ ಹೋದರೆ ನೀರು ಸಿಗುತ್ತದೆ ಎಂದು ಭಾವಿಸಿದ್ದೇವೆ. ಬಂಡೆಗಳಿಂದ ಕೂಡಿದ ಭೂಮಿ ಕೊರೆಯುವುದು ಸವಾಲಾಗಿತ್ತು. ಆದಾಗ್ಯೂ,  ನೀರು ಬರುವವರೆಗೆ ಬಿಡುವುದು ಬೇಡ ಎಂದು ನಾವು ನಿರ್ಧರಿಸಿದ್ದೇವೆ” ಎಂದು ಜೆಸ್ಸಿ ಹೇಳಿದ್ದಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ
May 7, 2025
10:02 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ
May 7, 2025
2:42 PM
by: ಸಾಯಿಶೇಖರ್ ಕರಿಕಳ
ಈ ತಿಂಗಳ ಅಂತ್ಯದೊಳಗೆ 6 ರಾಶಿಯವರಿಗೆ ಉತ್ತಮ ಶುಭ ಫಲ | ಕೆಲವು ವಿಧಿ ವಿಧಾನಗಳನ್ನು ಅನುಸರಿಸಿದರೆ ಯಶಸ್ಸು |
May 7, 2025
7:02 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ
May 7, 2025
7:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group