ಕರ್ನಾಟಕದಲ್ಲೊಂದು(Karnataka) ಮೊದಲನೆಯ ದೃಢ ಹೆಜ್ಜೆ. ಚಿಕ್ಕನಾಯಕನಹಳ್ಳಿಯ 27 ಪಂಚಾಯತಿಯಿಂದಲೂ(panchayat) ಅಂಗೀಕಾರಗೊಂಡಿದೆ. ಸರ್ವಾನುಮತದಿಂದ ಸಹಜ ಕೃಷಿಯತ್ತ(natural farming) ಅರಿವಿನಿಂದ ಹೆಜ್ಜೆ ಇಡುತ್ತಿದೆ.. ಇಂದೊಂದು ನಾ ಕಂಡ ಮೊದಲ ಜನಚಳುವಳಿ.
ಅಷ್ಟೂ ಪಿ ಡಿ ಓ(PDO), ಗ್ರಾಮ ಪಂಚಾಯಿತಿ ಸದಸ್ಯರು ಹಾಗು ಅಧ್ಯಕ್ಷರಿಂದಲೂ ಅಂಗೀಕಾರಗೊಂಡು, ಮೊದಲನೆಯ ಪೂರ್ವ ಭಾವಿ ಸಭೆ ಕೂಡ ಸಂಪೂರ್ಣಗೊಂಡಿತು.. ನಮ್ಮ ಆಶ್ರಮವೂ ಈ ಜನ ಚಳುವಳಿಯಲ್ಲಿ ಪಾಲ್ಗೊಳ್ಳಬೇಕು ಎಂದು ಕೇಳಲು ; ಖುಷಿಯಿಂದ, ಸಂತೋಷದಿಂದ ಒಪ್ಪಿಕೊಂಡಿದ್ದೇವೆ !! ಇದಕ್ಕಿಂತ ಭಾಗ್ಯ ಇನ್ನೇನಿದೆ ಹೇಳಿ ?
ನೆನ್ನೆ ಸತತ ಎರಡು ಗಂಟೆ ಇದರ ಸೂಕ್ಷ್ಮತೆಯನ್ನು ಮಂಡಿಸಲಾಯಿತು ಅಮೇರಿಕ ಈಗ 29 ಟ್ರಿಲಿಯನ್ ಡಾಲರ್ ನತ್ತ ಅತೀ ವೇಗವಾಗಿ ಓಡಿತ್ತಿರುವ ದೇಶ. ಈಗ ಅದರ ಪಾಡೇನು ? ಆಹಾರ ಹೇಗಿದೆ ? ರೋಗ ರುಜಿನಗಳು ಹೇಗೆ ಇಡೀ ಅಮೆರಿಕವನ್ನು ಆವರಿಸಿದೆ ? ಮಕ್ಕಳ್ಳನ್ನೂ ಸೇರಿ ಎಂತೆಂಥ ತೊಂದರೆಗಗಳಿಗೆ ಅವರು ತುತ್ತಾಗುತ್ತಿದ್ದಾರೆ ? ಅವರದ್ದು ಎಂಥ ಕೃಷಿ ಪದ್ಧತಿ ? ಆ ಕೃಷಿ ಪದ್ದತಿಯಿಂದ ಹೇಗೆ ಮಣ್ಣು ಹಾಳಾಗಿ ಅಲ್ಲಿನ ಖನಿಜಗಳೆಲ್ಲ ನದಿ ಪಾಲಾಗುತ್ತಿದೆ ? ಮುಂದೆ ಅವರ ಸ್ಥಿತಿ ಎಷ್ಟು ಗಂಭೀರವಾಗಬಹದು ?
ಈಗ ನಮ್ಮ ದೇಶದ ಸ್ಥಿತಿ-ಗತಿಯೇನು ? ನಾವು ಕೂಡ ಜಿ ಡಿ ಪಿ ಎಂಬ ಮರೀಚಿಕೆ ಹಿಡಿದರೆ ನಮ್ಮ ಸ್ಥಿತಿ ಹೇಗೆ ಅಮೆರಿಕಾಗಿನ್ನ ಶೋಚನೀಯವಾಗಿಹುದು? ಹವಾಮಾನ ಬದಲಾವಣೆ ಹೇಗೆ ನಮ್ಮ ರೈತರನ್ನ ಕುಗ್ಗಿಸುತ್ತದೆ – ರಕ್ತ ಮಾಂಸವನ್ನು ಕ್ಷೀಣಿಸುತ್ತದೆ ಇತ್ಯಾದಿ ಸೂಕ್ಷ್ಮತೆಗಳನ್ನು ಇಂಚಿಂಚಾಗಿ ಒಳಹೊಕ್ಕಿ ಸಮಷ್ಠಿಯ ಆಯಾಮದಲ್ಲಿ ಚರ್ಚಿಸಲಾಯಿತು.
ನಾ ಮುಗಿಸಿದ ನಂತರ ಕೆ ವಿ ಕೆ ವಿಜ್ಞಾನಿಗಳು, ಕೃಷಿ, ತೋಟಗಾರಿಕೆ ಹಾಗು ಹೈನುಗಾರಿಕೆ ಇಲಾಖೆಯವರು ತಲಾ ಹತ್ತು ನಿಮಿಷ ಸ್ಥೂಲವಾಗಿ ಮತನಾಡಿ ಮುಗಿಸಿದರು. ಬಂದ ಎಲ್ಲರೂ ಇದರ ಸೂಕ್ಷ್ಮತೆಯನ್ನು ಅರಿತು ಮುಂದಿನ ಹೆಜ್ಜೆ ಇಡಲು ಸಜ್ಜಾದರು. ಎಲ್ಲರೂ ಸರ್ವಾನುಮತದಿಂದ, ಪ್ರೀತಿ ವಿಶ್ವಾಸದಿಂದ ಈ ಚಳುವಳಿಯನ್ನು ಇನ್ನು ನಾಲ್ಕು ವರ್ಷದಲ್ಲಿ ಸಾಧಿಸಿಯೇ ತೀರುತ್ತೇವೆಂದು ಪಣತೊಟ್ಟಿದ್ದು ನನಗೆ ಅತ್ಯಂತ ಸಂತೋಷದಾಯಕ ಸಂಗತಿ..
ಅಲ್ಲಿನ ಪಿಡಿಓ, ಕೋಲಾರಿನವರು – ಅಲ್ಲಿನ ಪರಿಸ್ಥಿತಿಯನ್ನು ಸ್ತೂಲವಾಗಿ, ನೈಜವಾಗಿ ಕಂಡವರು. ಅವರು ಈ ಗಂಭೀರತೆಯನ್ನು ಅರಿತು ಸಭೆಯನ್ನು ಅಚ್ಚುಕಟ್ಟಾಗಿ ನಡೆಸಿದರು. ಪಿಡಿಓ , ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಹಾಗು ಇಓರವರೆಲ್ಲರೂ ನೆನ್ನೆ ಕೂಡಿ ಅಂಗೀಕರಿಸಿದರು.
ಅದು ಹೀಗಿದೆ: ದಿನಾಂಕ13.03.2024 ರಂದು ಚಿಕ್ಕನಾಯಕನಹಳ್ಳಿ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕಿನ ಗ್ರಾಮಪಂಚಾಯತ್ ಗಳ ಅಧ್ಯಕ್ಷರು ˌಉಪಾಧ್ಯಕ್ಷರು ˌಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ˌಸಹಭಾಗಿ ಇಲಾಖೆಗಳ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರುˌ ಡಾ ಮಂಜುನಾಥ್ , ಗಾಂಧಿ ಸಹಜ ಬೇಸಾಯ ಶಾಲೆ ತುಮಕೂರು ಇವರೆಲ್ಲರ ಉಪಸ್ಥಿತಿಯಲ್ಲಿ ತಾಲೂಕಿನ ಎಲ್ಲಾ 27 ಗ್ರಾಮ ಪಂಚಾಯಿತಿಗಳ ಗ್ರಾಮ ಸಭೆಗಳಲ್ಲಿ ನಿರ್ಣಯವಾಗಿ ಆಯ್ಕೆಯಾಗಿರುವ ಪ್ರತಿ ಹಳ್ಳಿಗಳ ತಲಾ 20 ಜನ ರೈತರು ಸಹಜ ಕೃಷಿ ಕೈಗೊಳ್ಳಲು ಅನುಷ್ಠಾನದ ಪೂರ್ವಭಾವಿ ಸಭೆ ನಿರ್ಣಯಗಳು ಕೆಳಕಂಡಂತಿರುತ್ತವೆ.
1)ಚಿಕ್ಕನಾಯಕನಹಳ್ಳಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಪ್ರತಿ ಗ್ರಾಮದಲ್ಲೂ ಈಗಾಗಲೇ ಆಯ್ಕೆಯಾಗಿರುವ ತಲಾ 20 ಜನ ರೈತರು ನಾಲ್ಕು ವರ್ಷ ಸಹಜ ಕೃಷಿಯನ್ನು ಸರ್ಕಾರದ ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಸಹಾಯದೊಂದಿಗೆ ಲೈನ್ ಡಿಪಾರ್ಟಮೆಂಟ್ ಗಳು ˌಕೆವಿಕೆ ಕೊನೇಹಳ್ಳಿ ಮತ್ತು ಹಿರೇಹಳ್ಳಿ ಹಾಗೂ ಗಾಂಧಿ ಸಹಜ ಬೇಸಾಯ ಶಾಲೆ ತುಮಕೂರು ಇವರ ಸಹಯೋಗದಿಂದ ಸಮಗ್ರವಾಗಿ ನೈಸರ್ಗಿಕವಾಗಿ ಕೃಷಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ನಿರ್ಣಯಿಸಲಾಯ್ತು.
2) ನೈಸರ್ಗಿಕ ಕೃಷಿಯನ್ನು ಅನುಷ್ಠಾನಗೊಳಿಸಲು ತಾಲ್ಲೂಕಿನಲ್ಲಿ ಈಗಾಗಲೇ ಈ ಪದ್ಧತಿಯನ್ನು ಅನುಸರಿಸುತ್ತಿರುವ ರೈತರೂ ಸೇರಿದಂತೆ ಎಲ್ಲಾ ಲೈನ್ ಡಿಪಾರ್ಟ್ ಮೆಂಟ್ ಗಳು ˌಪಿಡಿಓ ಗಳುˌ ಗ್ರಾಮಪಂಚಾಯ್ತಿ ಅಧ್ಯಕ್ಷರುˌಶಾಸಕರುˌ ಕೆವಿಕೆ ,ಗಾಂಧೀಸಹಜಬೇಸಾಯಶಾಲೆ ಒಳಗೊಂಡ ತಾಲ್ಲೂಕು ಸಮಿತಿಯನ್ನು ರಚಿಸಿ ಪ್ರತೀ ತಿಂಗಳು ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲು ತೀರ್ಮಾನಿಸಲಾಯ್ತು.
3)ಈಗಾಗಲೇ ಗುರುತಿಸಿರುವ ರೈತರು ತಕ್ಷಣದಿಂದಲೇ ನೈಸರ್ಗಿಕ ಕೃಷಿಯನ್ನು ಆರಂಭಿಸಲು ಮೊದಲ ಚಟುವಟಿಕೆಯಾದ ನೈಸರ್ಗಿಕವಾಗಿ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆಯನ್ನು ಎಲ್ಲಾ ಗ್ರಾಮಪಂಚಾಯ್ತಿಗಳಲ್ಲಿ ಕನಿಷ್ಠ ಒಬ್ಬ ರೈತರ ಜಮೀನಿನಲ್ಲಿ ಪೂರ್ಣಗೊಳಿಸಿ ಲಭ್ಯವಿರುವ ಸರ್ಕಾರದ ಅನುದಾನವನ್ನು ಮುಂದಿನ ಮುಂಗಾರು ಮಳೆ ಆರಂಭವಾಗುವುದರೊಳಗೆ ಗೊಬ್ಬರ ತಯಾರಿಕೆಯನ್ನು ಪೂರ್ಣಗೊಳಿಸುವ ರೈತರಿಗೆ ಅನುದಾನ ಬಿಡುಗಡೆ ಗೊಳಿಸಲು ಸಂಭಂಧಿಸಿದ ಪ್ರಕ್ರಿಯೆಗಳನ್ನು ಎಲ್ಲಾ ಗ್ರಾಮಪಂಚಾಯ್ತಿಗಳ ಪಿಡಿಓ ಗಳು ಇಂದಿನಿಂದಲೇ ಕಾರ್ಯೋನ್ಮುಖರಾಗಲು ಸನ್ನದ್ಧರಾಗಲು ತೀರ್ಮಾನಿಸಲಾಯ್ತು.
4)ಮುಂದಿನ 4ವರ್ಷಗಳವರೆಗೆ ನೈಸರ್ಗಿಕ ಕೃಷಿ ಅನುಷ್ಠಾನದ ವಿವಿಧ ಹಂತಗಳಲ್ಲಿ ಕೈಗೊಳ್ಳುವ ಚಟುವಟಿಕೆಗಳಿಗೆ ಈಗಾಗಲೇ ಲಭ್ಯವಿರುವ ನರೇಗಾ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಲಭ್ಯವಿರುವ ಚಟುವಟಿಕೆಗಳನ್ನು ಪಟ್ಟಿಮಾಡಿ ಅವುಗಳ ಅನುಮೋದನೆಗಾಗಿ ಸರ್ಕಾರಕ್ಕೆ ತಕ್ಷಣವೇ ಸಲ್ಲಿಸಲು ಅನುಕೂಲವಾಗುವಂತೆ ಮುಂದಿನ 15ದಿನದೊಳಗಾಗಿ ಇಓ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಲೈನ್ ಡಿಪಾರ್ಟ್ ಮೆಂಟ್ ಮುಖ್ಯಸ್ಥರು ˌಕೆವಿಕೆ ಮುಖ್ಯಸ್ಥರು ˌಡಾ.ಮಂಜುನಾಥ್ ಗಾಂಧೀಸಹಜಬೇಸಾಯ ಶಾಲೆ ಇವರನ್ನೊಳಗೊಂಡಂತೆ ಸಭೆ ಸೇರಿ ಚರ್ಚಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ನಿರ್ಣಯಿಸಲಾಯ್ತು. ಹೆಚ್ಚಿನ ವಿಷಯಗಳನ್ನು ಮುಂದಿನ ಪ್ರತೀ ತಿಂಗಳ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯ್ತು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…