ಇಸ್ರೇಲ್‌ನಲ್ಲಿ 90 ಸಾವಿರ ಪ್ಯಾಲೆಸ್ತೇನಿಯ ಕಾರ್ಮಿಕರು ಔಟ್‌ | 1 ಲಕ್ಷ ಭಾರತೀಯ ಕಾರ್ಮಿಕರು ಇನ್‌ | ಭಾರತದ ಜೊತೆ ಇಸ್ರೇಲ್‌ ಒಪ್ಪಂದಕ್ಕೆ ಸಹಿ |

November 7, 2023
8:14 PM
ಅಕ್ಟೋಬರ್ 7 ರಂದು ಹಮಾಸ್ ನೇತೃತ್ವದ ಹಿಂಸಾಚಾರದ ನಂತರ ತಮ್ಮ ಪರವಾನಗಿಗಳನ್ನು ಕಳೆದುಕೊಂಡ ಪ್ಯಾಲೆಸ್ತೀನ್ ಕಾರ್ಮಿಕರ ಬದಲಿಗೆ ಭಾರತದಿಂದ ಒಂದು ಲಕ್ಷ ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್ ಸಿದ್ಧತೆ ನಡೆಸುತ್ತಿದೆ.

ಭಾರತದಲ್ಲಿ ನಿರುದ್ಯೋಗ(Unemployment) ತಾಂಡವವಾಡುತ್ತಿರುವ ಸಂದರ್ಭದಲ್ಲಿ ಭಾರತೀಯ ಪ್ರಜೆಗಳಿಗೆ ವಿದೇಶ(Foreign)ದಲ್ಲಿ ಕೆಲಸ(Job) ಕೊಡ್ತೀವಿ ಅಂದ್ರೆ ಇದಕ್ಕಿಂತ ಖುಷಿಯ ವಿಷಯ ಇನ್ನೊಂದಿಲ್ಲ. ಆದರೆ ಇಲ್ಲಿ ಖುಷಿ ಪಡಬೇಕೋ.. ಇಲ್ಲ ನಿರಾಶ್ರಿತರ ಕೆಲಸವನ್ನು ನಾವು ಕಿತ್ತುಕೊಂಡು ಅವರ ಬೀದಿಪಾಲಿಗೆ ನಾವು ಪಾಲುದಾರರಾಗುತ್ತಿದ್ದೇವಾ ಎಂಬ ಯೋಚನೆ ಇದೆ. ಪ್ಯಾಲೆಸ್ತೇನ್‌ (Palestine) ಕಾರ್ಮಿಕರ ಬದಲು ಭಾರತದ (India) ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್‌ (Israel) ಈಗ ಮುಂದಾಗಿದೆ. ಹಮಾಸ್‌ ಜೊತೆಗಿನ ಯುದ್ಧದ ನಂತರ 90 ಸಾವಿರ ಪ್ಯಾಲೆಸ್ತೇನ್‌ ಕಾರ್ಮಿಕರ ಕೆಲಸದ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈಗ ಪ್ಯಾಲೆಸ್ತೇನ್‌ ಪ್ರಜೆಗಳ ಬದಲಿಗೆ 1 ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ಅನುಮತಿ ನೀಡುವಂತೆ ಇಸ್ರೇಲಿ ನಿರ್ಮಾಣ (Construction) ಉದ್ಯಮವು ಸರ್ಕಾರವನ್ನು ಕೇಳಿದೆ ಎಂದು ವರದಿಯಾಗಿದೆ.

Advertisement

ಇದೀಗ ನಾವು ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಬೇಡಿಕೆಗೆ ಅನುಮತಿ ನೀಡಲು ಇಸ್ರೇಲ್ ಸರ್ಕಾರದ ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ. ಇಡೀ ವಲಯವನ್ನು ನಡೆಸಲು ಮತ್ತು ಅದನ್ನು ಸಾಮಾನ್ಯ ಸ್ಥಿತಿಗೆ ತರಲು ಸಾಧ್ಯವಾಗುವಂತೆ ಭಾರತದಿಂದ 50 ಸಾವಿರದಿಂದ 1 ಲಕ್ಷ ಕಾರ್ಮಿಕರನ್ನು ತೊಡಗಿಸಿಕೊಳ್ಳಲು ನಾವು ಆಶಿಸುತ್ತೇವೆ ಎಂದು ವೆಸ್ಟ್ ಬ್ಯಾಂಕ್‌ನ ವಾಯ್ಸ್ ಆಫ್ ಅಮೇರಿಕಾ ವರದಿಯು ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಹೈಮ್ ಫೀಗ್ಲಿನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ವರದಿಯ ಪ್ರಕಾರ, ಇಸ್ರೇಲಿ ನಿರ್ಮಾಣ ಉದ್ಯಮದಲ್ಲಿ ಉದ್ಯೋಗಿಯಾಗಿರುವ ಕಾರ್ಮಿಕರ ಪೈಕಿ ಪ್ಯಾಲೆಸ್ತೇನಿಯನ್ನರು ಸರಿಸುಮಾರು 25 ಪ್ರತಿಶತವನ್ನು ಹೊಂದಿದ್ದಾರೆ. ನಾವು ಈಗ ಯುದ್ಧದಲ್ಲಿದ್ದೇವೆ. ನಮ್ಮ ಮಾನವ ಸಂಪನ್ಮೂಲದ ಸುಮಾರು 25 ಪ್ರತಿಶತದಷ್ಟು ಇರುವ ಪ್ಯಾಲೆಸ್ತೇನ್‌ ಕೆಲಸಗಾರರು ಬರುತ್ತಿಲ್ಲ. ಇವರಿಗೆ ಇಸ್ರೇಲ್‌ನಲ್ಲಿ ಕೆಲಸ ಮಾಡಲು ಅನುಮತಿ ಇಲ್ಲ ಎಂದು ಫೀಗ್ಲಿನ್ ಹೇಳಿದ್ದಾರೆ.

ಮೇ ತಿಂಗಳಲ್ಲಿ ಇಸ್ರೇಲ್ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇಸ್ರೇಲ್‌ 42 ಸಾವಿರ ಭಾರತೀಯರಿಗೆ ಇಸ್ರೇಲ್‌ನಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತದೆ. ನಿರ್ಮಾಣ ಮತ್ತು ನರ್ಸಿಂಗ್ ಕ್ಷೇತ್ರಗಳಲ್ಲಿ 42 ಸಾವಿರ ಭಾರತೀಯ ಕಾರ್ಮಿಕರಿಗೆ ಉದ್ಯೋಗಕ್ಕೆ  ಅನುಮತಿ ನೀಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ತಮ್ಮ ದೇಶದ ಮೇಲಿನ ದಾಳಿ ದೇಶದಲ್ಲಿ ಉದ್ಯೋಗದಲ್ಲಿದ್ದ ಪ್ಯಾಲೆಸ್ತೀನ್‌ ಕಾರ್ಮಿಕರು ಕಾರಣ. ಅವರು ನಮ್ಮ ದೇಶದ ಬಗ್ಗೆ ಹಮಾಸ್‌ ಉಗ್ರರಿಗೆ ಮಾಹಿತಿ ನೀಡಿದ್ದರು ಎಂಬ ಕಾರಣ ನೀಡಿ ಇಸ್ರೇಲ್‌ ಕಳೆದ ವಾರ ಗಾಜಾಗೆ ಗಡಿಪಾರು ಮಾಡಿದೆ.

ಪ್ಯಾಲೆಸ್ತೇನ್‌ ಜೊತೆಗಿನ ಸಂಬಂಧ ಸುಧಾರಣೆಯಾಗುತ್ತಿದ್ದಂತೆ ಇಸ್ರೇಲ್‌ ಪ್ಯಾಲೆಸ್ತೇನ್‌ ಪ್ರಜೆಗಳಿಗೆ  ಮಾನವೀಯ ದೃಷ್ಟಿಯಿಂದ ಕೆಲ ವರ್ಷಗಳಿಂದ ದೇಶದಲ್ಲಿ ಉದ್ಯೋಗ ನೀಡಿತ್ತು. ಉದ್ಯೋಗ ಪಡೆದ ಪ್ರಜೆಗಳು ಹಮಾಸ್‌ ಉಗ್ರರ ಜೊತೆ ಕೈ ಜೋಡಿಸಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಅವರನ್ನು ಇಸ್ರೇಲ್‌ ಗಡಿಪಾರು ಮಾಡಿದೆ. ಇಸ್ರೇಲ್‌ನ ಬೇಡಿಕೆಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.

Israel now offers to hire Indian workers instead of Palestinian workers. 90,000 Palestinian workers have had their work permits revoked since the war with Hamas. Now the Israeli construction industry has reportedly asked the government to allow companies to hire 1 lakh Indian workers instead of Palestinian nationals.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಏಪ್ರಿಲ್ 2 ಕೆಲವು ವಿಶೇಷ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿ
April 2, 2025
6:18 AM
by: ದ ರೂರಲ್ ಮಿರರ್.ಕಾಂ
ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group