ದೇಶದ ಸಹಕಾರ ಕ್ಷೇತ್ರದಲ್ಲಿ ಮಹತ್ತರ ಮೈಲಿಗಲ್ಲು : ಸಿಎಂ ಮತ್ತು ಸಂಪದ ಯೋಜನೆಯಡಿ ರೂ.120 ಕೋಟಿ ವೆಚ್ಚ

February 20, 2023
10:42 PM

ಸಿಎಂ ಮತ್ತು ಸಂಪದ ಯೋಜನೆಯಡಿ (ಪಿಎಂಎಂಎಸ್‌ ) ರೂ.120 ಕೋಟಿ ವೆಚ್ಚದಲ್ಲಿ ಮೀನು ಉತ್ಪಾದನೆ, ರಫ್ತು ಸಾಮರ್ಥ್ಯ ವೃದ್ಧಿ ಹಾಗೂ ಉದ್ಯೋಗಗಳ ಸೃಷ್ಟಿಗಾಗಿ 10 ಆಳ ಸಮುದ್ರ ದೋಣಿಗಳಿಗೆ ಅನುಮೋದನೆ ನೀಡಲಾಗಿದೆ.

Advertisement
Advertisement
Advertisement
Advertisement

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಗೆ, ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ವತಿಯಿಂದ ಒಟ್ಟು ಅ೦ದಾಜು ರೂ.250 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕೆ ಬಂದರು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಕಾರವಾರ ಬಂದರಿನಲ್ಲಿ, ಕೇಂದ್ರದ ಸಾಗರಮಾಲಾ ಕರಾವಳಿ ಬರ್ಕ್‌ ಯೋಜನೆಯಡಿ ರೂ.276 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಯೋಜನೆಗಳು ಅನುಷ್ಠಾನದಲ್ಲಿವೆ.

Advertisement

ಮೀನುಗಾರಿಕೆ ದೋಣಿಗಳ ಸುಗಮ ಹಾಗೂ ವೇಗದ ಓಡಾಟಕ್ಕಾಗಿ ರೂ.20 ಕೋಟಿ ವೆಚ್ಚದಲ್ಲಿ 8 ಮೀನುಗಾರಿಕಾ ಬಂದರುಗಳಲ್ಲಿ ಜಲಸಂಚಾರ ಮಾರ್ಗಗಳಲ್ಲಿ ಹೊಳೆತ್ತುವ ಕಾಮಗಾರಿ ಪ್ರಗತಿಯಲ್ಲಿದೆ. ಹಳೆ ಮಂಗಳೂರು ಬಂದರಿನಲ್ಲಿ ಅಂದಾಜು ರೂ.15 ಕೋಟಿ ವೆಚ್ಚದಲ್ಲಿ 150 ಮೀ. ಕರಾವ ಬರ್ಸ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಹಳೆ ಮಂಗಳೂರಿನಲ್ಲಿ ಅಂದಾಜು ರೂ.5 ಕೋಟಿ ವೆಚ್ಚದಲ್ಲಿ, ಲಕ್ಷದ್ವೀಪ ದ್ವೀಪಗಳೊಂದಿಗೆ ಐತಿಹಾಸಿಕ ವ್ಯಾಪಾರ ಒಪ್ಪಂದಗಳನ್ನು ಪುನರುಜ್ಜಿವನಗೊಳಿಸಲು ಪೂರಕ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

Advertisement

ಸಾರ್ವಜನಿಕ ಖಾಸಗಿ ಪಾಲುದಾರಿಕೆಯಡಿ (ಪಿಟಿಐ), ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಂದರಿನಲ್ಲಿ ರೂ.100 ಕೋಟಿ ಹೂಡಿಕೆಯ 5 ದಾಲಪ್ಪ ಎಂಟಿಪಿಎ ಬಂದರು ಅಭಿವೃದ್ಧಿಪಡಿಸಲಾಗುತ್ತಿದೆ. ಹೊನ್ನಾವರ ತಾಲ್ಲೂಕಿನ ಪವಿನಕುರ್ವೆಯಲ್ಲಿ ಸಾರ್ವಜನಿಕ- ಖಾಸಗಿ ಪಾಲುದಾರಿಕೆಯಲ್ಲಿ (ಪಿಪಿಪಿ) ಅಂದಾಜು ರೂ. 2,000 ಕೋಟಿ ವೆಚ್ಚದಲ್ಲಿ 12 ಎಂಟಿಪಿಎ ಆಳೆ ನೀರು ಸರ್ವಋತು ಗ್ರೀನ್‌ ಫೀಲ್ಡ್ ಬಂದರು ಅಭಿವೃದ್ಧಿ, 2021-22ನೇ ಸಾಲಿನಲ್ಲಿ, ಸಮುದ್ರ ಕೊರೆತವನ್ನು ತಡೆಗಟ್ಟುವ ಯೋಜನೆಗಳಿಗೆ ರೂ.35 ಕೋಟಿ ಹಾಗೂ ಸಾಧಾರಣ ಬಂದರುಗಳು, ಒಳನಾಡು ಜಲಸಾರಿಗೆ ಹಾಗೂ ಸಾಗರಮಾಲಾ ಯೋಜನೆಗಳಿಗೆ ರೂ.37.90 ಕೋಟಿ ವೆಚ್ಚ ಮಾಡಲಾಗಿದೆ.

ಸಾಗರಮಾಲಾ ಯೋಜನೆಯಡಿ ಈಗಾಗಲೇ ಒಟ್ಟು ರೂ.48.12 ಕೋಟಿಗಳಿಗೆ ಮಂಜೂರಾತಿ ನೀಡಲಾಗಿದ್ದು, ಯೋಜನೆ ಟೆಂಡರ್ ಮಂಗಳೂರು ಹಳೆ ಬಂದರಿನಲ್ಲಿ ಕ್ಯಾಪಿಟಿ‌ ಡೆಡ್ಡಿಂಗ್ ಹೂಳೆತ್ತುವ ಕಾಮಗಾರಿಗಳಿಗೆ ರೂ.29 ಕೋಟಿ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿದೆ.

Advertisement

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ, ಕರ್ನಾಟಕದ ಕರಾವಳಿ ಭಾಗಗಳಲ್ಲಿ ವಾಸಿಸುತ್ತಿರುವ ಯುವಜನರಿಗಾಗಿ ಉದ್ಯೋಗ ಸೃಷ್ಟಿಸಲು ಮತ್ತು ಕೈಗಾರಿಕೆಗೆ ಬೇಕಾದಂತಹ ಕೌಶಲ್ಯಗಳನ್ನು ಒದಗಿಸಲು ಅಂದಾಜು ರೂ.30.5 ಕೋಟಿ ವೆಚ್ಚದಲ್ಲಿ ಕಡಲು ಸಂಬಂಧಿತ ತರಬೇತಿ ಸಂಸ್ಥೆ ಸ್ಥಾಪನೆ. ಚಂಡಮಾರುತದಿಂದಾಗಿ ಉಂಟಾಗುವ ಹಾನಿಯನ್ನು ತಡೆಗಟ್ಟುವ ಸಲುವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ವಿಶ್ವ ಬ್ಯಾಂಕ್‌ ನೆರವಿನೊಂದಿಗೆ ರಾಷ್ಟ್ರೀಯ ಚಂಡಮಾರುತ ಆಪಾಯ ಉಪಶಮನ ಯೋಜನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಕರ್ನಾಟಕದಲ್ಲಿ ಈ ಯೋಜನೆಯನ್ನು ಚಂಡಮಾರುತಕ್ಕೆ ತುತ್ತಾಗಿರುವಂತಹ ರಾಜ್ಯದ 3 ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮಂಗಳೂರಿನ ಗಂಜಿಮಠದಲ್ಲಿ ರೂ. 62.77 ಕೋಟ ಮೊತ್ತದಲ್ಲಿ ಉಪ್ಪಿನ ಪಾರ್ಕ್ ನಿರ್ಮಿಸಲು ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.

Advertisement

.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror