ಇತ್ತೀಚಿನ ದಿನಗಳಲ್ಲಾಗುತ್ತಿರುವ ಹವಮಾನ ಬದಲಾವಣೆಯ ಏರುಪೇರಿನ ಮಧ್ಯೆ ನಮ್ಮ ಕೃಷಿ ಪದ್ಧತಿಯಲ್ಲಿ ನಾವು ಯಶಸ್ಸನ್ನು ಸಾಧಿಸಬೇಕಾದರೆ ನಮ್ಮ ಕೃಷಿ ಭೂಮಿಯನ್ನು ಆಹಾರವನವನ್ನಾಗಿ ಪರಿವರ್ತಿಸಬೇಕಾಗಿದೆ.
ಈ ನಮ್ಮ ಆಹಾರವನ್ನು ( ಫುಡ್ ಫಾರೆಸ್ಟ್ ) ಆಯಾ ಮರಗಿಡಗಳ ಅವಶ್ಯಕತೆಗೆ ತಕ್ಕಂತಹ ಬೆಳಕನ್ನ ಒದಗಿಸುತ್ತ, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ವಿಧಾನವು ಒಳಗೊಂಡಂತಹ, ಮಣ್ಣಿನ ಫಲವತ್ತತೆ ಹೆಚ್ಚಿಸುವ ಹ್ಯೂಮಸ್ ಹಾಗೂ ಸಾವಯವ ಇಂಗಾಲಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಾ, ಜೀವಾಣುಗಳು ಸೂಕ್ಷ್ಮ ಜೀವಾಣುಗಳ ಸಂಖ್ಯೆಯನ್ನು ವೃದ್ಧಿಸುತ್ತಾ, ಪ್ರತಿ ತಿಂಗಳು ಕನಿಷ್ಠ 15 ರಿಂದ 20 ಸಾವಿರ ರೂಪಾಯಿ ಆದಾಯವನ್ನು ಒದಗಿಸುವಂತಹ ಕೃಷಿ ಪದ್ಧತಿಯಾಗಿದೆ. ಇದನ್ನು ಬೆಳಕಿನ ಬೇಸಾಯ ಎಂದು ಕರೆಯೋಣ.
ಬೆಳಕಿನ ಬೇಸಾಯ ಕೃಷಿ ಪದ್ಧತಿಯ ಬಗ್ಗೆ ಇದೇ ತಿಂಗಳ 3ನೇ ಸೆಪ್ಟೆಂಬರ್ 2023 ರಂದು ಮೈಸೂರಿನ ( ಬಸ್ ಸ್ಟ್ಯಾಂಡ್ ನಿಂದ ಸುಮಾರು 15 ಕಿ.ಮೀ ) ಬನವಾಸಿ ತೋಟದಲ್ಲಿ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಗಿದೆ. ಅವಿನಾಶ್ ಟಿ ಜಿ ಎಸ್ ರವರು ಸುಮಾರು 15 ವರ್ಷಗಳಿಂದ ಬೆಳಕಿನ ಬೇಸಾಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವ್ಯವಸಾಯ ಮಾಡುತ್ತಿದ್ದು ಈ ಕಾರ್ಯಗಾರವನ್ನು ನಡೆಸಿಕೊಡಲಿದ್ದಾರೆ. ಆಸಕ್ತರು ಭಾಗವಹಿಸಬಹುದು. ( ನೋಂದಣಿ ಕಡ್ಡಾಯ ) ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8197856132