Advertisement
MIRROR FOCUS

#Agriculture | ಭತ್ತದ ಬೇಸಾಯದಲ್ಲಿ ಅಮೋಘ ಸಾಧನೆ | ಆದಾಯಕ್ಕೆ ದಾರಿ ತೋರಿಸಿ ಕೃಷಿಕರ ಬದುಕಿಗೆ ಆಶಾಕಿರಣವಾದ ಹೊನ್ನವಳ್ಳಿ ರಮೇಶ್ |

Share

ದಿನೇ ದಿನೇ ಭತ್ತದ ಬೇಸಾಯ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹೊಲ-ಗದ್ದೆಗಳೆಲ್ಲ ಅಡಿಕೆ ತೋಟವಾಗಿ ಪರಿವರ್ತನೆ ಗೊಂಡಿದ್ದೇ ಹೆಚ್ಚು. ಆದರೆ ಶೃಂಗೇರಿಯ  ಕೃಷಿಕರೊಬ್ಬರು ಅನೇಕ ರೈತರ ಬದುಕಿಗೆ ಮುನ್ನುಡಿ ಬರೆದಿದ್ದಾರೆ.  ಶೃಂಗೇರಿ ತಾಲೂಕಿನ ಹೊನ್ನವಳ್ಳಿ ಗ್ರಾಮದ ಪ್ರಗತಿಪರ ಕೃಷಿಕರಾದ, ರಮೇಶ್ ಹೊನ್ನಳ್ಳಿ ಹಾಗೂ ಅವರ ತಂಡ ಈ ವರ್ಷ ಸಾಮೂಹಿಕವಾಗಿ ರೈತರೆಲ್ಲ ಒಟ್ಟುಗೂಡಿ 110 ಎಕರೆ ಗದ್ದೆ ಬೇಸಾಯವನ್ನು ಮಾಡಿದ್ದಾರೆ.

Advertisement
Advertisement

ರಮೇಶ್ ಹಾಗೂ ಅವರ ತಂಡ ಇವತ್ತಿನ ಕಾಲದಲ್ಲಿ ಗದ್ದೆ ಕೃಷಿಯಲ್ಲಿ ಇಂತಹ ಒಂದು ಸಾಹಸಕ್ಕೆ ಕೈ ಹಾಕಿರುವುದೇ ವಿಶೇಷ.  ಭತ್ತದ ಕೃಷಿಗೆ  ಪ್ರಾಣಿ ಪಕ್ಷಿಗಳ ಕಾಟದಿಂದ, ಕೂಲಿ ಆಳುಗಳ ಸಮಸ್ಯೆಯಿಂದ, ಹವಾಮಾನ ವೈಪರಿತ್ಯದಿಂದ, ಸರಿಯಾದ ಬೆಲೆ ಇಲ್ಲದೆ ಇರುವುದರಿಂದ, ಬೆಳೆದ ಭತ್ತಕ್ಕೆ ಹಂತ ಹಂತವಾಗಿ ಇಂತಹ ಅನೇಕ ಸಮಸ್ಯೆಗಳಿಂದ ಮಲೆನಾಡಿನಲ್ಲಿ ಭತ್ತದ ಕೃಷಿ ಇಳಿಮುಖವಾಗ ತೊಡಗಿತು. ಒಂದು ಕಡೆ ಅಡಿಕೆಗೆ ಹಳದಿ ಎಲೆ ರೋಗ ಬಂದಿದ್ದರಿಂದ ಮುಂದೇನು ಎಂಬ ಅನೇಕ ಸಮಸ್ಯೆಗಳು ಎದುರಾದಾಗ, ಒಂದು ಕಡೆ ಜೀವನಕ್ಕಾಗಿ ಹೊರ ಹೋಗುವ ಪರಿಸ್ಥಿತಿ, ಇನ್ನೊಂದು ಕಡೆ ಕೃಷಿಯನ್ನು ನಂಬಿದಂತಹ ರೈತರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದರು. ಇಂತಹ ಪರಿಸ್ಥಿತಿಗಳ ನಡುವೆ ತನ್ನ ತಾಲೂಕಿನ ಕೃಷಿಕರನ್ನೆಲ್ಲ ಒಟ್ಟುಗೂಡಿಸಿ ಅವರಲ್ಲಿ ಒಂದು ಧೈರ್ಯ ತುಂಬಿ ಎಲ್ಲರೂ ಒಟ್ಟುಗೂಡಿ ಮಿಷನ್ ಗಳ ಮುಖಾಂತರ ಗದ್ದೆಸಾಗುವಳಿ ಮಾಡೋಣ ಎಂದು ಹೊರಟು ಯಶಸ್ವಿಯಾದವರು ಹೊನ್ನವಳ್ಳಿ ರಮೇಶ್ ಹಾಗೂ ಅವರ ತಂಡ.

Advertisement

ನಿಜಕ್ಕೂ ದೇಶಕ್ಕೆ ಮಾದರಿ ಎಂದರೆ ತಪ್ಪಾಗಲಾರದು. ಇವರ ಈ ಕೆಲಸಕ್ಕೆ ಸಹಕಾರವಾಗಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಬಾಡಿಗೆಗೆ ಸಿಗುವ ಗದ್ದೆ ನಾಟಿ ಮಾಡುವ ಯಂತ್ರ. ನಾಟಿ ಕೊಯ್ಲು ಎಲ್ಲವನ್ನು ಸಂಪೂರ್ಣ ಮಿಷನ್ ನಲ್ಲಿ ಮಾಡಿ ಯಶಸ್ವಿಯಾಗಿದ್ದಾರೆ. 2019-20ರಲ್ಲಿ ಇವರ ತಂಡ 10 ಎಕರೆ ಗದ್ದೆ ಸಾಗುವಳಿ ಮಾಡಿ ಯಶಸ್ವಿಯಾಗಿದ್ದರು. ಇದನ್ನು ನೋಡಿ ಊರಿನ ಉಳಿದ ರೈತರಿಗೂ ಒಂದು ಧೈರ್ಯ ಬಂದಿತು. ಸುಮಾರು 15ರಿಂದ 20 ಕೃಷಿಕರ ಕುಟುಂಬ ಒಟ್ಟಾಗಿ ಇಂದು 110 ಎಕರೆ ಗದ್ದೆ ಸಾಗುವಳಿಯನ್ನು ಮಾಡಿದ್ದಾರೆ. ಇದು ನಿಜಕ್ಕೂ  ಉಳಿದವರಿಗೆ ಮಾದರಿ.

 

Advertisement

ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲಿ ಇಂತಹ ಸಾಮೂಹಿಕವಾಗಿ ಕೃಷಿಯನ್ನು ಮಾಡಿದರೆ ಮಾತ್ರ ಎಲ್ಲರಿಗೂ ಅನುಕೂಲ. ಇವತ್ತು ಎಲ್ಲರ ಮನೆಯಲ್ಲಿಯೂ ಇರುವುದೇ ಒಂದಿಬ್ಬರು. ನಮ್ಮ ತಲತಲಾಂತರದಿಂದ ಬಂದಂತಹ ಕೃಷಿಯನ್ನು ಉಳಿಸಿಕೊಂಡು ಹೋಗಲು ಇದು ಒಂದೇ ಪರಿಹಾರ ಒಟ್ಟುಗೂಡಿ ಕೃಷಿಯನ್ನು ಮಾಡುವುದು ಹಾಗೂ ಮಿಷನರಿಗಳನ್ನು ಬಳಸಿಕೊಳ್ಳುವುದು ಎಂದು ಹೊನ್ನವಳ್ಳಿ ರಮೇಶ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಹಾಗೆ  ನಮ್ಮ ಈ ಕೃಷಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದವರು ತುಂಬಾನೇ ಸಹಕಾರ ನೀಡಿದ್ದಾರೆ ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು. ಇನ್ನೊಂದು ಸಂತೋಷದ ವಿಚಾರವೇನೆಂದರೆ ನಮ್ಮ ಟೀಮಲ್ಲಿ 80 ವರ್ಷ ವಯಸ್ಸಾದಂತವರು ಹಿರಿಯರು ಕೂಡ ನಮ್ಮ ಜೊತೆ ಸೇರಿ ತನ್ನ ಗೆದ್ದ ಸಾಗುವಳಿಯನ್ನು ಮಾಡಿದ್ದಾರೆ. ಸಂಪೂರ್ಣ ಮಿಷನ್ ಗಳಿಂದ ಗದ್ದೆ ಸಾಗುವಳಿ ಮಾಡುತ್ತಿದ್ದೇವೆ.

ನಮಗೆ ಒಟ್ಟು ಗದ್ದೆ ಬೇಸಾಯ ದಲ್ಲಿ ಸಂಪೂರ್ಣ ಖರ್ಚು ಹೋಗಿ ಉತ್ಪತ್ತಿಯಲ್ಲಿ 40 ರಿಂದ 50 ಪರ್ಸೆಂಟ್ ಆದಾಯ ಉಳಿಯುತ್ತಿದೆ. ನಮ್ಮ ಈ ಕೃಷಿಯನ್ನು ನೋಡಿ ತುಂಬಾ ಜನ ರೈತರು ಬಂದು ನೋಡಿಕೊಂಡು ಹೋಗಿ, ಮರಳಿ ಗದ್ದೆ ಕೃಷಿಯನ್ನು ಈ ವರ್ಷ ಮಾಡುತ್ತಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹೇಳಿದರು. ಇವತ್ತು ಶೃಂಗೇರಿಯ ಹೊನ್ನವಳ್ಳಿ ಗ್ರಾಮ ಭತ್ತದ ಬೇಸಾಯದಲ್ಲಿ ಮಾದರಿ ಗ್ರಾಮವಾಗಿ ಹೊರಹೊಮ್ಮಿದೆ. ರೈತರು ಯಶಸ್ವಿ ಕಂಡಿದ್ದಾರೆ.

Advertisement

ಸಂಪರ್ಕ : ರಮೇಶ್ ಹೊನ್ನವಳ್ಳಿ 9449651966

ಬರಹ :
ಭರತ್ ರಾಜ್ ಕೆರೆಮನೆ, ಶೃಂಗೇರಿ
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಳೆ ಸುರಿಯುತ್ತಿದ್ದಂತೆ ರಾಜ್ಯದಲ್ಲಿ ಡೆಂಘೀ ಭೀತಿ : ಮುಂಜಾಗ್ರತಾ ಕ್ರಮಕ್ಕೆ ಮುಂದಾದ ರಾಜ್ಯ ಆರೋಗ್ಯ ಇಲಾಖೆ

ಮುಂಗಾರು ಮಳೆ(Manson) ಆರಂಭವಾಗುತ್ತಿದ್ದಂತೆ ಸಾಂಕ್ರಮಿಕ ರೋಗಗಳು(Infectious disease) ಆರಂಭವಾಗುವುದು ಮಾಮೂಲು. ಅದರಲ್ಲೂ ಮಳೆ(Rain)…

6 hours ago

ನಮ್ಮ ಪ್ರಧಾನಿಯ ಆಸ್ತಿ ಎಷ್ಟು ಗೊತ್ತಾ..? ಅವರಿಗೆ ಜಮೀನಿಲ್ಲ, ಕಾರಿಲ್ಲ, ಸ್ವಂತ ಮನೆಯೂ ಇಲ್ಲ : ಬರೀ 3.02ಕೋಟಿ ಚರಾಸ್ತಿ

ಪ್ರಧಾನಿ ಮೋದಿ(PM Modi) ಬೇರೆ ಬೇರೆ ವಿಚಾರದಲ್ಲಿ ಉಳಿದ ರಾಜಕಾರಣಿಗಳಿಗಿಂತ(Politician) ಭಿನ್ನ. ಈ…

6 hours ago

ಇಂದು ಅಂತಾರಾಷ್ಟ್ರೀಯ ಕುಟುಂಬ ದಿನ : ಅಂದಿನ ಕೂಡು ಕುಟುಂಬ ಇಂದಿನ ವಿಭಕ್ತ ಕುಟುಂಬ

ನಮ್ಮ ದೇಶದಲ್ಲಿ ವಸುದೈವ ಕುಟುಂಬಕಂ ಎಂಬ ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ(World)…

7 hours ago

ಸಿಎಎ ಅಡಿಯಲ್ಲಿ 14 ಜನರಿಗೆ ಮೊದಲ ಬಾರಿಗೆ ಪೌರತ್ವ : 14 ಮಂದಿಗೆ ಭಾರತೀಯ ಪೌರತ್ವ ಪ್ರಮಾಣ ಪತ್ರ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಗೃಹ ಸಚಿವಾಲಯವು(Union Home Ministry) ಸಿಎಎ(CAA) ಅಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳ ಮೊದಲ…

7 hours ago

ಗ್ರಾಹಕನಿಗೆ ಶಾಕ್‌ ಕೊಟ್ಟ ವಿದ್ಯುತ್‌ ಇಲಾಖೆ : ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ ಕಂಡು ವ್ಯಕ್ತಿ ಕಂಗಾಲು

ಉಚಿತ ಉಚಿತ ಉಚಿತ(Free).. ರಾಜ್ಯದ ಪ್ರತೀ ಮನೆಗೂ ವಿದ್ಯುತ್‌ ಉಚಿತ(Free Current). ಇಂಥ…

10 hours ago

ಮಲೆನಾಡ ಗಿಡ್ಡ ಗೋತಳಿಗಳನ್ನು ಉಳಿಸಿ ಸಂವರ್ಧಿಸಬೇಕು ಏಕೆ..?

ಮಲೆನಾಡಗಿಡ್ಡ ಹಸುಗಳು ಬಹಳ ಮಹತ್ವದ ಅಂಶಗಳನ್ನು ಹೊಂದಿವೆ. ಅಂತಹ ವಿಶೇಷತೆಗಳ ಕಾರಣದಿಂದಲೇ ಈ…

15 hours ago