ಮೈಸೂರಿನ ತಲಕಾಡಿನ ಗ್ರಾಮದಲ್ಲಿರುವ ತಿಪ್ಪೆಕಾಳಿ ರಂಗನಾಥ್ ತಾವು ಸ್ವಯಂ ಪ್ರೇರಣೆಯಿಂದ ಒಬ್ಬಂಟಿಯಾಗಿ ಸ್ವಚ್ಛತಾ ಸೇವೆ ನಡೆಸುತ್ತಾ ಬಂದಿದ್ದಾರೆ. 54 ವರ್ಷದ ತಿಪ್ಪೆಕಾಳಿ ರಂಗನಾಥ್ ನಿಜವಾದ ಸ್ವಚ್ಛತಾ ಸೇನಾನಿ. ಗ್ರಾಮದಲ್ಲಿ ತನ್ನದೇ ಆದ ನ್ಯಾಯಬೆಲೆ ಅಂಗಡಿ ಹೊಂದಿರುವ ಅವರು, ಪ್ರತಿ ಶನಿವಾರದ ದಿನ ತನ್ನ ಸ್ವಚ್ಛತಾ ರಥದ ಮೂಲಕ ಕ್ಲೀನ್ ಮಾಡುತ್ತಾ ಬಂದಿದ್ದಾರೆ. ಹೀಗೆ ಇವ್ರ ಸ್ವಚ್ಛತಾ ಅಭಿಯಾನವು ಈಗ 24 ವರ್ಷಗಳನ್ನ ಪೂರೈಸಿದೆ.
ಸ್ವಚ್ಛತೆಯೇ ಸೇವೆ..! : ಸ್ವಚ್ಛ ಭಾರತ ಯೋಜನೆ ಜಾರಿಗೂ ಮುನ್ನವೇ, ಗಾಂಧೀಜಿ #Gandhiji ಅವರ ಕನಸನ್ನು ನನಸು ಮಾಡಲು ಟೊಂಕಕಟ್ಟಿ ನಿಂತವರು ಈ ತಿಪ್ಪೆಕಾಳಿ ರಂಗನಾಥ್ ಅವರು. ತಮ್ಮ ಬೈಕ್‌ಗೆ ಟ್ರಾಲಿಯನ್ನ ಕಟ್ಟಿಕೊಂಡು ಓಡಾಡುವ ಇವ್ರು ಆ ಮೂಲಕ ತಾವು ಸ್ವಚ್ಛ ಮಾಡಿದ ಬಳಿಕ ಸಂಗ್ರಹವಾಗುವ ಕಸ ಕಡ್ಡಿಗಳನ್ನ ಅದರ ಸಹಾಯದಿಂದ ಕೊಂಡೊಯ್ದು ವಿಲೇವಾರಿ ಮಾಡುತ್ತಾರೆ. ಶಾಲಾ ಶೌಚಾಲಯದಿಂದ ಹಿಡಿದು ಚರಂಡಿ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇವರು ಸ್ವಚ್ಛತಾ ಕಾರ್ಯ ನಡೆಸುತ್ತಾ ಬಂದಿದ್ದಾರೆ.
ಪ್ರಶಸ್ತಿಗಳ ಗೌರವ : ಮೈಸೂರು ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಇಂಡಿಯನ್ ವರ್ಚುವಲ್ ಯುನಿವರ್ಸಿಟಿ ಬೆಂಗಳೂರು ಇವರಿಂದ ಗೌರವ ಡಾಕ್ಟರೇಟ್ ನೀಡಿ ತಿಪ್ಪೆಕಾಳಿ ರಂಗನಾಥ್ ಅವರನ್ನ ಗೌರವಿಸಲಾಗಿದೆ. ಆರಂಭದಲ್ಲಿ ರಂಗನಾಥ್ ಅವರು ಈ ಕೆಲಸಕ್ಕೆ ಇಳಿದಾಗ ಕುಟುಂಬಿಕರಿಂದಲೇ ಸಾಕಷ್ಟು ಅಪಸ್ವರ ಬಂದಿತ್ತು. ಆದ್ರೀಗ ಅವ್ರೆಲ್ಲ ರಂಗನಾಥ್ ಅವರ ಜೊತೆಗಿದ್ದು ಅವರ ಸಹಾಯಕ್ಕೆ ನಿಲ್ಲುತ್ತಾ ಬಂದಿರುವುದು ವಿಶೇಷ.
– ಅಂತರ್ಜಾಲ ಮಾಹಿತಿ