ಪುತ್ತೂರು: ಪರಿಶುದ್ಧವಾದ ಪ್ರಾಮಾಣಿಕತೆಗೆ ಚಿನ್ನದ ನಾಣ್ಯಗಳ ಉಡುಗೊರೆ…!. ಇದು ಸಿಕ್ಕಿದ್ದು ಹೋಟೆಲ್ ಸಿಬ್ಬಂದಿಗೆ. ಈ ಕೊಡುಗೆ ನೀಡಿದ್ದು ಪುತ್ತೂರಿನ ಮುಳಿಯ ಜ್ಯವೆಲ್ಸ್ ನ ಕೇಶವ ಪ್ರಸಾದ್ ಮುಳಿಯ. ಈ ಪ್ರಾಮಾಣಿಕತೆ ಎಲ್ಲರಿಗೂ ಮಾದರಿಯೂ ಹೌದು.
ಪ್ರಾಮಾಣಿಕತೆಗೆ ಶುದ್ಧ-ಪರಿಶುದ್ಧ ಅಂತ ಇಲ್ಲ ನಿಜ. ಆದರೆ ಇದು ಪರಿಶುದ್ಧ ಎನ್ನುವುದು ಏಕೆಂದರೆ ಮೂರೂವರೆ ಪವನ್ ಚಿನ್ನದ ಸಂಗತಿ ಇದು. ಕಾರ್ಯಕ್ರಮವೊಂದರಲ್ಲಿ ಕೇಶವ ಪ್ರಸಾದ್ ಮುಳಿಯ ಚಿನ್ನದ ಬ್ರಾಸ್ ಲೆಟ್ ಕಳೆದುಹೋಗಿತ್ತು. ಅದು ಪುತ್ತೂರಿನ ಹೋಟೆಲ್ ಹರಿಪ್ರಸಾದ್ ನ ನೌಕರಿಯಲ್ಲಿರುವ ಸತೀಶ್ ಮತ್ತು ರಾಮಣ್ಣರವರಿಗೆ ಸಿಕ್ಕಿತು. ಅವರು ಆ ಚಿನ್ನವನ್ನು ಕಾರ್ಯಕ್ರಮ ನಡೆಸಿದ್ದ ಮನೆಯವರಿಗೆ ಒಪ್ಪಿಸಿದರು. ನಂತರ ಆ ಮನೆಯವರ ಮೂಲಕ ಬ್ರಾಸ್ ಲೆಟ್ ಕೇಶವ ಪ್ರಸಾದ್ ಮುಳಿಯ ಅವರ ಕೈಸೇರಿತು. ಈ “ಚಿನ್ನದ” ಕತೆ ಹೀಗಿದೆ…
ಆ ಭಾನುವಾರ ದಿನಪೂರ್ತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮುಳಿಯ ಜ್ಯವೆಲ್ಸ್ ನ ಕೇಶವ ಪ್ರಸಾದ್ ಮುಳಿಯ ಮನೆಗೆ ತಲಪುವಾಗ ರಾತ್ರಿಯಾಗಿತ್ತು. ಮರುದಿನ ಅರ್ಧ ತೋಳಿನ ಅಂಗಿ ಹಾಕಿದಾಗಲೇ ಬ್ರಾಸ್‍ಲೆಟ್ ಕಳೆದುಹೋಗಿರುವ ಸಂಗತಿ ಬೆಳಕಿಗೆ ಬಂತು. ಯಾವಾಗ ಕಳೆದುಕೊಂಡದ್ದು ಎಂದೇ ತಿಳಿದಿಲ್ಲ. ಸಿ.ಸಿ ಕೆಮರಾ, ಹೋದ ಸಮಾರಂಭಗಳೆಲ್ಲೆಲ್ಲಾ ವಿಚಾರಿಸಿದರೂ ಏನೂ ಸುಳಿವು ಸಿಗಲಿಲ್ಲ. ವಿಚಾರಿಸಲು ಕೊನೆಯದಾಗಿ ಬಾಕಿಯಾದ್ದು ವಿಟ್ಲದ ಡಾ. ರಾಮ್‍ಮೋಹನ ಅವರ ಮಗ ಡಾ.ಅರವಿಂದ್ ಅವರ ಬೆನಕದ ಗೃಹಪ್ರವೇಶದ ಕಾರ್ಯಕ್ರಮ. ಅಂತೂ ತನ್ನ ಗೆಳೆಯನಾದ ಅರವಿಂದ ಅವರಿಗೆ ಕೇಶವ ಪ್ರಸಾದ್ ಮುಳಿಯ ಅವರು ಫೋನ್ ಮಾಡಿದರು. ತಕ್ಷಣವೇ ತಮಗೆ ಲಭ್ಯವಾಗಿರುವ ಚಿನ್ನದ ಸರಪಳಿಯ ಫೋಟೊ ವ್ಯಾಟ್ಸಪ್ ಮೂಲಕ ಕಳುಹಿಸಿದಾಗ ಖಚಿತವಾಯಿತು.
ಬಳಿಕ ವಿಚಾರಿಸಿದಾಗ ಊಟ ಮಾಡುತ್ತಿದ್ದ ಜಾಗದಲ್ಲಿ ಆ ದಿನದ ಕ್ಯಾಟರಿಂಗ್ ವ್ಯವಸ್ಥೆ ವಹಿಸಿಕೊಂಡ ಹೋಟೆಲ್ ಹರಿಪ್ರಸಾದ್ ನಲ್ಲಿ ನೌಕರಿಯಲ್ಲಿರುವ ಸತೀಶ್ ಮತ್ತು ರಾಮಣ್ಣ ಅವರಿಗೆ ಸಿಕ್ಕಿತು ಅವರು ನಮಗೆ ಹಸ್ತಾಂತರಿಸಿದರು ಎಂದರು. ಬಡಿಸುವ ಕೌಂಟರ್ ಪಕ್ಕ ಹೊಳೆಯತ್ತಿದೆಯಲ್ಲಾ ಎಂದು ರಾಮಣ್ಣ ಅವರಿಗೆ ಅನಿಸಿತು. ಸತೀಶ್ ಅವರು ಅದನ್ನು ಕೈಯಿಂದ ಎತ್ತಿದಾಗ ಅದು ಬ್ರಾಸ್‍ಲೆಟ್ ಎಂದು ತಿಳಿಯಿತು ಎಂದು ತಿಳಿಸಿದರು. ಇವರ ಪ್ರಾಮಾಣಿಕತೆಗೆ ತುಂಬು ಹೃದಯದ ಧನ್ಯವಾದ ಹೇಳಲಾಯಿತು. ಈಗ ಉಡುಗೊರೆಯಾಗಿ ಚಿನ್ನದ ನಾಣ್ಯಗಳನ್ನು ನೀಡಿ ಗೌರವಿಸಲಾಯಿತು.
( ನಿರೂಪಣೆ : ಕೃಷ್ಣವೇಣಿ ಪ್ರಸಾದ್ ಮುಳಿಯ)
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…