ಈಗಿನ ಕಾಲದಲ್ಲಿ ಪೇಟೆಗೆ ಹೊಂದಿಕೊಂಡಂತೆ ಜಾಗ ಇದ್ರೆ ಸಾಕು, ಒಳ್ಳೆ ಬೆಲೆ ಸಿಕ್ರೆ ಅದನ್ನು ಮಾರಿ ಆಧುನಿಕರಣಕ್ಕೆ ತಮ್ಮ ಕೊಡುಗೆ ನೀಡುತ್ತಾರೆ. ಯಾರಿಗೂ ಕೃಷಿ ಭೂಮಿ ಬೇಡ. ಅದನ್ನು ಇಟ್ಟುಕೊಂಡು ಕೃಷಿ ಮಾಡೋದು ಯಾರು..? ಆಳು ಕಾಳು ಅಂತ ಸುಮ್ನೆ ದುಡ್ಡು ದಂಡ ಅಂತ ಯೋಚನೆ ಮಾಡೋರೆ ಹೆಚ್ಚು. ಆದರೆ ಇಲ್ಲೊಬ್ಬ ಕೃಷಿಕ (Farmer) ಇದಕ್ಕೆ ಅಪವಾದ ಎನ್ನುವಂತೆ ಪೇಟೆಯ ಮಧ್ಯದಲ್ಲೇ ಇದ್ದುಕೊಂಡು ತಮ್ಮ ಕೃಷಿ ಭೂಮಿಯಲ್ಲಿ ಭತ್ತ(Paddy) ಬೆಳೆದಿದ್ದಾರೆ.
ಸುತ್ತ ಹತ್ತಾರು ಕಟ್ಟಡ, ಆಕಾಶದೆತ್ತರಕ್ಕೆ ತಲೆ ಎತ್ತಿ ನಿಂತ ಅಪಾರ್ಟ್ಮೆಂಟ್, ಅಲ್ಲೇ ಪಕ್ಕ ಪ್ರತಿದಿನ ಸಾವಿರಾರು ವಾಹನಗಳು ಹಾದುಹೋಗುವ ಪ್ರಮುಖ ರಸ್ತೆ, ಆದರೆ ಈ ಎಲ್ಲವುಗಳ ಮಧ್ಯೆ ಎದ್ದು ಕಾಣೋದು, ಕಣ್ಣು ಕುಕ್ಕೋದು ಮಾತ್ರ ಈ ಹಸಿರು ಭತ್ತದ ಗದ್ದೆ.
ಶರವೇಗದಲ್ಲಿ ಬೆಳೆಯುತ್ತಿರುವ ಮಂಗಳೂರು (Mangalore) ನಗರದಲ್ಲಿ ಎಲ್ಲವೂ ಆಧುನೀಕರಣಗೊಳ್ಳುತ್ತಿದೆ..ಹೊಸ ಕಟ್ಟಡ,ಹೊಸ ಮನೆಗಳು ಮಂಗಳೂರು ನಗರದ ಖಾಲಿಜಾಗವನ್ನು ಭರ್ತಿ ಮಾಡುತ್ತಿದೆ.ನಗರವಾಸಿಗಳ ಸಂಖ್ಯೆಯೂ ದುಪ್ಪಟ್ಟಾಗುತ್ತಿದೆ.ಇದರ ನಡುವೆ ಮಂಗಳೂರು ನಗರದ ಹೃದಯಭಾಗದಲ್ಲಿ ಭತ್ತದ ಕೃಷಿ ನಳನಳಿಸುತ್ತಿದೆ.ಮಾಜಿ ಸರ್ಕಾರಿ ಅಧಿಕಾರಿಯೋರ್ವರು ನಗರದ ನಡುವಲ್ಲೇ ಇರುವ ಜಾಗವನ್ನು ಮಾರದೇ ಗದ್ದೆಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ.
ಕಾಂಕ್ರೀಟ್ ರಸ್ತೆಯ ಪಕ್ಕದಲ್ಲೇ ಹಸಿಹಸಿರಾಗಿರುವ ಭತ್ತದ ಗದ್ದೆ ಇದೆ. ನಗರದ ನಡುವೆ ಕಣ್ಣಿಗೆ ಕಾಣುವಷ್ಟು ದೂರ ಬೆಳೆದುನಿಂತಿರುವ ಪೈರು. ಮಂಗಳೂರು ನಗರದ ಚಿಲಿಂಬಿಯ ಆನತಿ ದೂರದಲ್ಲಿದೆ ಈ ಭೂಮಿ.ಪ್ರಾನ್ಸಿಸ್ ಸಲ್ಡಾನ ಎಂಬುವವರು ತನ್ನ ತಂದೆಯ ಕಾಲದಿಂದಲೂ ಮಾಡುತ್ತಿರುವ ಭತ್ತದ ಕೃಷಿಯನ್ನೂ ಇಂದಿಗೂ ಮುಂದುವರಿಸಿದ್ದಾರೆ.ತನ್ನ ಒಂದೂವರೆ ಎಕರೆ ಗದ್ದೆ ಪ್ರದೇಶದಲ್ಲಿ ಎಂಟು ಕ್ವಿಂಟಾಲ್ ಭತ್ತದ ಫಸಲು ಪಡೆಯುತ್ತಿದ್ದಾರೆ..
ಫ್ರಾನ್ಸಿಸ್ ಸಲ್ಡಾನ ಅವರು ಕೆಜಿಐಡಿ ಯ ನಿವೃತ್ತ ಅಧಿಕಾರಿ.ತನ್ನ ತಂದೆಯಿಂದ ಬಂದಿರುವ ಒಂದೂವರೆ ಎಕರೆ ಗದ್ದೆ ಪ್ರದೇಶದಲ್ಲಿ ಭತ್ತಕೃಷಿಯನ್ನು ಇಂದಿಗೂ ಮುಂದುವರಿಸಿದ್ದಾರೆ.ಸರ್ಕಾರಿ ಹುದ್ದೆಯಲ್ಲಿರುವಾಗಲೂ ಗದ್ದೆಯಲ್ಲಿ ಉಳುಮೆ ಮಾಡಿ ಕಚೇರಿಗೆ ತೆರಳುತ್ತಿದ್ದ ಫ್ರಾನ್ಸಿಸ್,ನಿವೃತ್ತಿ ನಂತರವೂ ಗದ್ದೆ ಮೇಲಿನ ಪ್ರೀತಿಯನ್ನು ಬಿಟ್ಟಿಲ್ಲ.ಒಂದೂವರೆ ಎಕರೆ ಗದ್ದೆ ಪ್ರದೇಶದಲ್ಲಿ ಸಹ್ಯಾದ್ರಿ ಕೆಂಪು ಮುಕ್ತಿ ಎಂಬ ಹೊಸ ಭತ್ತದ ತಳಿಯನ್ನು ನಾಟಿ ಮಾಡಿದ್ದಾರೆ.ತನ್ನ ಪತ್ನಿ ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಇಬ್ಬರು ಮಕ್ಕಳು ವಕೀಲರಾದರೂ ಸಲ್ಡಾನ ಅವರ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ..
ನಗರದ ನಡುವಲ್ಲೇ ಭತ್ತದ ಕೃಷಿ ಮಾಡುತ್ತಿರುವ ನಗರದ ಏಕೈಕ ಕೃಷಿಕ ಸಲ್ಡಾನ,ತನ್ನ ಕೃಷಿ ಭೂಮಿಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ.ತನ್ನ ಎಂಟು ಮಂದಿ ಒಡಹುಟ್ಟಿದವದ ಪೈಕಿ ಬಹುತೇಕರು ಭೂಮಿಯನ್ನು ಮಾರಾಟ ಮಾಡಿದರೆ,ಫ್ರಾನ್ಸಿಸ್ ಸಲ್ಡಾನ ಅವರು ಭೂಮಿಯನ್ನು ಮಾರಾಟ ಮಾಡಿಲ್ಲ. ಹಣ ಕೇವಲ ಉಪಯೋಗಕ್ಕೆ ಮಾತ್ರ.ಆದರೆ ಕೃಷಿ ಮನಸ್ಸಿಗೆ ನೆಮ್ಮದಿ ಯನ್ನು ನೀಡುತ್ತದೆ.ಗದ್ದೆಯಲ್ಲಿ ಕೆಲಸ ಮಾಡಿದರೆ ದೇಹಕ್ಕೂ ಮನಸ್ಸಿಗೂ ತುಂಬಾ ನೆಮ್ಮದಿ ಸಿಗುತ್ತದೆ.ಮಂಗಳೂರಿನಲ್ಲಿ ಭತ್ತದ ಕೃಷಿಗೆ ಕಾರ್ಮಿಕರು ಸಿಗುತ್ತಿಲ್ಲ,ಬಜಪೆ,ಪೊಳಲಿ,ಹಳೆಯಂಗಡಿ ಭಾಗದಿಂದ ಕೃಷಿ ಕೆಲಸಗಾರರನ್ನು ತಂದು ಭತ್ತದ ಕೃಷಿ ಕೆಲಸ ಮಾಡಿಸುತ್ತಿದ್ದೇವೆ. ಟ್ರಿಲ್ಲರ್, ಟ್ರ್ಯಾಕ್ಟರ್ ಗಳನ್ನು ಬಜ್ಪೆಯಿಂದ ತಂದು ಉಳುಮೆ ಮಾಡುತ್ತೇವೆ. ಕೆಲಸದಾಳುಗಳು ಸಿಗದೇ ಇದ್ದಾಗ ಮನೆಯವರೇ ಗದ್ದೆಯಲ್ಲಿ ಭತ್ತದ ಬೆಳೆಯ ಕೆಲಸ ಮಾಡಿದ್ದೇವೆ ಎಂದು ಪ್ರಾನ್ಸಿಸ್ ಸಲ್ಡಾನ ಹೇಳಿದ್ದಾರೆ..
ನವೆಂಬರ್ ತಿಂಗಳಿಗೆ ಬೆಳೆ ಬರುವಂತೆ ಭತ್ತದ ಬೆಳೆ ಮಾಡುವ ಪ್ರಾನ್ಸಿಸ್ ನೀರಿಗಾಗಿ ತನ್ನ ಜಮೀನನಲ್ಲೇ ಇರುವ ಬಾವಿಯನ್ನು ಆಶ್ರಯಿಸಿದ್ದಾರೆ.ನೀರು ಕಡಿಮೆಯಾದಾಗ ಸಹೋದರರ ನೆರವನ್ನೂ ಪಡೆದಿದ್ದಾರೆ.ತನ್ನ ಗದ್ಡಯಲ್ಲಾದ ಭತ್ತದ ಅಕ್ಕಿಯನ್ನು ತಾವು ಬಳಕೆ ಮಾಡೋದರ ಜೊತೆಗೆ ಸಂಬಂಧಿಕರಿಗೆ,ಕೇಳಿದವರಿಗೆ ನೀಡುತ್ತಾರೆ.ಬೈ ಹುಲ್ಲನ್ನು ಮಾರಾಟ ಮಾಡುತ್ತಾರೆ.ಭತ್ತದ ಜೊತೆಗೆ ತೆಂಗು,ಬಾಳೆ ಜೊತೆಗೆ ಹಣ್ಣಿನ ಗಿಡವನ್ನೂ ತನ್ನ ಜಮೀನಿನಲ್ಲಿ ನೆಟ್ಟಿದ್ದಾರೆ.ಭತ್ತದ ಕೃಷಿ ಮುಗಿದ ಬಳಿಕ ಗದ್ದೆಯಲ್ಲಿ ತರಕಾರಿ ಬೆಳೆಯುವ ಅವರು ವಾಣಿಜ್ಯ ಬೆಳೆಗಳೊಂದಿಗೆ ಕೃಷಿ ಮಾಡಿದರೆ ಲಾಭ ಸಾಧ್ಯ ಅನ್ನೋದನ್ನು ನಿರೂಪಿಸಿದ್ದಾರೆ.
ತನ್ನ ಸುತ್ತಮುತ್ತಾ ಇದ್ದ ಗದ್ದೆಗಳಲ್ಲಿ ಫ್ಲ್ಯಾಟ್, ಅಪಾರ್ಟ್ಮೆಂಟ್ ಗಳು ತಲೆ ಎತ್ತಿದರೂ ಸಲ್ಡಾನ ಮಾತ್ರ ಕೃಷಿ ಭೂಮಿಯನ್ನು ಮಾರದೆ ಉಳಿಸಿಕೊಂಡಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…