ಗಾಜಾ ನಾಗರೀಕರಿಗೆ ಕೊಂಚ ನಿರಾಳ | ದಿನಕ್ಕೆ 4 ಗಂಟೆ ಕದನ ವಿರಾಮಕ್ಕೆ ಒಪ್ಪಿದ ಇಸ್ರೇಲ್

November 10, 2023
1:14 PM
ದಿನಕ್ಕೆ 4 ಗಂಟೆ ಕದನ ವಿರಾಮವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿರುವುದಾಗಿ ವರದಿಯಾಗಿದೆ.

ಕೇಳೋದು ಕೇವಲ ಗುಂಡಿನ ಸದ್ದು ಬಿಟ್ರೆ ಇಲ್ಲಿ ಬೇರೇನೂ ಕೇಳೋದಿಲ್ಲ. ಗಾಜಾ(Gaza) ನಾಗರೀಕರ ಆರ್ತನಾದ ಈ ಗುಂಡಿನ ಸದ್ದಿನ ಮಧ್ಯೆ ಹುದುಗಿ ಹೋಗಿದೆ. ತಮ್ಮ ಕಷ್ಟವನ್ನು ಜಗತ್ತಿಗೆ ಜಗತ್ತೇ ಕೇಳದಾಗಿದೆ. ಒಂದಷ್ಟು ಜನ ನೋಡಿ ಮರುಗುವುದು ಬಿಟ್ಟರೆ ಬೇರೇನು ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ತುತ್ತಿನ ಊಟಕ್ಕು ಜನ ಪರದಾಡುತ್ತಿದ್ದಾರೆ. ಎರಡು ತುಂಡು ಬ್ರೆಡ್‌ ತಿಂದು ಜೀವನ. ಅದು ಸಿಕ್ರೆ ಸಿಕ್ತು.. ಇಲ್ಲಾಂದ್ರೆ ಇಲ್ಲ. ಕುಡಿವ ನೀರಿಗೂ ಪರದಾಡುವ ಸ್ಥಿತಿ ಇಲ್ಲಿನ ನಾಗರೀಕರದ್ದು. ಕೊನೆಗೆ ಇಲ್ಲಿಂದ ತಪ್ಪಿಸಿಕೊಂಡು ಹೋಗುವ ಅಂದ್ರು ಇದು ಅಸಾಧ್ಯದ ಕೆಲಸ.  ಇಸ್ರೇಲ್-ಹಮಾಸ್ (Israel-Hamas) ನಡುವಿನ ಯುದ್ಧ (War) ಪ್ರಾರಂಭವಾಗಿ ತಿಂಗಳು ಕಳೆದಿದೆ. ಅಕ್ಟೋಬರ್ 7 ರಂದು ಪ್ರಾರಂಭವಾದ ದಾಳಿಗೆ ಇಸ್ರೇಲ್ ಇದೀಗ ಕೊಂಚ ವಿರಾಮಕ್ಕೆ ಒಪ್ಪಿದೆ.

Advertisement

ದಿನಕ್ಕೆ 4 ಗಂಟೆ ಕದನ ವಿರಾಮವನ್ನು (Ceasefire) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ದೃಢಪಡಿಸಿದ್ದಾರೆ. ಗಾಜಾದ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್ ಯುದ್ಧದ ವಲಯದಲ್ಲಿ ನೆಲೆಸಿರುವ ನಾಗರಿಕರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳಲು ಅನುವುಮಾಡಿಕೊಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಯುದ್ಧಕ್ಕೆ ಸಂಪೂರ್ಣ ವಿರಾಮವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ದಿನದಲ್ಲಿ 20 ಗಂಟೆ ಯುದ್ಧ ನಡೆದರೆ 4 ಗಂಟೆ ದಾಳಿ ನಡೆಸುವುದಿಲ್ಲ ಎಂದು ನೆತನ್ಯಾಹು ತಿಳಿಸಿದ್ದಾರೆ.

ಆದರೆ ಹಮಾಸ್ ಉಗ್ರರ ವಿರುದ್ಧದ ದಾಳಿ ಎಂದಿಗೂ ನಿಲ್ಲುವುದಿಲ್ಲ. ಇಸ್ರೇಲ್‌ನ ದಾಳಿಯಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಾಗಬಾರದು ಎಂದು ಪ್ರತಿ ದಿನ 4 ಗಂಟೆ ದಾಳಿ ನಿಲ್ಲಿಸಲಾಗುತ್ತದೆ. ಆದರೆ ಹಮಾಸ್ ಉಗ್ರರ ವಿರುದ್ಧ ದಾಳಿ ಮುಂದುವರಿಯುತ್ತಲೇ ಇರುತ್ತದೆ. ನಾವು ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಹಾಗೂ ಇಡೀ ನಗರದ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುತ್ತಿಲ್ಲ. ಆದರೆ ಉಗ್ರರನ್ನು ಮಾತ್ರ ಸುಮ್ಮನೆ ಬಿಡಲಾಗುವುದಿಲ್ಲ ಎಂದಿದ್ದಾರೆ. ಇಸ್ರೇಲ್‌ನಲ್ಲಿ 1,400 ಜನರನ್ನು ಕೊಂದಿರುವ ಹಮಾಸ್ ಉಗ್ರರು ಇನ್ನು ಕೂಡಾ ಮಕ್ಕಳು, ವೃದ್ಧರು ಸೇರಿದಂತೆ 239 ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಇಸ್ರೇಲ್‌ನ ಅಧಿಕಾರಿಗಳು ಹೇಳಿದ್ದಾರೆ. ಅವರಲ್ಲಿ ಸುಮಾರು 10 ಅಮೆರಿಕನ್ನರು ಸೇರಿದ್ದಾರೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾದ ಮೇಲಿನ ದಾಳಿಗೆ ಇಲ್ಲಿಯವರೆಗೆ 10,800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Months have passed since the start of the war between Israel and Hamas. Israel has now agreed to a short pause in the offensive, which began on October 7. Israeli Prime Minister Benjamin Netanyahu confirmed the 4-hour-a-day ceasefire. This decision was taken in order to enable the civilians living in the war zone of Israel to move to a safe area where Israel is attacking Gaza. But he made it clear that there is no complete cessation of war.

- ಅಂತರ್ಜಾಲ ಮಾಹಿತಿ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 28-03-2025 | ಕೆಲವು ಕಡೆ ಇಂದೂ ಮಳೆ | ಎ.2 ರಿಂದ ಮುಂಗಾರು ಪೂರ್ವ ಮಳೆಯ ಲಕ್ಷಣ |
March 28, 2025
3:02 PM
by: ಸಾಯಿಶೇಖರ್ ಕರಿಕಳ
ಪಪ್ಪಾಯಿ ಬೆಳೆ ಕಲಿಸಿದ ಕೃಷಿ ಪಾಠ | ಕೃಷಿ ಬದುಕಿಗೊಂದು ಸ್ಫೂರ್ತಿಯ ಮಾತು |
March 28, 2025
8:12 AM
by: ಮಹೇಶ್ ಪುಚ್ಚಪ್ಪಾಡಿ
7.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಚಾರ್ ಧಾಮ್ ಹೇಮಕುಂಡ್ ಯಾತ್ರೆಗೆ ನೋಂದಾವಣೆ
March 28, 2025
8:00 AM
by: The Rural Mirror ಸುದ್ದಿಜಾಲ
ಹೇಮಾವತಿ ನದಿ ನೀರಿಗೆ ವಿಷ ಸೇರ್ಪಡೆ : ಮೀನುಗಳ ಸಾವು
March 28, 2025
7:35 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group