ಇದು ಮಾವಿನ ಕಾಲ.. ಎಲ್ಲೆಲ್ಲೂ ಹಣ್ಣಿನ ರಾಜನದ್ದೇ ಕಾರುಬಾರು. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ರಸಭರಿತ ತರಹೇವಾರಿ ಮಾವಿನ ಹಣ್ಣುಗಳು. ನೋಡಿದವರು ಯಾರು ಒಂದು ಕೆಜಿ ಕೊಳ್ಳದೆ ಇರಲಾರರು. ಆದರೆ ಈ ಮಾವಿನ ಹಣ್ಣುಗಳು ಎಷ್ಟು ಸೇಫ್ಟಿ ಅನ್ನೋದೆ ಪ್ರಶ್ನೆ. ಮಾರುಕಟ್ಟೆಯಲ್ಲಿ ಬರುವ ಬಹುತೇಕ ಹಣ್ಣುಗಳನ್ನು ಕೆಮಿಕಲ್ ಹಾಕಿ ಹಣ್ಣು ಮಾಡಲಾಗುತ್ತದೆ. ಕಳೆದ ವರ್ಷ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಚೆನ್ನೈನ ಲ್ಲಿ 7000 ಕೆಜಿ ಮಾವಿನಹಣ್ಣು ವಶಪಡಿಸಿಕೊಂಡಿದ್ದರು.
ಕಳೆದ ವರ್ಷ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಚೆನ್ನೈನ ಕೊಯಂಬೆಡು ಮಾರುಕಟ್ಟೆಯಲ್ಲಿ ದಾಳಿ ನಡೆಸಿ ಬರೋಬ್ಬರಿ 7 ಸಾವಿರ ಕೆಜಿಯಷ್ಟು ಕೃತಕವಾಗಿ ಮಾಗಿಸಿದ ಮಾವಿನ ಹಣ್ಣನ್ನು ವಶಪಡಿಸಿಕೊಂಡಿದ್ದರು. ಇನ್ನೀಗ ಮಳೆಯಾಗುವ ಆರಂಭದಲ್ಲಿ ಮಾವು ಕಟಾವು ಮಾಡಿ ರಾಸಾಯನಿಕ ಬಳಸಿ ಮಾಗಿಸಿದ ಮಾವಿನ ಹಣ್ಣುಗಳ ಮಾರಾಟ ಮಾಡುವ ದೊಡ್ಡ ಜಾಲ ಸಕ್ರಿಯವಾಗುತ್ತದೆ. ಕೃತಕವಾಗಿ ಮಾಗಿದ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಏರುಪೇರುಗಳಾಗುತ್ತವೆ. ಹೀಗಾಗಿ ರಾಸಾಯನಿಕಗಳಿಂದ ಮಾಗಿಸಿದ ಹಣ್ಣುಗಳ ಮಾರಾಟವನ್ನು ಪರಿಶೀಲಿಸಲು ಮಾರುಕಟ್ಟೆ ಪ್ರದೇಶಗಳಲ್ಲಿ ತಪಾಸಣೆ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಇಲಾಖೆಗಳು ಸೂಚಿಸಿದರೂ, ಇಲಾಖೆಗಳ ಕಣ್ಣು ತಪ್ಪಿಸಿ ಈ ಮಾರಾಟ ಜಾಲ ಇರುತ್ತದೆ.