ಕೃಷಿಯಲ್ಲಿ ನೀರಿನ ಕೊರತೆಗೆ ಶಾಶ್ವತವಾಗಿ ಪರಿಹಾರವನ್ನು ನೀಡಲು ಕರ್ನಾಟಕ ಸರ್ಕಾರವು 2025-2026ರ ಸಾಲಿನ ಕೃಷಿ ಇಲಾಖೆಯ ವತಿಯಿಂದ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಶೇ.90% ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಇದರಿಂದ ನೀರನ್ನು ಶೇಖರಣೆ ಮಾಡಿ ಬೆಳೆಗಳಿಗೆ ಅವಶ್ಯಕ ಸಂಧರ್ಭಗಳಲ್ಲಿ ಉಪಯೋಗಿಸಿಕೊಂಡು ಅವರ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಹಾಗೆಯೇ ಬರಗಾಲದ ಸಂದರ್ಭದಲ್ಲಿ ಬೆಳೆ ನಷ್ಟವನ್ನು ಕಡಿಮೆ ಮಾಡಬಹುದು.
ಕೃಷಿ ಹೊಂಡ ನಿರ್ಮಾಣ ಮಾಡಿದ ನಂತರ ನೀರು ಬೇಗನೆ ಇಂಗಿ ಹೋಗದಂತೆ ಹೊಂಡಕ್ಕೆ ಪಾಲಿಥೀನ್ ಹೊದಿಕೆ, ಹೊಂಡದಿಂದ ನೀರನ್ನು ಜಮೀನಿಗೆ ಪೂರೈಕೆ ಮಾಡಲು ಡೀಸಲ್ ಪಂಪ್ ಸೆಟ್, ಲಘು ನೀರಾವರಿ ಘಟಕ ಮತ್ತು ಕೃಷಿ ಹೊಂಡಕ್ಕೆ ತಂತಿ ಬೇಲಿಯನ್ನು ಹಾಕಿಕೊಳ್ಳಲು ಸಹ ಸಬ್ಸಿಡಿಯನ್ನು ನೀಡಲಾಗುತ್ತದೆ.
ಬೇಕಾಗಿರುವ ದಾಖಲೆಗಳು:
- ರೈತರ ಆಧಾರ್ ಕಾರ್ಡ್
- ಪಹಣಿ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ರೇಶನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪೋಟೋ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವ ವಿಧಾನ: ಕೃಷಿ ಹೊಂಡ ಅಗತ್ಯವಿರುವ ರೈತರು ಆಯಾ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅವಶ್ಯಕ ದಾಖಲಾತಿಗಳ ಹೊಂದಿಗೆ ನೇರ ಬೇಟಿ ಮಾಡಿ ಅರ್ಜಿ ಸಲ್ಲಿಸಿ.

