ಎಲ್ಲರೂ ಅರಿಯಲೇ ಬೇಕಾದ ಜೀವನ ಪಾಠ : ಮನಸ್ಸಿದ್ದರೆ ಏನು ಬೇಕಾದರು ಸಾಧಿಸಬಹುದು..

October 19, 2023
3:10 PM

👴ರಂಗಣ್ಣ ಎಂಬ ಅಶಿಕ್ಷಿತ, ಬಡವ ದೇವಸ್ಥಾನವೊಂದರಲ್ಲಿ 🔔ಗಂಟೆ ಹೊಡೆಯುವ ಕೆಲಸಕ್ಕೆ ಸೇರಿಕ್ಕೋಳ್ಳುತ್ತಾನೆ. ಶ್ರದ್ದೆಯಿಂದ ಆ ಕೆಲಸ ಮಾಡುತ್ತಿದ್ದ ಆತ 🔔👴’ಗಂಟೆ ರಂಗಣ್ಣ’ ಎಂದೇ ಜನಪ್ರಿಯನಾಗುತ್ತಾನೆ. ಕಾಲಾಂತರದಲ್ಲಿ ಆ ದೇವಾಲಯ ದೊಡ್ಡ ಕ್ಷೇತ್ರವಾಗಿ ಹೊರರಾಜ್ಯದವರು,ವಿದೇಶಿಗರೆಲ್ಲ ಭೇಟಿನೀಡತೊಡಗಿದರು. ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದ ಕಾರಣ ಆಡಳಿತ ಮಂಡಳಿಯ ಆದಾಯವು ಹೆಚ್ಚತೊಡಗಿತು. ಆಧುನಿಕ ಬದಲಾವಣೆಗಳು ಆದವು.

Advertisement

ಒಂದು ದಿನ ಆಡಳಿತ ಮಂಡಳಿಯವರು 👴ರಂಗಣ್ಣನನ್ನು ಕರೆಸಿ ‘ಆದಷ್ಟು ಬೇಗ ಇಂಗ್ಲಿಷ ಕಲಿತುಕೋ’ ಎಂದರು. ನನಗೆ ಅಕ್ಷರವೇ ಬರೋದಿಲ್ಲ, ಇಂಗ್ಲೀಷ ಹೇಗೆ ಕಲಿಯಲಿ? ಎಂದು ರಂಗಣ್ಣ ಆತಂಕ ವ್ಯಕ್ತಪಡಿಸಿದ. ಹೊರಗಿನ ಭಕ್ತರ ಸಂಖ್ಯೆ ಹೆಚ್ಚುತ್ತರುವದರಿಂದ ದೇವಸ್ತಾನದ ಪ್ರತಿಯೊಬ್ಬರು ಇಂಗ್ಲೀಷ್ ಕಲಿಯಲೇಬೇಕು ಎಂದು ತಾಕೀತು ಮಾಡಿದರು. ರಂಗಣ್ಣ ಅವರಿವರನ್ನು ಹಿಡಿದು 🔡ಇಂಗ್ಲಿಷ್‌ ಕಲಿಯಲು ಯತ್ನಿಸಿದರು ಒಂದಕ್ಷರವು ತಲೆಗೆ ಹತ್ತಲಿಲ್ಲ. ಪರಿಣಾಮ ಅವನನ್ನು ಕೆಲಸದಿಂದ ಕಿತ್ತೊಗೆದರು. ರಂಗಣ್ಣ ದಿಕ್ಕು ಕಾಣದೆ ದೇವಸ್ಥಾನದ ಹೊರಬೀದಿಯಲ್ಲಿ ಚಿಂತಿಸುತ್ತ ಹೊರಟ. ತಲೆ ನೋಯಿಸುತ್ತಿದ್ದುರಿಂದ☕ ಚಹಾ ಕುಡಿಯಬೇಕೆನಿಸಿತು. ಅರ್ಧ ಕಿ.ಮೀ ಬೀದಿಯ ಎರಡು ಕಡೆ ಕಾಣುತ್ತಿದ್ದಿದ್ದು 💐🍒🍇ಹೂವು-ಹಣ್ಣು, ತೆಂಗಿನಕಾಯಿ-ದೇವರ ಫೋಟೊಗಳು ಅಂಗಡಿ. ಎಲ್ಲೂ ಚಹಾ ಸಿಗದಿದ್ದಾಗ “ಅಲ್ಲಿಗೆ ಬರುವ ಲಕ್ಷಾಂತರ ಭಕ್ತರು ಚಹಕ್ಕಾಗಿ ಎಷ್ಟು ಪರದಾಡಬಹುದೆಂದು ವಾಸ್ತವದ ಅರಿವಾಯಿತು”

ಮರುದಿನ ಅದೇ ಓಣಿಯಲ್ಲಿ ಪುಟ್ಟ ☕ಚಹಾ ಅಂಗಡಿ ಪ್ರಾರಂಭಿಸಿದ. ಕ್ರಮೇಣ ಆತನ ಹೆಂಡತಿ ಸಣ್ಣಪುಟ್ಟ ತಿಂಡಿ-ತಿನಿಸು ಮಾಡಿಡತೊಡಗಿದಳು.  🏠ಗೂಡಂಗಡಿ-ಕ್ಯಾಂಟೀನಾಗಿ, ದರ್ಶಿನಿಯಾಗಿ ಮುಂದೆ ಸ್ಟಾರ್ ಹೋಟೆಲ್ಲಾಯಿತು. ಅಷ್ಟಕ್ಕೆ ನಿಲ್ಲಿಸದೇ ಹಲವೆಡೆ
ನಾಲ್ಕಾರು ಪ್ರತ್ಯೇಕ ಹೋಟೆಲ್ಲುಗಳನ್ನು ಪ್ರಾರಂಬಿಸಿ ಕಾಲಾಂತರದಲ್ಲಿ ರಾಜ್ಯದ ಪ್ರಸಿದ್ದ ಹೋಟೆಲ್ ಉದ್ಯಮಿ ಎನಿಸಿಕೊಂಡ ಒಂದು ದಿನ ಹೊರರಾಜ್ಯದ ಉದ್ಯಮಿಯೊಬ್ಬ ತನ್ನ ರಾಜ್ಯದಲ್ಲಿ 🏢ಸ್ಟಾರ್ ಹೋಟೆಲ್ ಪ್ರಾರಂಭಿಸಲು ರಂಗಣನನ್ನು ಪಾಲುದಾರನನ್ನಾಗಿ
ಮಾಡಿಕ್ಕೊಳ್ಳಲು ಬಂದ. ಮಾತುಕತೆ ನಡೆಯಿತು. ರಂಗಣ್ಣ ಒಪ್ಪಿದ. ಒಪ್ಪಂದ ಪತ್ರಕ್ಕೆ ಸಹಿಹಾಕಬೇಕಾಗಿ ಬಂದಾಗ ರಂಗಣ್ಣ ಎಡಗೈ ಹೆಬ್ಬೆಟ್ಟನ್ನು ಮುಂದುಮಾಡಿದ.

ದಿಗ್ಬ್ರಾಂತನಾದ ಎದುರಿನ ವ್ಯಕ್ತಿ ‘ಸಹಿ ಹಾಕುವಷ್ಟು ಇಂಗ್ಲೀಷ ಬರುವದಿಲ್ಲವೇ?’ ಎಂದು ಪ್ರಶ್ನಿಶಿದ. ಕನ್ನಡದಲ್ಲೇ ಬರೆಯಲು ಬಾರದ ತನಗೆ
ಇಂಗ್ಲೀಷ ಎಲ್ಲಿಂದ ಬರಬೇಕು ಎಂದು ರಂಗಣ್ಣ ಸಹಜವಾಗಿ ಉತ್ತರಿಸಿದ. ಆಗ ಎದುರಿನವ ಭಾಷೆಯೇ ಬಾರದೆ ಇಷ್ಟೆಲ್ಲಾ ಸಾಧನೆ ಮಾಡಿದ್ದಿರಿ, ನೀವೆನಾದ್ರೂ ಸರಿಯಾಗಿ ಇಂಗ್ಲೀಷ ಕಲಿತಿದ್ರೆ ದೇಶವನ್ನೆ ಆಳುತ್ತಿದ್ದಿರಿ ಎಂದು ಪ್ರಶಂಸಿಸಿದ. ರಂಗಣ್ಣ ಮೆಲ್ಲಗೆ ನಿಮ್ಮದು ತಪ್ಪು ಕಲ್ಪನೆ. ” ಒಂದೊಮ್ಮೆ ನನಗೆ ಇಂಗ್ಲೀಷ ಬಂದಿದ್ದರೆ 🏯ದೇವಸ್ತಾನದಲ್ಲಿ ಇನ್ನು ಗಂಟೆ 🔔ಬಾರಿಸುತ್ತಲೆ ಇರುತ್ತೀದ್ದೆ..

ಸಂಗ್ರಹ ಕಥೆ

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್
July 7, 2025
11:04 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಪ್ರಣಾಮ್‌ ಎಂ ಪಿ ಮಠದಗದ್ದೆ, ಶೃಂಗೇರಿ
July 7, 2025
10:53 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ನಿರ್ವಿ ಜಿ ಎಂ
July 7, 2025
10:20 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಚಂದನ್‌ ಕೆ ಪಿ
July 5, 2025
11:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group