ಸಮಾಜದ ಒಳಿತಿಗಾಗಿ ಬದುಕುತ್ತಿರುವ ಶ್ರೇಷ್ಠ ಸಂತ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ | ಕೃಷಿ, ಗ್ರಾಮೀಣ ಅಭಿವೃದ್ಧಿಗೆ ಮಹತ್ವದ ಹೆಜ್ಜೆ |

November 3, 2023
1:43 PM
ನಾಡಿನ ಶ್ರೇಷ್ಟ ಸಂತರ ಸಾಲಿನಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕೃಷಿ, ಗ್ರಾಮೀಣ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

ನಮ್ಮ ನಾಡಿನ ಶ್ರೇಷ್ಠ ಸಂತ  ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಕಳೆದ 25 ವರ್ಷಗಳಿಂದ ಮಾಡುತ್ತಿರುವ ಅನೇಕ ಸೇವೆ ಮಾಡುತ್ತಿದ್ದಾರೆ.  ಕೃಷಿ, ಗೋವು ಹಾಗೂ ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಕಳೆದ ಹಲವು ವರ್ಷಗಳಿಂದ ಹೆಜ್ಜೆ ಇರಿಸಿದ್ದಾರೆ.ಇಷ್ಟೇ ಅಲ್ಲ, ಇನ್ನೂ ಹಲವು ಕಾರ್ಯಗಳಲ್ಲಿ ಸ್ವಾಮೀಜಿ ಮುಂದಿದ್ದಾರೆ.

Advertisement
Advertisement

ಧರ್ಮದ ಜಾಗೃತಿಯ ಜೊತೆಗೆ 25000 ಕ್ಕೂ ಅಧಿಕ ಜನರನ್ನು ಸನಾತನ ಧರ್ಮಕ್ಕೆ ಮರಳಿ ಕರೆತಂದಿದ್ದಾರೆ ಅಲ್ಲದೆ ಪ್ರತಿವರ್ಷ 500 ಕ್ಕೂ ಅಧಿಕ ಕುಟುಂಬಗಳನ್ನು ಮರಳಿ ಸನಾತನ ಧರ್ಮಕ್ಕೆ ಕರೆತರುತ್ತಾರೆ.  28 ಕ್ಕೂ ಅಧಿಕ ದೇಶಿಯ ತಳಿಯ ಸುಮಾರು 2000 ಗೋವುಗಳನ್ನು ಸಾಕುತ್ತಿದ್ದಾರೆ.  ಕಳೆದ 8 ವರ್ಷಗಳಿಂದ ಊಟ ವಸತಿ ಶಿಕ್ಷಣ ಮಾರಾಟಕ್ಕಲ್ಲ ಎಂಬ ಸಂಕಲ್ಪದೊಂದಿಗೆ 400 ಕ್ಕೂ ಅಧಿಕ ಮಕ್ಕಳಿಗೆ ಭಾರತೀಯ ಪರಂಪರೆಯ ಗುರುಕುಲ ದ ಶಿಕ್ಷಣ ನೀಡಿ ಭಾರತದ ಸಂಸ್ಕೃತಿ ಜ್ಞಾನ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. 600ಕ್ಕೂ ಅಧಿಕ ವಯೋವೃದ್ಧರಿಗೆ ತಾವೇ ಗೌರವಧನ ನೀಡಿ ಸಾಕಿ ಸಲಹುತ್ತಿದ್ದಾರೆ. ವಿಶ್ವದರ್ಜೆಯ ಆಯುರ್ವೇದ ಹಾಗೂ ಅಲೋಪೆತಿಕ ಆಸ್ಪತ್ರೆ ಕಟ್ಟಿಸಿ ಲಕ್ಷಾಂತರ ಬಡವರಿಗೆ ಅತ್ಯಲ್ಪ ಖರ್ಚಿನಲ್ಲಿ ಅರೋಗ್ಯ ಸೇವೆ ಕೊಡಿಸುತ್ತಿದ್ದಾರೆ.

Advertisement

1000ಕ್ಕೂ ಅಧಿಕ ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಉಚಿತ ಊಟ ವಸತಿ ಶಿಕ್ಷಣ ನೀಡುವುದಲ್ಲದೆ ಉದ್ಯೋಗವನ್ನೂ ಒದಗಿಸುತ್ತಿದ್ದಾರೆ.ಹಿಂದುಳಿದ ಗ್ರಾಮಗಳ 500 ಕ್ಕೂ ಅಧಿಕ ಶಾಲೆಗಳನ್ನು ದತ್ತು ಪಡೆದು ಅಲ್ಲಿ ಅವಶ್ಯಕ ಶಿಕ್ಷಕರನ್ನು ನೇಮಿಸಿ ಅಲ್ಲಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸುತ್ತಿದ್ದಾರೆ. ಸಮಾಜಕ್ಕೆ ಮಾರ್ಗದರ್ಶನ ನೀಡಲು ಬ್ರಹ್ಮಚಾರ್ಯ ಗುರುಕುಲವನ್ನು ನಿರ್ಮಿಸಿ 100 ಕ್ಕೂ ಅಧಿಕ ವೀರ ಸನ್ಯಾಸಿಗಳನ್ನು ಬೆಳೆಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ 15 ಲಕ್ಷ ಕ್ಕೂ ಅಧಿಕ ರೈತರಿಗೆ ಗೋ ಆಧಾರಿತ / ಸಾವಯವ / ನೈಸರ್ಗಿಕ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. 10000ಕ್ಕೂ ಅಧಿಕ ದೇಶಿಯ ಬೀಜಗಳನ್ನು ಬೆಳೆಸಿ ಭಾರತದಾದ್ಯಂತ ಹಂಚುತ್ತಿದ್ದಾರೆ. ಭಾರತದ ಮೊಟ್ಟಮೊದಲ ಸಾವಯವ ಕೃಷಿ ವಿಜ್ಞಾನ ಕೇಂದ್ರ ವನ್ನು ನಿರ್ಮಿಸಿ ಲಕ್ಷಾಂತರ ರೈತರಿಗೆ ಸಮಗ್ರ ವಿಷಮುಕ್ತ ಗೋಆಧಾರಿತ ಕೃಷಿಯ ಜ್ಞಾನ ನೀಡುತ್ತಿದ್ದಾರೆ.

Advertisement

ಗ್ರಾಮೀಣ ಅಭಿವೃದ್ಧಿಯಲ್ಲೂ ಮಾದರಿ ಕೆಲಸ ಮಾಡಿರುವ ಶ್ರೀಗಳು, ಆದರ್ಶ ಗ್ರಾಮಗಳನ್ನು ರಚನೆ ಮಾಡಿದ್ದಾರೆ.  ಕಾಡಸಿದ್ದೇಶ್ವರ ಸ್ವಾಮೀಜಿ ಮಠದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಶೇಳಕೆವಾಡಿ ಗ್ರಾಮವನ್ನು ದತ್ತು ಪಡೆದು ಅದನ್ನು ಆದರ್ಶ ಗ್ರಾಮವನ್ನಾಗಿ ರೂಪಿಸಿದ್ದಾರೆ. ಈ ಗ್ರಾಮದಲ್ಲಿ ಕಳೆದ 5 ವರ್ಷದಲ್ಲಿ ಒಂದೂ ಅಪರಾಧ ಕೃತ್ಯವಾಗಿಲ್ಲ. ಇಡೀ ಗ್ರಾಮ ‘ಬಯೋಗ್ಯಾಸ್‌’ ಸೌಲಭ್ಯ ಪಡೆದುಕೊಂಡಿದೆ. ಶೌಚಾಲಯ ಮತ್ತು ಒಳಚರಂಡಿ ವ್ಯವಸ್ಥೆ ಇದೆ. ಗಂಡು ಹೆಣ್ಣಿನ ಅನುಪಾತ ಸಮಾನವಾಗಿದೆ. ಎಲ್ಲ ಮಕ್ಕಳಿಗೆ ಶಿಕ್ಷಣ, ಸ್ವಚ್ಛತೆ ಎಲ್ಲವನ್ನೂ ಸಾಧಿಸಲಾಗಿದೆ. ‘ದೇಶದ ಎಲ್ಲ ಗ್ರಾಮಗಳೂ ಹೀಗೆಯೇ ಆಗಬೇಕು ಎನ್ನುವುದು ನಮ್ಮ ಕನಸು. ಗ್ರಾಮ ಸ್ವರಾಜ್ಯವಾದರೆ ದೇಶ ಸ್ವಾವಲಂಬಿ­ಯಾಗುತ್ತದೆ’ ಎನ್ನುತ್ತಾರೆ ಸ್ವಾಮೀಜಿ.

ಕೃಷಿ ಮಾದರಿಗಳನ್ನೂ ಮಾಡಿ ತೋರಿಸಿರುವ ಶ್ರೀಗಳು, ಕೇವಲ ಒಂದು ಎಕರೆ ಕೃಷಿ ಜಮೀನಿ­ನಲ್ಲಿ ಒಂದು ಕುಟುಂಬ ಸ್ವತಂತ್ರವಾಗಿ ಬದುಕುವ ಹಾಗೆ ಮಾಡುವುದು ಅವರ ಗುರಿ. ಅದಕ್ಕಾಗಿ ಪ್ರಾತ್ಯಕ್ಷಿಕೆಯನ್ನು ಅವರು ಇಲ್ಲಿ ಮಾಡಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಒಂದು ಕುಟುಂಬಕ್ಕೆ ಬೇಕಾಗುವ ಎಲ್ಲ ದವಸಧಾನ್ಯಗಳನ್ನೂ ಬೆಳೆಯಲು ಸಾಧ್ಯವಿದೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅಂತರ ಬೆಳೆಯ ಮೂಲಕ ಪ್ರತಿ ದಿನ ರೈತನಿಗೆ ಕನಿಷ್ಠ 400 ರೂಪಾಯಿ ಆದಾಯ ಬರುವ ಹಾಗೆ ಮಾಡಿದ್ದಾರೆ. ಎಲ್ಲಿಯೂ ರಾಸಾಯನಿಕ ಗೊಬ್ಬರವನ್ನು ಬಳಸದೆ ಕೇವಲ ಸಾವಯವ ಗೊಬ್ಬರ ಮತ್ತು ವಿಧಾನದ ಮೂಲಕವೇ ಎಲ್ಲವನ್ನೂ ಬೆಳೆದಿದ್ದಾರೆ. ‘ಕೇವಲ ಕೃಷಿ ಸಾವಯವ ಆದರೆ ಸಾಲದು. ರೈತರ ಬದುಕೂ ಸಾವಯವ ಆಗಬೇಕು. ದೇಶದ ಎಲ್ಲ ರೈತರೂ ಹೀಗೆ ಸ್ವಾವಲಂಬಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಉತ್ತಮ’ ಎನ್ನುವುದು ಅವರ ಅಭಿಪ್ರಾಯ.

Advertisement

Kadasiddeshwar Swamiji has adopted Shelakewadi village which is about 25 km away from Math and made it an ideal village. There has not been a single crime in this village in the last 5 years. The entire village has got the facility of ‘biogas’. There is toilet and drainage system. Male to female ratio is equal. Education and cleanliness for all children have been achieved. Our dream is that all the villages of the country should be like this. If the village becomes Swaraj, the country will become self-sufficient.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಲಸಿನ ಹಣ್ಣಿನಲ್ಲಿರುವ ವಿಟಮಿನ್ಸ್‌ಗಳು : ರಕ್ತದೊತ್ತಡ, ರಕ್ತಹೀನತೆ, ಹೃದಯ ಕಾಯಿಲೆಗೆ ಹಲಸಿನ ಹಣ್ಣು ರಾಮ ಬಾಣ
June 24, 2024
2:11 PM
by: The Rural Mirror ಸುದ್ದಿಜಾಲ
ಸಸ್ಯಗಳಿಗೆ ಸಾವಯವ ಗೊಬ್ಬರಗಳು, ಅವುಗಳ ಉಪಯೋಗಗಳು ಮತ್ತು ಅವುಗಳ ಮಹತ್ವದ ಬಗ್ಗೆ ತಿಳಿಯಿರಿ
June 24, 2024
1:55 PM
by: The Rural Mirror ಸುದ್ದಿಜಾಲ
ವಿಶೇಷ ಗಿಡಮೂಲಿಕೆ ಔಷಧಿಗಳನ್ನು ಸಂರಕ್ಷಿಸುವ ಪ್ರಯತ್ನಕ್ಕೆ ಕೈಹಾಕಿದ ಅರಣ್ಯ ಇಲಾಖೆ
June 24, 2024
12:29 PM
by: The Rural Mirror ಸುದ್ದಿಜಾಲ
ವಿದ್ಯುತ್‌ ಲೈನ್‌ ಕ್ಲಿಯರ್‌ಗೆ ಟೊಂಗೆಯ ಬದಲಿಗೆ ಮರವೇ ಢಮಾರ್….!‌ | ಹಸಿರು ಬೇಡುವ ದೇಶದ ಬೇಡಿಕೆ ನಡುವೆ ಇಲಾಖೆಗಳೇ ಹೀಗೆ ಮಾಡಿದರೆ…?
June 24, 2024
12:26 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror