ಜನವರಿ ವೇಳೆಗೆ ಮತ್ತೆ ಬರ್ಮಾ ಅಡಿಕೆ ಭೀತಿ : ಅಡಿಕೆ ಮಾರುಕಟ್ಟೆ ಸ್ಥಿರತೆ ಕಡೆಗೆ ಬೇಕಿದೆ ಗಮನ

December 3, 2019
7:34 PM

ಪುತ್ತೂರು: ಅಡಿಕೆ ಮಾರುಕಟ್ಟೆ ಈಗ ಏರಿಕೆಯ ಹಾದಿಯಲ್ಲಿದೆ. ಕಳೆದ ಎರಡು ವಾರಗಳಿಂದ ಅಡಿಕೆ ಧಾರಣೆ ಏರಿಕೆಯಾಗುತ್ತಿದೆ. ಆದರೆ ಮಾರುಕಟ್ಟೆ ಕಡೆಗೆ ಈಗ ಅಡಿಕೆ ಬೆಳೆಗಾರರು ಕೂಡಾ ನಿಗಾ ವಹಿಸಬೇಕಾದ ಅಗತ್ಯ ಇದೆ. ಜನವರಿ ವೇಳೆಗೆ ಬರ್ಮಾದಿಂದ ಅಡಿಕೆಯು ಕಳ್ಳ ದಾರಿ ಮೂಲಕ ಬರುವ ಸಾಧ್ಯತೆ ಇದೆ. ಕಳೆದ ವರ್ಷವೂ ಇದೇ ಮಾದರಿಯಲ್ಲಿ ಜನವರಿಯಲ್ಲಿ ಅಡಿಕೆ ಕಳ್ಳ ದಾರಿಯಲ್ಲಿ  ಬಂದಿತ್ತು. ಅದು ಕಳಪೆ ಗುಣಮಟ್ಟದ ಅಡಿಕೆಯಾಗಿದ್ದರೂ ಇಲ್ಲಿನ ಮಾರುಕಟ್ಟೆಯ ಮೇಲೆ ಒಮ್ಮೆಲೇ ಹೊಡೆತ ನೀಡಬಹುದಾಗಿದೆ.

ಸದ್ಯಕ್ಕೆ ಅಡಿಕೆ  ಮಾರುಕಟ್ಟೆಯಲ್ಲಿ  ಸಂಸತಸ ವಾತಾವರಣ ಇದೆ. ಡಿಸೆಂಬರ್ ನಂತರ ಇದೇ ಸಂತಸ ಉಳಿಯಬೇಕಾದರೆ ಮಾರುಕಟ್ಟೆಯಲ್ಲಿ  ಹಿಡಿತ ಇರಲೇ ಬೇಕಿದೆ. ಅನಗತ್ಯ ಏರಿಕೆ ಹಾಗೂ ಇಳಿಕೆ ಸಾಮಾನ್ಯ ಅಡಿಕೆ ಬೆಳೆಗಾರರ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ  ಈಗಲೇ ಹಿಡಿತ ಹಾಗೂ ನಿಯಂತ್ರಣ ಅಗತ್ಯವಿದೆ. ಕಳೆದ ಬಾರಿ ಕೊಳೆರೋಗ ವಿಪರೀತ ಬಾಧಿಸಿದ ಕಾರಣದಿಂದ ಅಡಿಕೆಯ ಕೊರತೆ ಮಾರುಕಟ್ಟೆಯಲ್ಲಿದೆ. ಈ ನಡುವೆ ಬರ್ಮಾದಿಂದ ಅಡಿಕೆ ಬರಲು ಸಿದ್ಧತೆ ನಡೆಸಿದೆ. ಇದು ಕಳಪೆ ಗುಣಮಟ್ಟದ ಅಡಿಕೆಯಾದರೂ ಈಗಿನ ಪರಿಸ್ಥಿತಿಯಲ್ಲಿ ಈ ಅಡಿಕೆ ಆಮದು ತಡೆಗೆ ಸಾಧ್ಯವಿಲ್ಲ.

ಶ್ರೀಲಂಕಾ, ಬಾಂಗ್ಲಾ ಮೊದಲಾದ ಕಳ್ಳದಾರಿಯಲ್ಲಿ  ಅಡಿಕೆ ಬರದಂತೆ ತಡೆಗೆ ಕೇಂದ್ರ ಸರಕಾರ ವ್ಯವಸ್ಥೆ ಮಾಡಿದ್ದರೂ ಭಾರತದೊಳಗೆ ಅಡಿಕೆ ತರಲು ಪ್ರಯತ್ನ ನಡೆಸಿದ್ದಾರೆ ಎಂಬ ಸುಳಿವು ಲಭ್ಯವಾಗಿದ್ದು ಜನವರಿ 15 ರ ಹೊತ್ತಿಗೆ ಭಾರತದೊಳಕ್ಕೆ ಆಗಮಿಸಿ ಇಲ್ಲಿನ ಅಡಿಕೆ ಜೊತೆ ಸೇರಿಸುವ ಪ್ರಯತ್ನ ನಡೆದಿದೆ. ಹೀಗಾಗಿ ಅಡಿಕೆ ಮಾರುಕಟ್ಟೆ, ಧಾರಣೆಗೆ ಈಗಲೇ ನಿಯಂತ್ರಣ ಬೇಕಿದೆ.  ಸದ್ಯ ಅನಗತ್ಯವಾಗಿ ಮಾರುಕಟ್ಟೆ ಏರಿಳಿಕೆ ಮಾಡಿ ನಂತರ ಬರ್ಮಾ ಅಡಿಕೆ ಜೊತೆ ಸೇರಿಸಿ ಮಾರಾಟ ಮಾಡುವ ಆಟವೊಂದು ಸಜ್ಜಾಗುತ್ತಿದೆ. ಅಡಿಕೆ ಬೆಳೆಗಾರರು ಈಗ ಮಾರುಕಟ್ಟೆ ಅಧ್ಯಯನ ನಡೆಸಿ ಅಡಿಕೆಯನ್ನು ಮಾರುಕಟ್ಟೆಗೆ ಬಿಟ್ಟರೆ ಜನವರಿ ನಂತರ ಎಪ್ರಿಲ್- ಮೇ ವರೆಗೂ ಅಡಿಕೆ ಧಾರಣೆ ಸ್ಥಿರತೆ ಕಾಣಬಹುದು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror