ನೈಜೀರಿಯಾದಲ್ಲಿ ಒಂಭತ್ತು ವರ್ಷದ ಬಾಲಕ ತನ್ನ ಅದ್ದೂರಿ ಜೀವನ ಶೈಲಿಯಿಂದಾಗಿ ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಎಂದು ಗುರುತಿಸಿದ್ದಾನೆ. ಈ ಬಾಲಕನ ಸಂಪೂರ್ಣ ಹೆಸರು ಮುಹಮ್ಮದ್ ಅವಲ್ ಮುಸ್ತಪಾ ಎಕೆಎ ಮೊಂಫಾ.
ಈತ ತನ್ನ ಆರನೇ ವಯಸ್ಸಿನಲ್ಲಿ ಮೊದಲ ಬಂಗ್ಲೆಯನ್ನು ಹೊಂದಿದ್ದು, ಅತ್ಯಂತ ಶ್ರೀಮಂತಿಕೆಯ ಜೀವನವನ್ನು ಈತ ನಡೆಸುತ್ತಿದ್ದಾನೆ. ಮಾತ್ರವಲ್ಲ, ಈತ ಖಾಸಗಿ ಜೆಟ್ ಹೊಂದಿದ್ದು, ಜಗತ್ತಿನಾದ್ಯಂತ ಪ್ರಯಾಣಿಸುತ್ತಾನೆ. ಜೊತೆಗೆ ಈತ ಹಲವು ಬಂಗ್ಲೆಗಳನ್ನು ಹೊಂದಿದ್ದು, ಹಲವು ಸೂಪರ್ ಕಾರುಗಳು ಸಹ ಈತನ ಬಳಿಯಿವೆ.
ನೈಜಿರಿಯಾದ ಲಾಗೋಸ್ ಮೂಲದವನಾದ ಈ ಮೋಂಫಾ, ಮಲ್ಟಿಮಿಲಿಯನೇರ್ ನೈಜೀರಿಯನ್ ಇಂಟರ್‌ಎಟ್ ಸೆಲೆಬ್ರಿಟಿ ಇಸ್ಮಾಯಿಲಿಯಾ ಮುಸ್ತಫಾ ಮುಹಮ್ಮದ್ ಅವಲ್ ಮುಸ್ತಾಫಾ ಎಂಬವರ ಮಗ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel