9500 ಕ್ಕೂ ಅಧಿಕ ಯುವಕರಿಗೆ ದೇಶದ ಗಡಿ ಕಾಯುವ ಉತ್ಸಾಹ…..

October 15, 2019
8:00 AM

ಮಡಿಕೇರಿ: ಜಮ್ಮು, ಕಾಶ್ಮೀರ ಮತ್ತು ಪುಲ್ವಾಮದಲ್ಲಿ ಉಗ್ರರ ದಾಳಿ ನಡೆದು ಸೈನಿಕರು ಹುತಾತ್ಮರಾದ ಬಳಿಕ ಯುವ ಸಮೂಹದಲ್ಲಿ ಸೇನೆಗೆ ಸೇರುವ ಕಿಚ್ಚು ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆರು ದಿನಗಳ ಕಾಲ ನಡೆಯುತ್ತಿರುವ ಸೇನಾ ಭರ್ತಿ ರಾಲಿಯಲ್ಲಿ ಪಾಲ್ಗೊಳ್ಳಲು ಸಾವಿರಾರು ಯುವಕರು ಆಗಮಿಸಿದ್ದಾರೆ.

Advertisement
Advertisement
Advertisement

Advertisement

ಕೊಡಗು ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲೆಗಳಿಂದ ಆಗಮಿಸಿರುವ ಯುವ ಸಮೂಹ ದೇಶಭಕ್ತಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದೆ. ದೇಶಕ್ಕಾಗಿ ಪ್ರಾಣ ನೀಡಲೂ ಸಿದ್ಧ ಎನ್ನುವ ಹುಮ್ಮಸ್ಸಿನಲ್ಲಿ ಸೇನೆಗೆ ಭರ್ತಿಯಾಗಲು ಬಂದಿರುವುದಾಗಿ ಹೇಳಿಕೊಂಡಿರುವ ಯುವಕರು ಎಲ್ಲಾ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಮಡಿಕೇರಿಯ ಮಳೆ, ಚಳಿಗೆ ಅಂಜದೆ ಧೈರ್ಯವಾಗಿ ಮೈಯೊಡ್ಡಿ ಮುಂಜಾನೆ 5 ಗಂಟೆಯಿಂದಲೇ ಓಟ, ಹಾರಾಟ ಸೇರಿದಂತೆ ವಿವಿಧ ಕಸರತ್ತುಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

 

Advertisement

ಸೇನಾ ನೇಮಕಾತಿ ರಾಲಿಯಲ್ಲಿ ಪಾಲ್ಗೊಳ್ಳಲು ಸುಮಾರು 9,572 ಮಂದಿ ಹೆಸರು ನೋಂದಾಯಿಸಿದ್ದಾರೆ. ಮೊದಲ ದಿನ 2,445 ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿತ್ತು, ಇವರಲ್ಲಿ 1,948 ಮಂದಿ ಹಾಜರಾಗಿದ್ದರು. ಎರಡನೇ ದಿನವಾದ ಸೋಮವಾರ 2,481 ಮಂದಿಯನ್ನು ಆಹ್ವಾನಿಸಲಾಗಿತ್ತು, ಇವರಲ್ಲಿ 1,825 ಮಂದಿ ಅಭ್ಯರ್ಥಿಗಳು ಹಾಜರಾಗಿ ಓಟ, ಉದ್ದ ಜಿಗಿತ, ಎತ್ತರ ಜಿಗಿತ ಹೀಗೆ ವಿವಿಧ ದೈಹಿಕ ಸಾಮರ್ಥ್ಯ  ಪರೀಕ್ಷೆಗಳಲ್ಲಿ ಪಾಲ್ಗೊಂಡಿದ್ದರು ಎಂದು ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಲೆ.ಕ.ಗೀತಾ ಅವರು ಮಾಹಿತಿ ನೀಡಿದರು.
ಸೇನಾ ನೇಮಕಾತಿ ರ್ಯಾಲಿ ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು  ಭೇಟಿ ನೀಡಿ ಪರಿಶೀಲಿಸಿದರು. ಮೂಲಭೂತ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

Advertisement

ಈ ಸಂದರ್ಭದಲ್ಲಿ ಸೇನಾ ಅಧಿಕಾರಿ ಅವರು ಸೇನಾ ನೇಮಕಾತಿ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಜಿಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀ ಬಾಯಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |
November 23, 2024
5:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror