ಸರ್ಕಾರಗಳಿಂದ ಇನ್ನೂ ಬಾರದ ಸೌಲಭ್ಯ | ಅಣೆಕಟ್ಟು ನಿರ್ಮಿಸಿ 800 ಎಕರೆಯಲ್ಲಿ ಕೃಷಿ ಬೆಳೆಯುವ ಗ್ರಾಮಸ್ಥರು..!

February 28, 2024
1:32 PM
ಗ್ರಾಮೀಣ ಜನರ ಸಾಧನೆಯ ಕತೆ ಇದು.

ಎಷ್ಟೋ ಹಳ್ಳಿಗಳಲ್ಲಿ(Village) ರೈತರಿಗೆ(Farmer) ಬೇಕಾದ ಸೌಲಭ್ಯಗಳು ಇನ್ನು ಅವರನ್ನು ತಲುಪಿಲ್ಲ. ಹಾಗೆ ಹಳ್ಳಿಗಳ ಕಥೆನೂ ಅದೇ.. ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ(Basic amenities) ಅದೆಷ್ಟೋ ಹಳ್ಳಿಗಳ ಜನ ಇಂದು ಬದುಕುತ್ತಿದ್ದಾರೆ. ಕೆಲವೊಮ್ಮೆ ಈ ಸರ್ಕಾರಗಳನ್ನು(Govt)ನಂಬಿದರೆ ಪ್ರಯೋಜನ ಇಲ್ಲ ಎಂದು ತಮಗೆ ಬೇಕಾದ ಕೆಲಸಗಳನ್ನು ತಾವೇ ಒಗ್ಗೂಡಿ ಮಾಡಿಕೊಳ್ಳುತ್ತಾರೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ(Uttara kannada) ಕುಮಟಾದ ಜನ ತಮ್ಮೂರಿಗೆ ಬೇಕಾದ್ದನ್ನು ತಾವೇ ಮಾಡಿಕೊಳ್ಳುವ ಸ್ವಾವಲಂಬಿಗಳು.

Advertisement

ಕುಮಟಾ ತಾಲೂಕಿನ ಬಗ್ಗೋಣ ಎಂಬ ಊರಲ್ಲಿ ಒಂದು ನದಿ(River) ಇದೆ. ಈ ನದಿ ಉಪ್ಪುನೀರು(Salt water) ಹಾಗೂ ಸಿಹಿನೀರಿನ(Sweet water) ಸಂಗಮವಾಗುವ ಜಾಗ. ಬೆಳೆ ಬೆಳೆಯಬೇಕಾದರೆ, ಜನ ಬದುಕಬೇಕಾದರೆ ಸಿಹಿ ನೀರು ಅತ್ಯಗತ್ಯ.  ಇದು ಅನೇಕ ಊರಿಗೆ ಸಂಪರ್ಕ ಕಲ್ಪಿಸೋ ಊರು. ಇಲ್ಲಿ ಸಿಹಿ ನೀರನ್ನು ಹಲಗೆ ಹಾಗೂ ಮಣ್ಣಿನ ತಾತ್ಕಾಲಿಕ ಅಣೆಕಟ್ಟು(Dam) ಮಾಡಿಕೊಂಡು ಸಂಗ್ರಹಿಸಲಾಗುತ್ತಿತ್ತು. ಆದರೆ ಪ್ರತಿ ವರ್ಷ ಮಳೆ(Rain) ಬಂತೆಂದರೆ ಕಟ್ಟ ಪೂರ್ತಿ ಕೊಚ್ಚಿ ಹೋಗಿತ್ತು. ನಂತರ ಪ್ರತಿ ವರ್ಷ ಗ್ರಾಮಸ್ಥರು ತಮ್ಮ ಕೈಯಿಂದಲೇ 50,000-60,000 ಖರ್ಚು ಮಾಡಿ ಹೀಗೆ ಅಣೆಕಟ್ಟನ್ನು ಕಟ್ಟಿಕೊಳ್ಳುತ್ತಾರೆ. ಈ ಪರಿಪಾಠ 10 ವರ್ಷದಿಂದ ಜಾರಿಯಲ್ಲಿದೆ.

ಒಗ್ಗಟಾಗಿ ಸೇತುವೆ ನಿರ್ಮಾಣ : ಬಗ್ಗೋಣ ಊರಿಗೆ ಊರೇ ಒಗ್ಗಟ್ಟಾಗಿ ಈ ಸೇತುವೆ ಕಟ್ಟಿದೆ. ಅಡಿಕೆ ದಬ್ಬೆಗಳನ್ನು ಹಾಗೂ ಮಣ್ಣನ್ನು ಬಳಸಿಕೊಂಡು ಮಾಡಿರುವ ಈ ತಡೆಗೋಡೆಯಿಂದ ಉಪ್ಪು ನೀರು ಬೇರ್ಪಟ್ಟು ಸುಮಾರು 500 ಎಕರೆ ಕೃಷಿ ಭೂಮಿ ಸೇರಿದಂತೆ 800 ಎಕರೆ ಭೂ ಪ್ರದೇಶ ಉಪ್ಪು ನೀರಿನಿಂದ ಮುಕ್ತವಾಗಿದೆ. ಬಗ್ಗೋಣ, ಊರು ಕೇರಿ, ಹೆರವಟ್ಟಾ ಊರಿನ ಜನ ಇದರ ಲಾಭ ಪಡೆಯುತ್ತಿದ್ದಾರೆ. ಜನರೇ ಅಣೆಕಟ್ಟಿನ ತರಹ ರಚನೆಯೊಂದನ್ನು ಮಾಡಿಕೊಂಡು ಅನೇಕರಿಗೆ ಮಾದರಿಯಾಗಿದ್ದಾರೆ. ಈ ಮೂಲಕ 800 ಎಕರೆ ಜಮೀನನ್ನು ಉಪ್ಪು ನೀರಿನಿಂದ ರಕ್ಷಿಸಿಕೊಂಡಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕದನ ವಿರಾಮ ಘೋಷಣೆ | ಭಾರತ ಮತ್ತು ಪಾಕಿಸ್ತಾನ ಗಡಿಯಾಚೆಗಿನ ದಾಳಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ
May 10, 2025
7:42 PM
by: The Rural Mirror ಸುದ್ದಿಜಾಲ
ಕೃಷಿಕರ ಸಂಸ್ಥೆ ಕ್ಯಾಂಪ್ಕೊ ವತಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ
May 10, 2025
7:05 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 09-05-2025 | ಮೇ14 ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ
May 10, 2025
12:20 PM
by: ಸಾಯಿಶೇಖರ್ ಕರಿಕಳ
ಜೂನ್‌ನಿಂದ ಈ 6 ರಾಶಿಯವರ ಅದೃಷ್ಟ ಖುಲಾಯಿಸಲಿದೆ… ಕೋಟ್ಯಾಧಿಪತಿಗಳಾಗುವ ಯೋಗ!
May 10, 2025
8:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group