ಸ್ವಚ್ಛತೆ ಬಗ್ಗೆ ಒಂದು ಅನಿಸಿಕೆ | ಎಲ್ಲಾ ಯಕ್ಷಗಾನ ಮೇಳದವರಿಗೆ ಒಂದು ವಿನಂತಿ | ಚುನಾವಣೆಯ ಡ್ಯೂಟಿಯವರಿಗೂ ಸ್ವಚ್ಛತೆ ಬಗ್ಗೆ ತರಬೇತಿ ನೀಡಿ |

May 1, 2024
4:55 PM
ಸ್ವಚ್ಛತಾ ಆಂದೋಲನಗಳು ಹಲವು ನಡೆದವು. ಸ್ವಚ್ಛತಾ ಜಾಗೃತಿಗಳು ನಡೆದವು.ಪ್ರತೀ ವಾರ ಕಸ ಹೆಕ್ಕುವ ಅಭಿಯಾನಗಳೂ ನಡೆದವು. ಆದರೂ ಸ್ವಚ್ಛತೆಯ ಅರಿವು ಮೂಡಲಿಲ್ಲ. ಈ ನಡುವೆ ಅಶೋಕ್‌ ಕುಮಾರ್‌ ಮತ್ತು ವಿದ್ಯಾ ಕಾರ್ಕಳ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದಿರುವ ಒಂದು ಕಾಳಜಿಯ ಬರಹ ಗಮನ ಸೆಳೆದಿದೆ. ಅದರ ಯಥಾವತ್ತಾದ ರೂಪ ಇಲ್ಲಿದೆ...

ಮುಖ್ಯವಾಗಿ ಯಾವುದೇ ಸಮಾರಂಭ(Function) ಪ್ರಾರಂಭವಾಗುವ ಮುಂಚೆ, ಆ ಸ್ಥಳ ಎಷ್ಟು ಸ್ವಚ್ಛತೆಯಿಂದ(Clean) ಕೂಡಿತ್ತೋ, ಆ ಸಮಾರಂಭ ಮುಗಿಸಿ ಆ ಸ್ಥಳ ಬಿಟ್ಟು ಹೋಗುವಾಗ ಕೂಡ ಮೊದಲಿನಂತೆಯೇ ಸ್ವಚ್ಛತೆಯಿಂದ ಇರಬೇಕೆಂದು ಒಂದು ನನ್ನ ತತ್ವ. ಅದನ್ನು ಜನಮಾನಸದಲ್ಲಿ ನಾವು ಬಿತ್ತಿದರೆ ಪರಿಸ್ಥಿತಿಯು ಸುಧಾರಿತು ಎಂಬ ನನ್ನ ಅನಿಸಿಕೆ, ಆ ದೆಸೆದಲ್ಲಿ ಒಂದು ಚಿಕ್ಕ ಪ್ರಯತ್ನ. ಆ ಸಮಾರಂಭ ನಡೆಯುವಾಗ ಆಗಾಗ, ಅನುಕೂಲವಾದಾಗ, ಧ್ವನಿವರ್ಧಕದ(Mic) ಮೂಲಕ ಜನರನ್ನು ಈ ಬಗ್ಗೆ ಕಾಳಜಿ ವಹಿಸುವಂತೆ ವಿನಂತಿಸುವುದು. ಮತ್ತು ತ್ಯಾಜ್ಯಗಳನ್ನು(Waste) ಇಡಲು ಸರಿಯಾದ ವ್ಯವಸ್ಥೆಗಳನ್ನು ಮಾಡುವುದು. ಈ ತ್ಯಾಜ್ಯಗಳನ್ನು ಒಳ್ಳೆಯ ರೀತಿಯಲ್ಲಿ ವಿಲೇವಾರಿ(Dispose) ಮಾಡುವುದು. ಮುಖ್ಯವಾಗಿ ತ್ಯಾಜ್ಯ ಎಂಬುದೇ ಇಲ್ಲ. ಸರಿಯಾಗಿ ಆಲೋಚನೆ ಮಾಡಿದರೆ ಅವು ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುವಂತೆ ಮಾಡಬಹುದು. ಇವತ್ತು ನಮಗೆ ಅವುಗಳನ್ನು ಹೇಗೆ ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕೆಂದು ಜ್ಞಾನ(Knowledge) ಇಲ್ಲ ಅಷ್ಟೇ ಅಂತ ನನ್ನ ಅನಿಸಿಕೆ. ಇದರ ಜೊತೆಗೆ ನಮ್ಮ ಅಸಡ್ಡೆಯೂ ಕೂಡ ಜೊತೆಯಾಗುತ್ತದೆ.

Advertisement
Advertisement
Advertisement

ಎಲ್ಲಾ ಯಕ್ಷಗಾನ ಮೇಳದವರಿಗೆ ಒಂದು ವಿನಂತಿ : ಎಲ್ಲಾ ಮೇಳದ ಯಜಮಾನರಿಗೆ ಒಂದು ಪತ್ರ. ಆ ಮೇಳ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ಪ್ರತಿ ಮೇಳದವರು ಒಂದು ಸ್ವಚ್ಛತೆಯ ಬಗ್ಗೆ ಒಂದು ಸಣ್ಣ ಪ್ರಹಸನ ಮಾಡಿ ಜನರ ಮುಂದಿಟ್ಟರೆ ಪರಿಸ್ಥಿತಿ ಬಹಳಷ್ಟು ಸುಧಾರಿತು ಅಂತಲೂ ಅನಿಸಿದೆ. ಈ ಬಗ್ಗೆ ತಮ್ಮ ಮೇಳದಲ್ಲಿ ಅನುಷ್ಠಾನಿಸಲು ಯಾವ ಕ್ರಮ ಕೈಗೊಳ್ಳುವಿರಿ ಅಂತ ತಿಳಿಸ ಬೇಕೆಂದು ವಿನಂತಿಸುತ್ತೇನೆ.

Advertisement

ಹಾಗೆಯೇ, ಪ್ರತಿ ಶಾಲೆಗಳಲ್ಲಿ ಮಕ್ಕಳಿಗೆ ಒಂದು ಪ್ರಬಂಧ ಸ್ಪರ್ಧೆ ವಿಷಯ : ನಮ್ಮ ಮನೆಯನ್ನು, ನಮ್ಮ ವಠಾರವನ್ನು, ನಮ್ಮ ಶಾಲೆಯನ್ನು ಸ್ವಚ್ಛ ಇಡುವಲ್ಲಿ ನನ್ನ ಪಾತ್ರ‌ ಸ್ವಚ್ಛತೆಯ ಬಗ್ಗೆ ಮೇಲಿನಂತೆ ವಿಷಯ ಪ್ರಸ್ತಾಪಿಸಿದ್ದೇನೆ. ನಮ್ಮ ಪರಿಸರ ಬಳಗವು ಜಿಲ್ಲಾಧಿಕಾರಿಗಳಿಗೆ ಹಾಗೂ ಪಂಚಾಯತ್ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಈ ಬಗ್ಗೆ ಪತ್ರ ಅಥವಾ ಮಿಂಚಂಚೆಯನ್ನು/ ಕಳಿಸಬಹುದೇ? ಈ ಬಗ್ಗೆ ಇನ್ನೂ ಉತ್ತಮ ಆಲೋಚನೆ ಇದ್ದಲ್ಲಿ ತಿದ್ದುಪಡಿಗೆ ಸ್ವಾಗತ

ಖಂಡಿತಕ್ಕೂ ಹೌದು. ಇದು ಎಲ್ಲರನ್ನೂ ಯಾವತ್ತೂ ಕಾಡುವ ವಿಷ್ಯ. ಟಿಶ್ಯೂ ಪೇಪರ್, ನೀರಿನ ಬಾಟಲಿ ಮತ್ತು ಕಾಗದದ ಲೋಟದ ಬಳಕೆ ಕಡಿಮೆ ಮಾಡಿದರೆ ಎಲ್ಲ ಸಮಾರಂಭಗಳಲ್ಲಿ ಮುಕ್ಕಾಲುವಾಸಿ ಕಸ ಕಡಿಮೆಯಾಗುತ್ತದೆ. ಮೊನ್ನೆ ಚುನಾವಣೆ ಸಂದರ್ಭ ಶಿಕ್ಷಕಿಯಾಗಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ದಿನ ಊಟದ ಜಾಗದಲ್ಲಿ ಒಟ್ಟಾದ ಕಸ.. ಊಟದ ಇಡೀ ಪರಿಸರದಲ್ಲಿ ತುಂಬಿದ ಕಸ.. ನೋಡ್ತ ಹಾಗೇ ಎರಡು ನಿಮಿಷ ನಿಂತು ಇದಕ್ಕೆಲ್ಲ ಪರಿಹಾರವಿಲ್ವೇ ಎಂದು ಪರಿತಪಿಸಿದ್ದೇನೆ. ಅಲ್ಲಿ ಅವತ್ತು ಮಸ್ಟರಿಂಗ್ ದಿನ ಶಿಕ್ಷಕರು , ಇತರೇ ಅಧಿಕಾರಿಗಳು ಸೇರಿ ಒಂದೂವರೆ ಸಾವಿರ ಜನ ಊಟ ಮಾಡಿರಬಹುದು. ಡಿಮಸ್ಟರಿಂಗ್ ದಿನ ಪೋಲೀಸ್ ಸಿಬ್ಬಂದಿಯೂ ಸೇರಿ ಎರಡೂವರೆ ಸಾವಿರದಷ್ಟು ಜನ ಊಟ ಮಾಡಿರಬಹುದು. ಹೀಗೆ ಜಿಲ್ಲೆಯ ಎಲ್ಲ ತಾಲೂಕು ಮತ್ತು ಚುನಾವಣೆ ನಡೆಯುವ ಎಲ್ಲ ಜಿಲ್ಲೆಗಳಲ್ಲಿ ಕೂಡ ಹೀಗೆಯೇ ಊಟದ ವ್ಯವಸ್ಥೆ ಇರುತ್ತದೆ. ಎಲ್ಲ ಕಡೆಯ ಕಸವೂ ಎಷ್ಟಾಗುತ್ತದೆ ಎನ್ನುವುದೂ ಆಗ ಮನಸ್ಸಿಗೆ ಬಂದು ಹೋಯ್ತು. ಅಲ್ಲಿ ರಾಶಿರಾಶಿಯಾದ ಕಸ ಎಂದರೆ ಮಜ್ಜಿಗೆ ಕುಡಿದ ಮತ್ತು ಪಾಯಸ ಕುಡಿದ ಕಾಗದದ ಲೋಟಗಳು ಈ ಕಾಗದದ ಲೋಟಗಳು ಹಾಕಿಟ್ಟ ಡ್ರಮ್ ಗ್ರೇನೇ.. ಜನ ಪ್ಲೇಟಲ್ಲಿ ಉಳಿದ ಅನ್ನ ಹಾಕ್ತ ಇದ್ರು. ಕೊನೆಗೆ ಹೇಗಪ್ಪ ಇದನ್ನು ವಿಂಗಡಿಸಿ ವಿಲೇವಾರಿ ಮಾಡ್ತಾರೆ ಎಂದು ವಿಪರೀತ ಕಾಡಿತು.

Advertisement

ಪ್ಲೇಟಲ್ಲಿ ಉಳಿದ ಅನ್ನ ಬೇರೆ, ಕಾಗದದ ಲೋಟ ಬೇರೆ ಇದ್ದರಾದರೂ ಆ ಉಳಿಕೆ ಆಹಾರವನ್ನು ಕೋಳಿ, ಹಂದಿ ಸಾಕುವವರು ಬಳಸಬಹುದು. ಅಲ್ಲಿ ನಾಲ್ಕು ಡ್ರಮ್ ಕಾಗದದ ಲೋಟ ತುಂಬಿ..ನಂತರ ಅವೂ ಸಾಕಾಗದೇ ಹೊರಬಿದ್ದಿದ್ದವು. ಇಡೀ ಪರಿಸರದಲ್ಲಿ ಟಿಶ್ಯೂ ಪೇಪರ್ ಅಲ್ಲಲ್ಲಿ ಹರಡಿತ್ತು. ಮಜ್ಜಿಗೆ ಕುಡಿಯಲು ಒಂದಿಷ್ಟು ಸ್ಟೀಲ್ ಲೋಟ ಇಟ್ಟಿದ್ದರೆ..ಮಜ್ಜಿಗೆ ಕುಡಿದು ಮತ್ತೆ ಅಲ್ಲಿಯೇ ಜನ ಇಡುತ್ತಿದ್ದರಲ್ಲ..ಮತ್ತದೇ ಲೋಟದಲ್ಲಿ ಹಾಕಿ ಕೊಡಬಹುದಿತ್ತು. ಆಗ ಪಾಯಸಕ್ಕೆಂದು ಜನ ಮತ್ತೆ ಲೋಟ ತೆಗೆದುಕೊಳ್ಳುತ್ತಿರಲಿಲ್ಲ.ಪ್ಲೇಟಲ್ಲೇ ಪಾಯಸ ಬಡಿಸಿಕೊಳ್ಳುತ್ತಿದ್ದರು. ಇಲ್ಲಿ ಕಾಗದದ ಲೋಟದ ಲಭ್ಯತೆ ಇದ್ದ ಕಾರಣ ಬೇಕಾಬಿಟ್ಟಿಯಾಗಿ ಬಳಸಲ್ಪಟ್ಟಿತು. ಇಲ್ಲಿ ಚುನಾವಣಾ ಕರ್ತವ್ಯದಲ್ಲಿ ಚಿಕ್ಕಮಕ್ಕಳು ಯಾರೂ ಇರುವುದಿಲ್ಲ. ಎಲ್ಲ ದೊಡ್ಡವರೇ. ಮಸ್ಟರಿಂಗ್ ಮೊದಲು ತಂಡವಾರು ತರಬೇತಿಯೂ ಇರುತ್ತದೆ. ಅಂತಹ ತರಬೇತಿ ಸಂದರ್ಭ ಊಟದ ಪರಿಸರದ ಸ್ವಚ್ಛತೆ, ಉಳಿಕೆ ಅನ್ನವನ್ನು ಕಾಗದ ಕಸದೊಂದಿಗೆ ಬೆರಕೆ ಮಾಡದಿರುವ ಬಗ್ಗೆ ಎಲ್ಲ ಹೇಳಲು ಅವಕಾಶ ಬಳಸಿಕೊಳ್ಳಬಹುದು. ಬಡಿಸಲು ಕ್ಯಾಟರಿಂಗ್ ನ ಹುಡುಗರು ನಿಂತಿದ್ರು. ನಂತರ ಆ ಕಸದ ವಿಲೇವಾರಿ ಆ ಹುಡುಗ್ರಿಗೆ ಎಷ್ಟೊಂದು ಕಷ್ಟ. ಬಡಿಸಲು ನಿಂತ ಹಾಗೇ.. ಊಟ ಆಗಿ ಪ್ಲೇಟ್ ಇಡುವ ಕಡೆಯೂ ಇಬ್ರು ಹುಡುಗ್ರು ನಿಂತು ಉಳಿಕೆ ಅನ್ನ ಇದಕ್ಕೆ, ಕಾಗದದ ಲೋಟ ಇದಕ್ಕೆ ಎಂದು ಸೂಚನೆ ಕೊಡ್ತಿದ್ರೆ ನಂತರದ ಕೆಲಸ ಅವರಿಗೂ ಸ್ವಲ್ಪ ಸುಲಭವಾಗ್ತಿತ್ತು. ಕಾಗದದ ಲೋಟ ಮತ್ತು ಉಳಿಕೆ ಅನ್ನ ಒಂದರಲ್ಲೇ ಸೇರಿದ ರೀತಿ ಎಲ್ಲ ಕಡೆಯೂ ಆದರೆ ಅಬ್ಬ ಆ ವಿಲೇವಾರಿಯ ಕಷ್ಟ..ಊಹಿಸಲೂ ಅಸಾಧ್ಯ. ಇದಕ್ಕೆಲ್ಲ ಆಯೋಜಕರು ಮೊದಲೇ ವ್ಯವಸ್ಥಿತವಾಗಿ ಯೋಚಿಸಿ, ಯೋಜಿಸಿ ಪರಿಹಾರ ಕಂಡುಕೊಳ್ಳಬೇಕಲ್ಲವೇ.

ಇನ್ನೊಂದು ಮಾತು: ಚುನಾವಣಾ ಆಯೋಗವು ಸರ್ಕಾರಿ ಆದೇಶವನ್ನು ಧಿಕ್ಕರಿಸಿದೆ. ಪ್ರತಿಯೊಂದು ಬೂತ್ ಗೆ 12 ಲೀಟರ್ ಪ್ಲಾಸ್ಟಿಕ್ (ಎರಡು ಲೀಟರ್ ನ ಆರು ಬಾಟಲ್ ಗಳು) ಬಾಟಲ್ ಗಳಲ್ಲಿ ನೀರು ಸರಬರಾಜು ಮಾಡಿದೆ. ಅದನ್ನು ಮಸ್ಟರ್ರಿಂಗ್ ಕೇಂದ್ರದಲ್ಲಿ ಚುನಾವಣಾ ಸಿಬ್ಬಂದಿಗಳಿಗೆ ಚುನಾವಣಾ ಪರಿಕರದೊಂದಿಗೆ ತಮ್ಮ ಬೂತಿಗೆ ಹೊತ್ತಯ್ಯೋ ಹಾಗೇ ಮಾಡಿದ್ದಾರೆ. ಆಹಾರದ ಪೊಟ್ಟಣಗಳನ್ನು ಪ್ಲಾಸ್ಟಿಕ್ ನಲ್ಲಿ ಹಾಕಿ ಕೊಟ್ಟಿರುತ್ತಾರೆ. ನೀರನ್ನು ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ಸರಬರಾಜು ಮಾಡಬಾರದೆಂದು ಸರಕಾರದ ಆದೇಶ ಇದೆ. ಅದು ಆಹಾರದ ಪೊಟ್ಟಣಕ್ಕೂ ಅಪ್ಲೈ ಆಗುತ್ತೆ. ಇದನ್ನೆಲ್ಲಾ ನಾವು ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣ ಅಧಿಕಾರಿಗಳ ಸಭೆಯಲ್ಲಿ ಹೇಳಬೇಕು.

Advertisement
ಬರಹ :
ಅಶೋಕ್‌ ಕುಮಾರ್‌ ಮತ್ತು ವಿದ್ಯಾ ಕಾರ್ಕಳ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror