ಕಳೆದ ಸುಮಾರು ಇಪ್ಪತ್ತು ಶತಮಾನಗಳಲ್ಲಿ ಎಪ್ಪತ್ತೇಳು ಜಾತಿಯ(species) ಮೃಗಗಳು(animal) ಕಣ್ಮರೆಯಾಗಿವೆಯೆಂದು(disappear) ತಜ್ಞರೊಬ್ಬರು(Expert) ಹೇಳುತ್ತಾರೆ. ಇವುಗಳಲ್ಲಿ ನಲವತ್ತೇಳು ಜಾತಿ ನಿಸರ್ಗದ(Natural) ಕಾರಣದಿಂದ ಕಳೆದಿವೆಯಂತೆ. ಮಿಕ್ಕ ಮೂವತ್ತು ಜಾತಿ ಮನುಷ್ಯನ(Human) ಕ್ರೌರ್ಯದಿಂದ ಕಾಣೆಯಾಗಿವೆಯಂತೆ! “ಪ್ರಕೃತಿಯ ವಿರುದ್ಧ ನಿಂತ ಮನುಷ್ಯ ನಿಜಕ್ಕೂ ತನ್ನ ಅವನತಿಯನ್ನು ತಾನೇ ಕಂಡುಕೊಳ್ಳುತ್ತಾನೆ” ಎನ್ನುತ್ತಾರೆ ಅವರು.
“ತಾಜಮಹಲಿನಂತಹ ಒಂದು ದಿವ್ಯ ಕಟ್ಟಡ ನಾಶವಾದರೆ, ಅದನ್ನು ಮರಳಿ ಕಟ್ಟಬಹುದು. ದಿಲ್ಲಿಯ ಕೆಂಪುಕೋಟೆಯೇ ನೆಲಸಮವಾದರೂ ಮತ್ತೆ ಅಂತಹ ಕೋಟೆಗಳನ್ನು ಹತ್ತು ಪಟ್ಟು ಬೃಹತ್ತಾಗಿ ಕಟ್ಟಿಸಬಹುದು. ಆದರೆ ಸಿಂಹದಂತಹ, ಹುಲಿಯಂತಹ ಒಂದು ಜೀವಿ ನಿರ್ನಾಮವಾದರೆ ಯಾರಿಂದಲೂ ಅವುಗಳ ಸಂತತಿಯನ್ನು ಬೆಳೆಸಲಾಗುವುದಿಲ್ಲ.” ಗೊಮ್ಮಟನನ್ನು ನಾವು ಕೆತ್ತಬಹುದು, ಆದರೆ ಅಳಿಯುವ ಗುಬ್ಬಿಯ ಸಂತತಿಯನ್ನು ಬೆಳೆಸುವುದು ಸಾಧ್ಯವಾಗುವುದಿಲ್ಲ ಎಂಬುದನ್ನು ಸದಾ ನಾವು ನೆನಪಿನಲ್ಲಿಟ್ಟುಕೊಂಡು ವರ್ತಿಸಬೇಕು.
ಮನುಷ್ಯನನ್ನೇ ಕೊಲ್ಲುವ, ಅದರಿಂದ ಸಂತೋಷಪಡುವ ಮನುಷ್ಯನಿಗೆ ಪ್ರಾಣಿ ಪಕ್ಷಿಗಳನ್ನು ಕೊಲ್ಲುವುದರಲ್ಲಿ ದುಃಖವಿರಲಾರದು ! ತನ್ನ ಆಹಾರಕ್ಕಾಗಿ ಮನುಷ್ಯ ಹಂದಿಶಿಕಾರಿ ಮಾಡಬಹುದು ; ಆದರೆ ಹಂದಿಗಳು ತಮ್ಮ ಆಹಾರಕ್ಕಾಗಿ ಮನುಷ್ಯನ ಬೆಳೆಗಳನ್ನು ತಿನ್ನಬಾರದು ! ತನ್ನ ರಕ್ಷಣೆಗೆಂದು ಮನುಷ್ಯ ಹುಲಿಶಿಕಾರಿ ಮಾಡಬಹುದು ; ಆದರೆ ತನ್ನ ರಕ್ಷಣೆಗೆಂದು ಹುಲಿ ಮನುಷ್ಯನ ಮೇಲೆ ಬೀಳಬಾರದು ! ಇದು ಮನುಷ್ಯ ನ್ಯಾಯ ; ಮನುಷ್ಯನೇ ನಿರ್ಮಿಸಿಕೊಂಡ ಅರಣ್ಯ ನಿಯಮ ! ಈ ಭೂಮಿ ಮನುಷ್ಯನೊಬ್ಬನಿಗಾಗಿ ಸೃಷ್ಟಿಗೊಂಡಿದ್ದೆ ? ಅವನೊಬ್ಬನಿಗೇ ಬದುಕುವ ಹಕ್ಕಿರುವುದೆ ? ಮಿಕ್ಕ ಪ್ರಾಣಿಪಕ್ಷಿಗಳು ನೆಮ್ಮದಿಯಿಂದ ಜೀವಿಸುವಂತಿಲ್ಲವೆ ?- ಇಂಥ ಪ್ರಶ್ನೆಗಳು ನಮ್ಮ ಮನಸ್ಸಿಗೆ ಬರುವುದಿಲ್ಲ ! ಇನ್ನು ಉತ್ತರ ಹೇಳುವ ಪ್ರಮೇಯವೆಲ್ಲಿದೆ ?
– ಹಾ.ಮಾ.ನಾಯಕ {ಡಾ.ಎಂ.ಪಿ ಮಂಜಪ್ಪ ಶೆಟ್ಟಿ ಅವರ ‘ಮಲೆನಾಡಿನ ಶಿಕಾರಿ’ ಪುಸ್ತಕದ ಮುನ್ನುಡಿ}
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…