ಈ ಚಾರ್ಲಿಗೆ ನೀವು ಏನು ಹೇಳುತ್ತೀರಿ… ? | 4 ಕಿಮೀ ದೂರ ಸ್ಕೂಟರ್‌ ಹಿಂದೆ ಓಡಿ ಬಂದ ನಾಯಿ…! |

October 29, 2022
10:07 AM

ಚಾರ್ಲಿ ಸಿನಿಮಾ ನೋಡಿದವರಿಗೆ ನಾಯಿ ಪ್ರೀತಿಯ ಬಗ್ಗೆ ಅರಿವು ಇದೆ. ಆದರೆ ಗ್ರಾಮೀಣ ಭಾಗದಲ್ಲಿ  ನಿತ್ಯವೂ ಅಂತಹದ್ದೇ ಹಲವು ಚಾರ್ಲಿ ಇದೆ. ಮನುಷ್ಯ ಪ್ರೀತಿ, ನಿಷ್ಟೆಯ ನಾಯಿಗಳು ಇವೆ. ಇಲ್ಲೊಂದು ನಾಯಿ  4 ಕಿಮೀ ದೂರು ಸ್ಕೂಟರ್‌ ಹಿಂದೆ ಓಡಿಕೊಂಡು ಬಂದಿದೆ. ಕಾರಣ ಪ್ರೀತಿ ಮಾತ್ರಾ…!. ಈ ಘಟನೆ ನಡೆದ್ದು ಸುಳ್ಯ ತಾಲೂಕಿನ ಬಳ್ಪ-ಕಮಿಲದಲ್ಲಿ.

Advertisement
Advertisement
Advertisement

Advertisement

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದ ಬಳಿಯ ರತನ್‌ ಅವರು ಬಳ್ಪಕ್ಕೆ ಹೋಗುತ್ತಿದ್ದರು. ಈ ಸಂದರ್ಭ ನಾಯಿಯೊಂದು ಬಳ್ಪದ ಗೋಪಾಲ್‌ ಎಂಬವರ ಗ್ಯಾರೇಜ್‌ ಬಳಿ ಇರುತ್ತಿತ್ತು. ಗ್ಯಾರೇಜ್‌ ಮಾಲಕರು ಈ ನಾಯಿಗೆ ತಿಂಡಿ ಹಾಕುತ್ತಿದ್ದ ಕಾರಣ ಅದೇ ಆಸುಪಾಸಲ್ಲಿ ಇರುತ್ತಿತ್ತು. ಈ ನಾಯಿಯನ್ನು ರತನ್‌ ಅವರು ಕೊಂಡೋಗುವಂತೆ ಗೋಪಾಲ್‌ ಹೇಳಿದ್ದರು.  ನಿರಾಕರಿಸಿದ ರತನ್‌ ನಾಯಿಗೆ ಬಿಸ್ಕೇಟ್‌ ಹಾಕಿ ಸುಮ್ಮನಿರುತ್ತಿದ್ದರು. ಈಚೆಗೆ ಗ್ಯಾರೇಜಿಗೆ ಹೋಗಿದ್ದ ರತನ್‌ ವಾಪಾಸ್‌ ಮನೆಗೆ ಬರುವಾಗ ಸ್ಕೂಟರ್‌ ಹಿಂದೆಯೇ ಓಡಿ ಬಂದ ನಾಯಿ 4 ಕಿಮೀ ದೂರದಲ್ಲಿರುವ ರತನ್‌ ಅವರ ಮನೆ ಸೇರಿತು. ರಸ್ತೆ ಬದಿಯಲ್ಲಿ ಓಡುತ್ತಲೇ ಬಂದ ನಾಯಿ ಗಮನ ಸೆಳೆಯಿತು.

ರತನ್‌ ಮನೆಗೆ ಬಂದಿರುವ ನಾಯಿ ಅವರ ಪುತ್ರಿಯ ಜೊತೆ

ಇದು ಹೆಣ್ಣು ನಾಯಿಯಾದ್ದರಿಂದ ರಸ್ತೆ ಬದಿ ಯಾರೋ ಬಿಟ್ಟು ತೆರಳಿದ್ದರು. ಆದರೆ ನಾಯಿಯ ಪ್ರೀತಿ ಹಾಗೂ ನಿಷ್ಟೆ ಗಮನ ಸೆಳೆಯಿತು. ಈಗ ರತನ್‌ ಅವರು ಮನೆಯಿಂದ ಹೊರಹೋಗುತ್ತಿವಾಗ ಜೊತೆಯಲ್ಲೇ ಬರುತ್ತದೆ.

Advertisement

ರತನ್‌ ಅವರು ಪ್ರಾಣಿ ಪ್ರೇಮಿಯೂ ಆಗಿದ್ದಾರೆ. ಬಳ್ಪದ ಕಾಡಿನ ಬಳಿ ಯಾರೋ ಹೋರಿಯನ್ನು ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಅವರು ಮನೆಗೆ ತಂದು ಸಾಕಿದ್ದಾರೆ. ಈಗ ಅವರ ತೋಟದ ಸುತ್ತೆಲ್ಲಾ ಹುಲ್ಲು ಮೇಯುತ್ತಿರುತ್ತದೆ. ಅಂಬು ಎಂದು ಹೆಸರಿಟ್ಟಿದ್ದಾರೆ. ಮನೆಯಿಂದ ಹೆಸರು ಕರೆದ ತಕ್ಷಣ ಅಂಗಳಕ್ಕೆ ಬರುವ ಈ ಕರುವಿನ ಪ್ರೀತಿ ಹೆಚ್ಚು ಗಮನ ಸೆಳೆಯುತ್ತದೆ.

ರತನ್‌

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |
November 26, 2024
7:11 AM
by: ಮಹೇಶ್ ಪುಚ್ಚಪ್ಪಾಡಿ
ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಜಯಪ್ರಸಾದ ಆನೆಕಾರ
November 26, 2024
5:53 AM
by: ದ ರೂರಲ್ ಮಿರರ್.ಕಾಂ
ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ
ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ
November 25, 2024
8:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror