#Success | ಕೃಷಿ ವಿಜ್ಞಾನಿಗಳಿಂದ ಮೆಚ್ಚುಗೆ ಪಡೆದ ರೈತ | ಬದನೆ ಕಾಂಡದಲ್ಲಿ ಟೊಮೆಟೋ ಬೆಳೆದ ಕೃಷಿಕ |

July 20, 2023
8:55 PM
ಕಸಿ ಮಾಡಿದ ಬದನೇಕಾಯಿ ಕಾಂಡದಲ್ಲಿ ಟೊಮೆಟೊ ಬೆಳೆದಿರುವ ಕೋಲಾರದ ರೈತ ಗಮನ ಸೆಳೆದಿದ್ದಾರೆ.

ಅನಾದಿಕಾಲದಿಂದ ಕೃಷಿಯೇ ರೈತರ ಬದುಕು. ಕಾಲಕ್ಕೆ ತಕ್ಕಂತೆ ಒಂದಷ್ಟು ಪ್ರಯೋಗಗಳನ್ನು ಮಾಡುತ್ತ, ಪ್ರಕೃತಿಗೆ ಹೊಂದಿಕೊಂಡು ಕೃಷಿಯನ್ನು ಅಭಿವೃದ್ಧಿ ಮಾಡುತ್ತಾ ಬಂದಿದ್ದಾನೆ. ಒಂದೇ ರೀತಿಗೆ ಜೋತು ಬಿದ್ದು ಕೃಷಿ ಮಾಡಿದ್ರೆ ಈಗಿನ ಕಾಲದಲ್ಲಿ ಫಲ ಸಿಗುವುದು ಬಹಳ ವಿರಳ. ವಿಶೇಷ, ವಿಶಿಷ್ಟ ಪ್ರಯೋಗಗಳನ್ನು ಮಾಡಿದ್ರೆ ರೈತ ಹೊಸತನದೊಂದಿಗೆ ತನಗೆ ಕೃಷಿಯಲ್ಲಿ ಲಾಭವನ್ನು ಮಾಡಿಕೊಳ್ಳಬಹುದು.

Advertisement
Advertisement

ಇಲ್ಲೊಬ್ಬ ರೈತ ಆಳವಡಿಸಿದ ಪ್ರಯೋಗಕ್ಕೆ ಕೃಷಿ ವಿಜ್ಞಾನಿಗಳೇ ಶಾಕ್ ಆಗಿ ಬೇರೆಯವರು ಅದನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ.  ಹಾಗೆ ಈ ರೈತ ಬೆಳೆದ ರೀತಿಯನ್ನು ನಮ್ಮ ಕರಾವಳಿಯಲ್ಲೂ ಅಳವಡಿಸಿಕೊಂಡು ಟೊಮೆಟೋ ಬೆಳೆಯಬಹುದೇನೋ ಅನ್ನಿಸುತ್ತದೆ.

Advertisement

ಬೇರೆ ರೈತರೂ ಇದನ್ನು ಅಳಡಿಸಿಕೊಂಡರೆ ಉತ್ತಮ ಆದಾಯವೂ ಬರುತ್ತದೆ ಎಂಬುದು ಕೃಷಿ ವಿಜ್ಞಾನಿಗಳ ಸಲಹೆಯಾಗಿದೆ. ವಿಭಿನ್ನ, ವಿಶೇಷವಾಗಿ ತರಕಾರಿ ಬೆಳೆಯುವಲ್ಲಿ ಪರಿಣಿತಿ ಹೊಂದಿರುವ ಕೋಲಾರ ರೈತರು ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರ್ತಾರೆ. ಹೀಗೆ ಕಸಿ ಮಾಡಿದ ಬದನೇಕಾಯಿ ಕಾಂಡದಲ್ಲಿ ಟೊಮೆಟೊ ಬೆಳೆದಿರುವ ಕೋಲಾರದ ರೈತನೀಗ ಲಕ್ಷ ಲಕ್ಷ ಲಾಭ ಗಳಿಸ್ತಿದ್ದಾರೆ.

ಕೋಲಾರ ಜಿಲ್ಲೆಯು ಅತಿ ಹೆಚ್ಚು ತರಕಾರಿಗಳನ್ನು ಬೆಳೆಯುವುದಕ್ಕೆ ಹೆಸರುವಾಸಿಯಾಗಿದೆ. ಹಾಗೆಯೇ ಕೋಲಾರ ಮಾರುಕಟ್ಟೆ ಏಷ್ಯಾದ 2ನೇ ಅತಿ ದೊಡ್ಡ ಮಾರುಕಟ್ಟೆಯೂ ಇದೆ, ಶ್ರಮಜೀವಿಗಳಂತೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿರುತ್ತಾರೆ ಇಲ್ಲಿಯ ರೈತರು. ಇದಕ್ಕೆ ಸಾಕ್ಷಿಯೆಂಬಂತೆ ಕೋಲಾರದ ರೈತರೊಬ್ಬರು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬದನೆಕಾಯಿ ಕಾಂಡದಲ್ಲಿ ಟೊಮೆಟೊ ಬೆಳೆದು ಯಶಸ್ವಿಯಾಗಿದ್ದಾರೆ.

Advertisement

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕೊತ್ತಪೇಟೆ ಗ್ರಾಮದ ರೈತ ನಾರಾಯಣಸ್ವಾಮಿ ಎಂಬುವರು ಬದನೆಕಾಯಿಯ ಕಾಂಡದಲ್ಲಿ ಟೊಮೆಟೊ ಬೆಳೆದು ಭರ್ಜರಿ ಇಳುವರಿ ಪಡೆದಿದ್ದಾರೆ. ಈಗ ಮಾರುಕಟ್ಟೆಯಲ್ಲಿಯೂ ಟೊಮೆಟೊಗೆ ಡಿಮ್ಯಾಂಡ್ ಹೆಚ್ಚಾಗಿದ್ದು ಉತ್ತಮ ಆದಾಯವನ್ನೂ ಗಳಿಸಿದ್ದಾರೆ.  ಕಪ್ಪು ಬದನೆಕಾಯಿ ಗಿಡದ ಕಾಂಡದಲ್ಲಿ ಸಾಹೋ ಜಾತಿಯ ಟೊಮೆಟೊವನ್ನು ಬೆಳೆಯಲಾಗಿದೆ. ಆಂಧ್ರದ ಕುಪ್ಪಂನ ಕೃಷಿ ಪರಿಣಿತರು ಕೇಂದ್ರದಿಂದ ಈ ತಳಿಯನ್ನು ತಂದಿದ್ದು ಒಂದು ಗಿಡಕ್ಕೆ ಅಲ್ಲಿಯೇ 6.25 ರೂಪಾಯಿ ಹಣ ಖರ್ಚಾಗಿದೆ. ಸಾರಿಗೆ ವೆಚ್ಚವೆಲ್ಲಾ ಸೇರಿ ತೋಟಕ್ಕೆ ಬರುವಷ್ಟರಲ್ಲಿ ಒಂದು ಗಿಡಕ್ಕೆ 8 ರೂಪಾಯಿ ಖರ್ಚು ತಗುಲಿದೆ. ಇದುವರೆಗೂ 15 ಲಕ್ಷ ರೂಪಾಯಿ ಆದಾಯ ಬಂದಿದೆ. ಇನ್ನೂ ನಾಲ್ಕು ಕೊಯ್ಲು ಸಿಗಲಿದ್ದು ಈಗ ಮಾರುಕಟ್ಟೆಯಲ್ಲಿ ಬೆಲೆಯೂ ಹೆಚ್ಚಿರುವ ಕಾರಣ ಅಂದಾಜು 3 ಲಕ್ಷ ರೂಪಾಯಿ ಸಿಗುತ್ತದೆ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.

Advertisement

ಬದನೆ ನಮ್ಮ ಕರಾವಳಿಯಲ್ಲಿ ಸಾಮಾನ್ಯವಾಗಿ ಹೆಚ್ಚಿನ ಕಡೆ ಬೆಳೆಯುತ್ತದೆ. ಆದರೆ ಟೊಮೆಟೋ ನಮ್ಮ ೂರಿನಲ್ಲಿ ಒಗ್ಗುವುದಿಲ್ಲ. ಈ ರೈತ ಮಾಡಿದಂತೆ ಬದನೆ ಗಿಡಕ್ಕೆ ಅಥವಾ ನಮ್ಮ ಕುದನೆ ಗಿಡಕ್ಕೆ ಟೊಮೆಟೋ ಕಸಿ ಮಾಡಿದ್ರೆ ನಮ್ಮ ಕರಾವಳಿಯಲ್ಲೂ ವ್ಯಾಪಾರಕ್ಕೆ ಅಲ್ಲದಿದ್ರು ನಮ್ಮ ಮನೆ ಬಳಕೆಗಾದ್ರು ಬೆಳೆಯಬಹುದೇನೋ.

(ಮೂಲ : ಅಂತರ್ಜಾಲ)

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |
May 7, 2024
3:13 PM
by: ದ ರೂರಲ್ ಮಿರರ್.ಕಾಂ
ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !
May 7, 2024
11:33 AM
by: ಪ್ರಬಂಧ ಅಂಬುತೀರ್ಥ
Karnataka Weather | 07-05-2024 | ಮಳೆಯ ಸೂಚನೆ ಬಂದೇ ಬಿಟ್ಟಿದೆ |ಹಲವು ಕಡೆ ಗುಡುಗು-ಸಿಡಿಲು ಇರಬಹುದು, ಇರಲಿ ಎಚ್ಚರಿಕೆ |
May 7, 2024
11:08 AM
by: ಸಾಯಿಶೇಖರ್ ಕರಿಕಳ
ಆಹಾರ ಬದಲಾವಣೆಯಿಂದ ವಾತಾವರಣದ ತಾಪಮಾನ ಏರಿಕೆಯ ಸಮಸ್ಯೆಗೂ ಪರಿಹಾರ…! | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಖಾದರ್ ಪ್ರತಿಪಾದನೆ |
May 7, 2024
7:00 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror