ಅಮೆರಿಕ ಸಂಸತ್ತಿನಲ್ಲಿ ಎರಡು ಬಾರಿ ಭಾಷಣ ಮಾಡಿದ ಏಕೈಕ ಭಾರತದ ಪ್ರಧಾನಿ ಎಂಬ ಗೌರವ ನಮ್ಮ ಹೆಮ್ಮೆಯ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ.
ನಾನು ಪ್ರಧಾನಿಯಾಗಿ ಮೊದಲ ಬಾರಿಗೆ ಅಮೆರಿಕಗೆ ಭೇಟಿ ನೀಡಿದಾಗ ಭಾರತವು #India ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು ಭಾರತವು 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದೆ. ಭಾರತವು ಶೀಘ್ರದಲ್ಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ನಾವು ದೊಡ್ಡ ಆರ್ಥಿಕತೆಯಾಗಿ ಬೆಳೆಯುವುದು ಮಾತ್ರವಲ್ಲದೆ ವೇಗವಾಗಿ ಬೆಳೆಯುತ್ತಿದ್ದೇವೆ. ಭಾರತ ಬೆಳೆದಾಗ ಇಡೀ ಜಗತ್ತು ಬೆಳೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ #PMNarendraModi ಭಾರತದ ಸಾಧನೆಯನ್ನು ಕೊಂಡಾಡಿದ್ದಾರೆ.
ಅಮೆರಿಕ ಸಂಸತ್ತಿನ #USCongress ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಈ ಮೂಲಕ ಎರಡು ಬಾರಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ಮೊದಲು 2016ರ ಜೂನ್‌ನಲ್ಲಿ ಮೋದಿ ಅಮೆರಿಕದ ಪ್ರವಾಸದ ವೇಳೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು.
VIDEO | “We share a common vision of a free, open and inclusive Indo-Pacific,” says PM Modi in his address at the joint session of the US Congress.#PMModiUSVisit pic.twitter.com/rNV3Po5bC0
Advertisement— Press Trust of India (@PTI_News) June 22, 2023
ಮೋದಿ ಭಾಷಣದ ಹೈಲೈಟ್ಸ್: ಇಂದು ಆಧುನಿಕ ಭಾರತದಲ್ಲಿ ಮಹಿಳೆಯರು ನಮ್ಮನ್ನು ಉತ್ತಮ ಭವಿಷ್ಯದತ್ತ ಕೊಂಡೊಯ್ಯುತ್ತಿದ್ದಾರೆ. ಭಾರತದ ದೃಷ್ಟಿ ಕೇವಲ ಮಹಿಳೆಯರಿಗೆ ಅನುಕೂಲವಾಗುವ ಅಭಿವೃದ್ಧಿಯಲ್ಲ. ಇದು ಮಹಿಳಾ ನೇತೃತ್ವದ ಅಭಿವೃದ್ಧಿಯಾಗಿದ್ದು, ಅಲ್ಲಿ ಮಹಿಳೆಯರು ಪ್ರಗತಿಯ ಪಯಣವನ್ನು ಮುನ್ನಡೆಸುತ್ತಾರೆ. ಬುಡಕಟ್ಟು ಹಿನ್ನೆಲೆಯಿಂದ ಬಂದ ಮಹಿಳೆ ನಮ್ಮ ರಾಷ್ಟ್ರದ ಮುಖ್ಯಸ್ಥೆ ಹುದ್ದೆಯನ್ನು ಏರಿದ್ದಾರೆ.
ಪ್ಯಾರಿಸ್ ಹವಾಮಾನ ಬದ್ಧತೆಯನ್ನು ಪೂರೈಸಿದ ಏಕೈಕ ಜಿ20 ದೇಶ ಭಾರತ. ನಾವು 2030ರ ಗುರಿಗಿಂತ 9 ವರ್ಷಗಳ ಮೊದಲೇ ನಮ್ಮ ಶಕ್ತಿಯ ಮೂಲಗಳಲ್ಲಿ 40% ಕ್ಕಿಂತ ಹೆಚ್ಚು ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೊಂದಿದ್ದೇವೆ. ಇಷ್ಟಕ್ಕೆ ನಾವು ನಿಲ್ಲಲ್ಲಿಲ್ಲ. ಗ್ಲ್ಯಾಸ್ಗೋ ಶೃಂಗಸಭೆಯಲ್ಲಿ, ನಾನು ಮಿಷನ್ ಲೈಫ್ ಅನ್ನು ಪ್ರಸ್ತಾಪಿಸಿದ್ದೆ. ನಮ್ಮ ಮಿಷನ್ ಭೂಮಿಯ ಪ್ರಗತಿಯ ಪರವಾಗಿದೆ, ಭೂಮಿಯ ಸಮೃದ್ಧಿಯ ಪರವಾಗಿದೆ, ಜನರ ಪರವಾಗಿದೆ.
ಭಾರತವು ಪ್ರಪಂಚದ ಎಲ್ಲಾ ನಂಬಿಕೆಗಳಿಗೆ ನೆಲೆಯಾಗಿದೆ ಮತ್ತು ನಾವು ಎಲ್ಲವನ್ನೂ ಆಚರಿಸುತ್ತೇವೆ. ಭಾರತದಲ್ಲಿ, ವೈವಿಧ್ಯತೆಯು ನೈಸರ್ಗಿಕ ಜೀವನ ವಿಧಾನವಾಗಿದೆ. ಇಂದು ಜಗತ್ತು ಭಾರತದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸುತ್ತದೆ. ನಮ್ಮಲ್ಲಿ 2,500ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ. ಸುಮಾರು 20 ವಿವಿಧ ಪಕ್ಷಗಳು ಭಾರತದ ವಿವಿಧ ರಾಜ್ಯಗಳನ್ನು ಆಳುತ್ತವೆ. ನಮ್ಮಲ್ಲಿ 22 ಅಧಿಕೃತ ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳಿವೆ. ಆದರೂ ನಾವು ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ.
‘ವಸುಧೈವ ಕುಟುಂಬಕಂ’ ಎಂಬ ಧ್ಯೇಯವಾಕ್ಯದಿಂದ ನಾವು ಬದುಕುತ್ತಿದ್ದೇವೆ. ಜಗತ್ತೇ ಒಂದು ಕುಟುಂಬ. ಪ್ರತಿಯೊಬ್ಬರ ಪ್ರಯೋಜನಕ್ಕಾಗಿ ನಾವು ಪ್ರಪಂಚದ ಜೊತೆ ಮಾತುಕತೆ ನಡೆಸುತ್ತೇವೆ. ನಾವು ಜಿ20 ಶೃಂಗಸಭೆ ಅಧ್ಯಕ್ಷತೆ ವಹಿಸಿದ ಬಳಿಕ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಥೀಮ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಜಾಗತಿಕ ಶಾಂತಿಪಾಲಕರನ್ನು ಗೌರವಿಸಲು ಸ್ಮಾರಕ ಗೋಡೆಯನ್ನು ನಿರ್ಮಿಸಲು ವಿಶ್ವಸಂಸ್ಥೆಯಲ್ಲಿ ಕಳೆದ ವಾರ ನಾವು ಮಾಡಿದ ಪ್ರಸ್ತಾಪಕ್ಕೆ ಎಲ್ಲಾ ರಾಷ್ಟ್ರಗಳು ಅನುಮೋದನೆ ನೀಡಿವೆ.